ನರೇಂದ್ರ ಮೋದಿ ಅವರ ಆ ಮುಂದಾಲೋಚನೆಗೆ ಮನಸೋತ ಅಖಿಲೇಶ್ ಯಾದವ್!
ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೆ ಹಾಗೆ. ಅವರು ಯಾರ ಮೇಲೆ ಬೇಕಾದರೂ ಪ್ರಭಾವ ಬೀರಬಹುದು. ಯಾರೂ ತಮ್ಮನ್ನು ಬೆಂಬಲಿಸುವಂತೆ ಮಾಡಬಲ್ಲರು. ವಿಶ್ವದ ನಾಯಕರೇ ತಮ್ಮ ಅಭಿಪ್ರಾಯಕ್ಕೆ ಮನ್ನ ನೀಡುವಂತೆ ಮಾಡಬಲ್ಲರು. ಅಂತಹ ಚಾರ್ಮ್ ಮೋದಿ ಅವರಿಗೆ ಸಿದ್ಧಿಸಿದ ಕಾರಣದಿಂದಲೇ ದೇಶದಲ್ಲಿ ಮೋದಿ ಅಲೆ ಇದೆ ಹಾಗೂ ಅದು ಎಲ್ಲ ಚುನಾವಣೆಗಳಲ್ಲೂ ಸಾಬೀತಾಗಿದೆ.
ಇಂತಹ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಮತ್ತೊಬ್ಬರ ಮೇಲೆ ಪ್ರಭಾವ ಬೀರಿದ್ದು, ತಮ್ಮ ಕನಸಿನ ಯೋಜನೆಯಾದ ಒಂದು ದೇಶ, ಒಂದು ಚುನಾವಣೆಗೆ ಸಮಾಜವಾದಿ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬೆಂಬಲ ಸೂಚಿಸುವಂತೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅಖಿಲೇಶ್ ಯಾದವ್, ನರೇಂದ್ರ ಮೋದಿ ಅವರ ಒಂದು ಚುನಾವಣೆ, ಒಂದು ದೇಶ ಯೋಜನೆಗೆ ನನ್ನದೂ ಬೆಂಬಲವಿದೆ. ಈ ಯೋಜನೆ ಜಾರಿಯಾಗಲು ಯಾವುದೇ ಅಭ್ಯಂತರವಿಲ್ಲ ಎಂದು ಘೋಷಿಸಿದ್ದಾರೆ.
ಒಂದು ದೇಶ ಒಂದು ಚುನಾವಣೆಗೆ ಬೆಂಬಲವಿದ್ದು, ಕೇಂದ್ರ ಸರ್ಕಾರ 2019ರ ಲೋಕಸಭೆ ಚುನಾವಣೆ ವೇಳಗೆ ದೇಶದ ಎಲ್ಲ ವಿಧಾನಸಭೆ ಚುನಾವಣೆ ನಡೆಸಿರಿ. ಈ ಪ್ರಕ್ರಿಯೆಯಲ್ಲಿ ನರೇಂದ್ರ ಮೋದಿ ಅವರನ್ನು ನಾವು ಬೆಂಬಲಿಸುತ್ತೇವೆ ಎಂದು ಅಖಿಲೇಶ್ ಯಾದವ್ ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೂ ಸಹ ಒಂದು ದೇಶ ಒಂದು ಚುನಾವಣೆ ಪ್ರಕ್ರಿಯೆ ಬೆಂಬಲಿಸಿ ಮಾತನಾಡಿದ್ದರು. ಈಗ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಸಹ ಬೆಂಬಲ ನೀಡಿದ್ದಾರೆ.
Leave A Reply