ಮಂಗಳೂರಿನ ಭಾರತ್ ಮಾಲ್ ನಲ್ಲಿ ಜುಲೈ 21 ಮತ್ತು 22 ರಂದು ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ!
ಇದೇ ಬರುವ ಜುಲೈ 21 ಮತ್ತು 22 ತಾರೀಕಿನಂದು ಮಂಗಳೂರಿನ ಭಾರತ್ ಮಾಲ್ ನಲ್ಲಿ ಪುಜಲಾನಾ ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ ನಡೆಯಲಿದೆ.ಹೈದರಾಬಾದಿನ ಪುಜಲಾನಾ ಗ್ರೂಪ್,ಲೋಟಸ್ ಚಾಕಲೇಟ್ಸ್, ಪೈ ಸ್ವೀಟ್ಸ್ ಪ್ರಾಯೋಜಕತ್ವದಲ್ಲಿ ನಡೆಯುವ ಈ ಪಂದ್ಯಾಟಕ್ಕೆ ಯಜಮಾನ ಗ್ರೂಪ್, ಫಿನ್ ಪವರ್ ಮತ್ತು ಹನುಮಾನ್ ಸೆಕ್ಯುರಿಟಿ ಸರ್ವಿಸಸ್ ಸಹಪ್ರಾಯೋಜಕತ್ವ ಮಾಡಿದೆ.ಪೋ ಕಬಡ್ಡಿ ತಂಡದ ಆಟಗಾರರಾಗಿರುವ ಸಚಿನ್ ಸುವರ್ಣ ಹಾಗೂ ಪ್ರಶಾಂತ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದು ಪಂದ್ಯಾಟಕ್ಕೆ ತಾರಾ ಮೆರುಗು ನೀಡಲಿದ್ದಾರೆ.
ವೀಕ್ಷಕರಿಗಾಗಿ ಖಾದ್ಯ ವೈವಿದ್ಯ
ಪಂದ್ಯಾಟದ ಉದ್ದಕ್ಕೂ ವೀಕ್ಷಕರಿಗಾಗಿ ಉಚಿತ ಆಹಾರ , ಪಾನೀಯ ವ್ಯವಸ್ಥೆ ಮಾಡಲಾಗಿದ್ದು ಜಿ.ಎಸ್.ಬಿ ಸ್ಪೆಶಲ್ ಆಳ್ವತಿ, ಕೀರ್ಲು ನೀಳಿ ಸುಕ್ಕೆ, ತೈಕಿಳೆ ಅಂಬಡೊ,ಬಲ್ಯಾರ್ ಚಟ್ನಿ, ಸಾಲ್ಲಾ ಉಪ್ಕರಿ, ಚಿಟ್ಟೆ ಪಾನ್ನಾ ಪೋಡಿ ಹಾಗೂ ಕಾಮತ್ ಕೆಟರರ್ಸ್ ಸೆಟ್ ದೋಸಾ, ಕಾರ್ಸ್ಟ್ರೀಟ್ ಬಳ್ಲಿ ಪೋಡಿ, ಬಿಜೈ ಶೈಲೇಶ್ ಮ್ಯಾಗಿ ಇತ್ಯಾದಿ ಮಳೆಗಾಲದ ತಿಂಡಿ ತಿನಿಸು ವಿಶೇಷ ಆಕರ್ಷಣೆ.
ಉಚಿತ ಪಾಸ್
ಜಿ.ಎಸ್.ಬಿ ಸಮುದಾಯದ ಪಂದ್ಯಾಟಕ್ಕೆ ಸಮಾಜ ಬಾಂಧವರಿಗೆ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದ್ದು ಮಂಗಳೂರಿನ ವಿವೇಕ್ ಟ್ರೇಡರ್ಸ್ ವಿ.ಟಿ ರಸ್ತೆ, ಆಕ್ರತಿ ಡಿಜಿಟಲ್ಸ್ ಕೊಟ್ಟಾರ, ಶ್ರೀಮಹಾಮಾಯಾ ಟ್ರೇಡರ್ಸ್ ಮಣ್ಣಗುಡ್ಡೆ, ಯುನೈಟೆಡ್ ಟೆಲಿಕಮ್ಯುನಿಕೇಶನ್ ಬಲ್ಮಠದಲ್ಲಿ ವಿತರಿಸಲಾಗುತ್ತಿದೆ.ಹೆಚ್ಚಿನ ಮಾಹಿತಿಗಾಗಿ 9964586017 ಅಥವಾ 9141907907 ಸಂಪರ್ಕಿಸುವಂತೆ ಕೋರಲಾಗಿದೆ.
Leave A Reply