ಹಿಂದೂ ಮುಖಂಡನ ಮೇಲೆ ಠಾಣೆಯಲ್ಲಿ ಹಲ್ಲೆಯತ್ನ, ಪೊಲೀಸರಿಂದ ಶಾಸಕರಿಗೆ ಅವಮಾನ: ಶಾಸಕರಿಂದ ಚಾರ್ಜ್!
Posted On September 13, 2018
ಮಂಗಳೂರು; ಇಂಟಕ್ ಮುಖಂಡನಿಗೆ ಕರೆ ಮಾಡಿದ ಹಿಂದೂ ಸಂಘಟನೆ ಮುಖಂಡನನನ್ನು ಠಾಣೆಗೆ ಕರೆಯಿಸಿ ಕದ್ರಿ ಪೊಲೀಸರು ಎಡವಟ್ಟು ಮಾಡಿದ್ದಾರೆ. ಮುಖಂಡನನ್ನು ಕರೆಸಿ ಹಲ್ಲೆ ಯತ್ನ ನಡೆಸಿದ ಕುರಿತು ಶಾಸಕ ವೇದವ್ಯಾಸ ಕಾಮತ್ ಅವರು ಪೊಲೀಸ್ ಪೇದೆಯನ್ನು ಖಾರವಾದ ಮಾತಿನಲ್ಲಿ ಬಿಸಿ ಮುಟ್ಟಿಸಿದ್ದಾರೆ. ಕಾಂಗ್ರೆಸಿಗರು ಕರೆ ನೀಡಿದ ಭಾರತ ಬಂದ್ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಮುಖಂಡ ಕೆ.ಆರ್.ಶೆಟ್ಟಿ ಅಡ್ಯಾರ್ ಅವರು, ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿಗೆ ಕರೆ ಮಾಡಿದ್ದರು. ಸಚಿವ ಯು.ಟಿ.ಖಾದರ್ ಅವರು ಹಿಂದೆ ಬಂದ್ ಮಾಡಿದವರಿಗೆ ಚಪ್ಪಲಿ ಏಟು ಹೊಡೆಯುವಂತೆ ಹೇಳಿದ್ದಾರೆ.
ಈಗ ನೀವು ಬಲಾತ್ಕಾರವಾಗಿ ಬಂದ್ ಮಾಡುವ ವೇಳೆ ಒಬ್ಬನ ತಲೆ ಒಡೆದಿದ್ದೀರಿ. ಈಗ ನಾವು ಕೆಎಸ್ಸಾರ್ಟಿಸಿಯಲ್ಲಿದ್ದೇವೆ. ನೀವು ಬನ್ನಿ ನಿಮಗೆ ಚಪ್ಪಲಿಯಲ್ಲಿ ಹೊಡೆಯುತ್ತೇವ ಎಂದು ಹೇಳಿದ್ದರು. ಕದ್ರಿ ಠಾಣೆಗೆ ಬಾ ಎಂದು ಪುನೀತ್ ಉತ್ತರಿಸಿ ಬಳಿಕ ನಾನೇ ಬರುವುದಾಗಿ ತಿಳಿಸಿದ್ದರು. ಬಳಿಕ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಮಂಗಳವಾರ ಎಫ್‍ಐಆರ್ ದಾಖಲಿಸಲಾಗಿತ್ತು. ಇದಕ್ಕಾಗಿ ಕೆ.ಆರ್.ಶೆಟ್ಟಿ ಅವರನ್ನು ಪೊಲೀಸರು ಕರೆ ಮಾಡಿ ಠಾಣೆಗೆ ಬರುವಂತೆ ಸೂಚಿಸಿದರು. ಎಸ್‍ಐ ಮಾರುತಿ ಅವರು ವಿಚಾರಣೆ ನಡೆಸಿ ಠಾಣೆಯಲ್ಲಿಯೇ ಜಾಮೀನು ನೀಡಬಹುದಾದ ಪ್ರಕರಣವಾದ್ದರಿಂದ ಇನ್‍ಸ್ಪೆಕ್ಟರ್ ಸೂಚನೆಯಂತೆ ತಕ್ಷಣ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು.
ಅಷ್ಟರಲ್ಲಿ ಅವರಿಗೆ ತುರ್ತು ಕರ್ತವ್ಯದ ಕರೆ ಬಂದ ಕಾರಣ ಸರ್ಕಿಟ್ ಹೌಸ್‍ಗೆ ತೆರಳಿದವರು ವಾಪಸ್ ಬರುವಾಗ ವಿಳಂಬವಾಗಿತ್ತು. ಕೆ.ಆರ್.ಶೆಟ್ಟಿ ಮಧ್ಯಾಹ್ನ 12 ಗಂಟೆಗೆ ಹೋಗಿದ್ದು, ಸಂಜೆ 3 ಗಂಟೆಯಾದರೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಹಿಂದೂ ಜಾಗರಣೆ ವೇದಿಕೆಯ ಶರತ್ ಪದವಿನಂಗಡಿ ಮತ್ತಿತರರು ಠಾಣೆಗೆ ಆಗಮಿಸಿದರು. ಈ ಸಂದರ್ಭ ಆರ್.ಕೆ. ಶೆಟ್ಟಿ ಮಾತನಾಡುತ್ತಿದ್ದ ವೇಳೆ ಒಬ್ಬ ಪೊಲೀಸ್ ಎಳೆದಾಡಿ ಹಲ್ಲೆಗೆ ಮುಂದಾದರು. ಈ ಸಂದರ್ಭ ಹಿಂದೂ ಮುಖಂಡ ಶರತ್ ಪದವಿನಂಗಡಿ ಶಾಸಕ ವೇದವ್ಯಾಸ ಕಾಮತ್ ಗೆ ಕರೆ ಮಾಡಿ ವಿಷಯ ತಿಳಿಸಿದರು.
ಬಿಸಿ ಮುಟ್ಟಿಸಿದ ಶಾಸಕ; ಈ ಸಂದರ್ಭ ತನ್ನ ಕರೆಯನ್ನು ಪೊಲೀಸ್ ಪೇದೆಗೆ ನೀಡುವಂತೆ ಶಾಸಕರು ಸೂಚಿಸಿದರು. ಆಗ ಪೊಲೀಸ್ ಉಢಾಪೆಯಿಂದ “ ಶಾಸಕ ನಿನಗೆ ಆಗಿರಬಹುದು, ನನಗಲ”್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಾಸಕರು ಕದ್ರಿ ಪೊಲೀಸ್ ಠಾಣೆ ದೂರವಾಣಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ. ತಕ್ಷಣ ಪೊಲೀಸ್ ಠಾಣೆಗೆ ಆಗಮಿಸಿದ ವೇದವ್ಯಾಸ ಕಾಮತ್ ಅರ್ಧ ಗಂಟೆ ಕಾಲ ಪೊಲೀಸರಿಗೆ ಚಾರ್ಜ್ ಮಾಡಿದ್ದಾರೆ. ಸಬ್ ಇನ್‍ಸ್ಪೆಕ್ಟರ್ ಸಮಾಧಾನಕ್ಕೆ ಮುಂದಾದರು. ಇನ್ನೂ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಹೇಳಿದರು. ಅತಿರೇಕವಾಗಿ ವರ್ತಿಸಿದ ಪೊಲೀಸ್‍ಗೆ ಇನ್‍ಸ್ಪೆಕ್ಟರ್ ಸಹಿತ ಮೇಲಧಿಕಾರಿಗಳೂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆಕ್ರೋಶ; ಬಂದ್ ಮಾಡುವ ಸಂಘಪರಿವಾರದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರೆ ಸನ್ಮಾನ, ಅದೇ ಸಂಘಪರಿವಾರದ ಯವಕ ಕಾಂಗ್ರೆಸಿಗರಿಗೆ ಹೇಳಿದರೆ ಅವಮಾನ ಹೇಗಾಗುತ್ತದೆ ಎಂದು ಎಂದು ಹಿಂಜಾವೇ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply