ಪ್ರತಿಕಾರದ ಹತ್ಯೆಗೆ ಮೂಡುಬಿದ್ರೆಯಲ್ಲಿ ತಲವಾರು ದಾಳಿ…!!
Posted On September 24, 2018

ಮುಂಜಾನೆ ಮೂಡುಬಿದ್ರೆಯಲ್ಲಿ ಝಳಪಿಸಿದ ತಲವಾರು..
ಮಂಗಳೂರು- ತಲವಾರು ದಾಳಿಗೆ ಮತ್ತೆ ಬೆಚ್ಚಿಬಿದ್ದ ಮಂಗಳೂರು. ಮಂಗಳೂರು ತಾಲೂಕಿನ ಮೂಡುಬಿದ್ರೆ ಗಂಟಲ್ ಕಟ್ಟೆಯಲ್ಲಿ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆಯ ಅರೋಪಿ ಮೇಲೆ ತಲವಾರು ದಾಳಿ. ಪ್ರಶಾಂತ್ ಪೂಜಾರಿ ಹತ್ಯೆಯ ಮಾದರಿಯಲ್ಲಿಯೇ ಇಮ್ತಿಯಾಜ್ ಹತ್ಯೆ ಗೆ ಸ್ಕೆಚ್ ಹಾಕಿದ ದುಷ್ಕರ್ಮಿಗಳು. ಇಮ್ತಿಯಾಜ್ ಬೆಳಿಗ್ಗೆ ೫-೩೦ ರ ವೇಳೆಗೆ ಹೋಟೆಲ್ ತೆರೆಯುವ ವೇಳೆ ದಾಳಿ ನಡೆಸಿದ ದುಷ್ಕರ್ಮಿಗಳು.ಅಕ್ಟೋಬರ್ ೦೯ ೨೦೧೫ ರಂದು ಪ್ರಶಾಂತ್ ಪೂಜಾರಿ ಹತ್ಯೆ ನಡೆದಿತ್ತು. ಅದೇ ರೀತಿಯಲ್ಲಿ ಹತ್ಯೆಗೆ ಸ್ಕೆಚ್ ರೂಪಿಸಿದ್ದ ದುಷ್ಕರ್ಮಿಗಳು. ಪ್ರಾಣಾಪಾಯದಿಂದ ಪಾರಾದ ಇಮ್ತಿಯಾಜ್ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಲರಣ ದಾಖಲಾಗಿದ್ದು ತನಿಖೆ ಆರಂಭಿಸಿದ್ದಾರೆ.
- Advertisement -
Leave A Reply