ಜಮ್ಮು-ಕಾಶ್ಮೀರದಲ್ಲಿ ಉಗ್ರರ ನಿಗ್ರಹಕ್ಕೆ ಸೇನೆ ಎಂತಹ ಯೋಜನೆ ರೂಪಿಸಿದೆ ಗೊತ್ತಾ?
ಜಮ್ಮು-ಕಾಶ್ಮೀರ ಎಂದರೇನೆ ಹಾಗೆ. ಅಲ್ಲಿ ಯಾವಾಗ ಯಾವ ಉಗ್ರರು ದಾಳಿ ಮಾಡುತ್ತಾರೋ, ಗುಂಡಿನ ಸುರಿಮಳೆಗೈಯುತ್ತಾರೋ ಗೊತ್ತಾಗುವುದಿಲ್ಲ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಣಿವೆ ರಾಜ್ಯದಲ್ಲಿ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ. ಇತ್ತೀಚೆಗೆ ಬರ್ಹಾನ್ ವಾನಿ ಸಹಚರರೆಲ್ಲರನ್ನೂ ಕೊಂದ ಶ್ರೇಯಸ್ಸು ಭಾರತೀಯ ಸೈನ್ಯಕ್ಕೇ ಸಲ್ಲಬೇಕು.
ಆದರೆ ಹೀಗೆ, ಉಗ್ರರನ್ನು ಹುಡುಕಿ ಹುಡುಕಿ ಏನೋ ಕೊಲ್ಲಲಾಗುತ್ತಿದೆಯಾದರೂ, ಉಗ್ರರನ್ನು ಸಂಪೂರ್ಣವಾಗಿ ನಿಗ್ರಹ ಮಾಡಲಾಗುತ್ತಿಲ್ಲ. ಕಳೆದ ಏಳು ತಿಂಗಳಲ್ಲಿ ಕಾಶ್ಮೀರದಲ್ಲಿ 70 ಉಗ್ರರ ಹತ್ಯೆ ಮಾಡಿದರೂ ಇಂದಿಗೂ ಉಗ್ರರು ದಾಳಿ ಮಾಡುತ್ತಲೇ ಇದ್ದಾರೆ.
ಆದರೆ ಉಗ್ರರು ಚಾಪೆ ಕೆಳಗೆ ನೂಕಿದರೆ, ಭಾರತೀಯ ಸೈನ್ಯ ರಂಗೋಲಿ ಕೆಳಗಡೆಯೇ ನುಗ್ಗಲು ಅಣಿಯಾಗಿದೆ. ಹೌದು, ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ನಿಗ್ರಹ ಮಾಡಲು ಭಾರತೀಯ ಸೈನ್ಯ ನೂತನ ಯೋಜನೆ ರೂಪಿಸಿದ್ದು, ಉಗ್ರರನ್ನು ಕೊಲ್ಲುವ ಬದಲು ಜೀವಂತವಾಗಿ ಹಿಡಿಯಲು ಮುಂದಾಗಿದೆ.
ಯಾವುದೇ ಉಗ್ರರನ್ನು ಹತ್ಯೆ ಮಾಡುವುದರಿಂದ ಅವರ ಜೀವ ಹೋಗುತ್ತದೆಯೇ ವಿನಾ, ಅವರು ಎಷ್ಟು ಉಗ್ರರನ್ನು ನೇಮಿಸಿದ್ದಾರೆ, ಆ ಉಗ್ರ ತನ್ನ ಕುಟುಂಬದವರನ್ನೂ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದಾನಾ, ಉಗ್ರರ ಮುಂದಿನ ದಾಳಿ ಕುರಿತ ಯೋಜನೆ ಯಾವುದು ಎಂಬುದರ ಕುರಿತು ಪತ್ತೆ ಹಚ್ಚಲು ಭಾರತೀಯ ಸೇನೆ ಈ ಯೋಜನೆ ರೂಪಿಸಿದೆ.
ಹಾಗಾಗಿ, ಉಗ್ರರು ಅಡಗಿರುವ ಸೇನಾನೆಲೆಯನ್ನು ಪತ್ತೆ ಹಚ್ಚಿ, ಎಷ್ಟು ಸಾಧ್ಯವೋ ಅಷ್ಟು ಸಾಧ್ಯವಾದಷ್ಟು ಉಗ್ರರನ್ನು ಜೀವಂತವಾಗಿ ಹಿಡಿಯುವುದು ಸೇನೆಯ ಮುಂದಿನ ಯೋಜನೆಯಾಗಿದೆ, ಹೀಗೆ ಸೆರೆಸಿಕ್ಕ ಉಗ್ರರನ್ನು ಹಿಡಿದು ತಂದು, ಅವರಿಗೆ ಚಿತ್ರಹಿಂಸೆ ನೀಡಿ ಬಾಯಿಬಿಡಿಸುವ ಯೋಜನೆಯನ್ನು ಸೇನೆ ಹಾಕಿಕೊಂಡಿದೆ.
Leave A Reply