ನಿಖಾ ಹಲಾಲ್, ಬಹುಪತ್ನಿತ್ವಕ್ಕೆ ಬ್ರೇಕ್ ಹಾಕುವ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಬೆಂಬಲ
ದೆಹಲಿ: ಅಸಂವಿಧಾನಿಕ ಪದ್ಧತಿಗಳಿಗೆ ಕೊನೆ ಹಾಡಲು ಸಿದ್ಧವಾಗಿರುವ ಕೇಂದ್ರ ಸರ್ಕಾರ ಇತ್ತೀಚೆಗೆ ಮುಸ್ಲಿಂ ಧರ್ಮದಲ್ಲಿದ್ದ ತ್ರಿವಳಿ ತಲಾಖ್ ಪದ್ಧತಿ ನಿಷೇಧಕ್ಕೆ ಮುಂದಾಗಿ, ನಿಯಮ ರೂಪಿಸಿತ್ತು. ಇದೀಗ ಅದೇ ನಿಟ್ಟಿನಲ್ಲಿ ಮತ್ತೊಂದು ದೃಢ ನಿರ್ಧಾರ ಕೈಗೊಂಡಿದ್ದು ಮುಸ್ಲಿಂ ಧರ್ಮದಲ್ಲಿರುವ ಬಹುಪತ್ನಿತ್ವ ಮತ್ತು ನಿಖಾ ಹಲಾಲ್ ನಿಯಮಗಳ ವಿರುದ್ಧ ಅರ್ಜಿ ಸಲ್ಲಿಸಿರುವವರ ಬೆಂಬಲಕ್ಕೆ ಕೇಂದ್ರ ಸರ್ಕಾರ ನಿಂತಿದೆ. ಈ ಮೂಲಕ ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಮುಂದಾಗಿದೆ.
ತ್ರಿವಳಿ ತಲಾಖ್ ವಿರುದ್ಧ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ಅನಿಷ್ಠ ಪದ್ಧತಿಯನ್ನು ನಿಷೇಧಕ್ಕೆ ಕಾನೂನು ಜಾರಿಗೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತುಲ ಇದೀಗ ಬಹುಪತ್ನಿತ್ವ ಹಾಗೂ ನಿಖಾ ಹಲಾಲ್ ಪ್ರಶ್ನಿಸಿ ಅರ್ಜಿ ಸಲ್ಲಿಸುವವರಿಗೆ ಬೆಂಬಲ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯೊಂದಿಗೆ ಮತ್ತೊಮ್ಮೆ ಒಂದಾಗಬೇಕೆಂದು ಇಚ್ಛಸಿದಲ್ಲಿ, ಮತ್ತೊಬ್ಬನನ್ನು ವಿವಾಹವಾಗಿ, ಆತನೊಂದಿಗೆ ದೈಹಿಕವಾಗಿ ಕೂಡಿ, ವಿಚ್ಛೇದನ ಪಡೆದ ನಂತರ ಸೇರಬಹುದು ಎಂದು ಹೇಳುವ ನಿಖಾ ಹಲಾಲ್ ನಿಯಮದ ಕುರಿತು ಹಲವು ವಿವಾದಗಳಿವೆ. ಈ ಕುರಿತು ಮುಸ್ಲಿಂ ಮೌಲ್ವಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಹಿಳಾ ಕಾರ್ಯಕರ್ತರು ನಿಖಾ ಹಲಾಲ್ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳನ್ನು ಆಲಿಸುವುದಾಗಿ ಹೇಳಿದ್ದ ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಹಾಗೂ ಕಾನೂನು ಇಲಾಖೆಗೆ ನೋಟಿಸ್ ನೀಡಿದೆ.
Leave A Reply