ನನಗೆ ರಾಹುಲ್ ಗಾಂಧಿ ಮುಖ ಕಂಡರೇನೇ ಆಗುವುದಿಲ್ಲ ಎಂದು ಹೇಳಿದ್ದು ಯಾರು ಗೊತ್ತಾ?
ಡೆಹ್ರಾಡೂನ್: ರಾಹುಲ್ ಗಾಂಧಿ! ಈ ಹೆಸರು ಕಾಂಗ್ರೆಸ್ ಮುಖಂಡರಿಗೆ ವಿನೀತ ಭಾವ ಮೂಡಿಸುತ್ತದೆ. ಇವರೇ ನಮ್ಮ ನಾಯಕ ಎಂದು ಬೀಗುವಂತೆ ಮಾಡುತ್ತದೆ. ಆದರೆ ಬೇರೆಯವರಿಗೆ ಮಾತ್ರ ರಾಹುಲ್ ಗಾಂಧಿ ಮಾತಿಗೆ ನಿಂತರೆ ನಗು ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಂತೂ ರಾಹುಲ್ ಗಾಂಧಿಯವರನ್ನು ಟ್ರೋಲ್ ಮಾಡುವವರ ಸಂಖ್ಯೆ ಅಪಾರವಾಗಿದೆ. ದೃಶ್ಯಮಾಧ್ಯಮಗಳೂ ಅವರ ಹೇಳಿಕೆಗಳನ್ನು ಹಾಸ್ಯವಾಗಿ ತೋರಿಸುತ್ತವೆ.
ಇಂತಹ ರಾಹುಲ್ ಗಾಂಧಿಯವರು ಈಗಾಗಲೇ ಲೋಕಸಭೆ ಚುನಾವಣೆಗೆ ಸಿದ್ಧರಾಗಿದ್ದಾರೆ. ತಮ್ಮ ನೇತೃತ್ವದಲ್ಲಿ ಯುಪಿಎ ಚುನಾವಣೆ ನಡೆದು, ಗೆಲ್ಲುವ ಮೂಲಕ ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಅವರು ತಾವೇ ಮುಂದಿನ ಪ್ರಧಾನಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಸಹ.
ಆದರೆ ಇಂತಹ ಮುಖಂಡ ರಾಹುಲ್ ಗಾಂಧಿಯವರ ಮುಖ ಎಂದರೇನೆ ನನಗೆ ಇಷ್ಟವಿಲ್ಲ ಎಂದು ಅಂತಾರಾಷ್ಟ್ರೀಯ ಗಾಯತ್ರಿ ಪರಿವಾರ ಹಿಂದೂ ಸಂಘಟನೆಯ ಮುಖಂಡ ಪ್ರಣವ್ ಪಾಂಡ್ಯ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಮುಖ ನೋಡಲು ನಾವು ಬಯಸುವುದಿಲ್ಲ ಎಂದಿದ್ದಾರೆ.
ನಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ನಾಯಕರೆಂದು ಒಪ್ಪುತ್ತೇವೆಯೇ ಹೊರತು, ರಾಹುಲ್ ಗಾಂಧಿಯವರನ್ನು ಒಪ್ಪುವುದಿಲ್ಲ. ನಾವು ಅವರ ಮುಖವನ್ನು ನೋಡಲು ಇಷ್ಟಪಡುವುದಿಲ್ಲ. ಅವರು ಬೇಕಾದರೆ ಭೇಟಿಯಾಗಲು ನಮ್ಮ ಬಳಿ ಬರಬಹುದು ಎಂದು ತಿಳಿಸಿದ್ದಾರೆ.
ಈಗಾಗಲೇ ಪ್ರಣವ್ ಪಾಂಡೆ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಆರೆಸ್ಸೆಸ್ ಮುಖಂಡರನ್ನೂ ಪಾಂಡೆ ಭೇಟಿಯಾಗಿ ಚರ್ಚಿಸಿದ್ದಾರೆ. ಆದಾಗ್ಯೂ ಅಮಿತ್ ಶಾ ಅವರು ಪ್ರಣವ್ ಪಾಂಡೆ ಸೇರಿ ಹಲವು ಹಿಂದೂ ಸಂಘಟನೆಗಳ ಮುಖಂಡರನ್ನು ಭೇಟಿಯಾಗಿದ್ದಾರೆ.
Leave A Reply