• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಿಮ್ಮ ಮನೆಯ ಹತ್ತಿರದ ಚರಂಡಿಯಲ್ಲಿ ಮಳೆಯ ನೀರು ಹರಿದು ಹೋಗುವ ವ್ಯವಸ್ಥೆ ಇದೆಯಾ??

Hanumantha Kamath Posted On May 7, 2019
0


0
Shares
  • Share On Facebook
  • Tweet It

ಕಳೆದ ಬಾರಿ ಮಳೆಗಾಲದಲ್ಲಿ ಏನಾಗಿತ್ತು ಎನ್ನುವುದನ್ನು ಮಂಗಳೂರಿನ ಮಹಾನಗರದ ಜನರಿಗೆ ಶಬ್ದಗಳ ಮೂಲಕ ವಿವರಿಸಬೇಕಾಗಿಲ್ಲ. ಅದನ್ನು ನಾವು ಒಂದು ಕ್ಷಣ ನೆನಪಿಸಿಕೊಂಡರೆ ಸಿನೆಮಾದಂತೆ ಅದು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಇತಿಹಾಸದಲ್ಲಿ ಅನೇಕ ಮನೆಗಳಿಗೆ ಪ್ರಥಮ ಬಾರಿ ನೀರು ನುಗ್ಗಿ ಸಾಕಷ್ಟು ನಷ್ಟ ಸಂಭವಿಸಿದೆ. ಕೆಲವು ಕಡೆ ನಗರದ ಒಳಗೆ ಹೃದಯಭಾಗದಲ್ಲಿ ಬೋಟಿನ ಮೂಲಕ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲಾಗಿದೆ. ಅನೇಕ ಕಡೆ ಗೋಡೆ ಕುಸಿದು, ಮಣ್ಣು ಮನೆಯ ಒಳಗೆ ನುಗ್ಗಿದೆ. ಹೀಗೆ ಮಂಗಳೂರಿನಲ್ಲಿ ಸಂಭವಿಸಿದ ನಷ್ಟ ಸಣ್ಣ ಏನಲ್ಲ. ಅದು ನಡೆದು ನಾಡಿದ್ದು ಮೇ 30 ಕ್ಕೆ ಭರ್ತಿ ಒಂದು ವರ್ಷ ಆಗಲು ಇದೆ. ಇವತ್ತಿನಿಂದಲೇ ಹಿಡಿದುಕೊಂಡರೇ ಬಹುತೇಕ ಮೂರು ವಾರ. ಹಾಗಾದರೆ ಆವತ್ತು ಕಂಡ ದುರಂತ ಸಿನೆಮಾ ಈ ಬಾರಿ ಮತ್ತೆ ಮರುಕಳಿಸುತ್ತದೆಯಾ? ನಾನು ಹೆದರಿಸಲು ಹೋಗುತ್ತಿಲ್ಲ. ಆದರೆ ಸಣ್ಣ ಸಣ್ಣ ವಿಷಯಗಳ ಬಗ್ಗೆ ನಾವು ಕೇರ್ ತೆಗೆದುಕೊಳ್ಳದೇ ಹೋದರೆ ಈ ಬಾರಿಯ ಮಳೆಗಾಲವೂ ನಮ್ಮ ಪಾಲಿಗೆ ಕರಾಳ ಸ್ವಪ್ನವಾಗಿಯೇ ಉಳಿಯಲಿದೆ.

ಕೃತಕ ನೆರೆ ಸೃಷ್ಟಿ ಹೇಗೆ?

ಮೊದಲನೇಯದಾಗಿ ಮಳೆಯ ನೀರು ಹರಿದು ಹೋಗಲು ನಿಮ್ಮ ಮನೆಯ ಆಸುಪಾಸಿನಲ್ಲಿ ಸರಿಯಾದ ಚರಂಡಿಗಳು ಇವೆಯಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀರು ಬಿದ್ದು ಹೋಗಲು ವ್ಯವಸ್ಥೆ ಇಲ್ಲದೆ ಇದ್ದರೆ ಅದನ್ನು ಸ್ಥಳೀಯ ಮಾಜಿ ಮನಪಾ ಸದಸ್ಯರಿಗೆ ಹೇಳಿ ಮಾಡಿಸಿಕೊಳ್ಳಿ. ನಿಮ್ಮ ಕಾರ್ಪೋರೇಟರ್ ಗಳ ಅಧಿಕಾರಾವಧಿ ಮೀರಿರಬಹುದು. ಆದರೆ ಅವರ ಜವಾಬ್ದಾರಿ ಮುಗಿದಿಲ್ಲ. ಅವರು ಮನಸ್ಸು ಮಾಡಿದರೆ ಮಳೆಯ ಹರಿದು ಹೋಗಲು ಚರಂಡಿಯಲ್ಲಿ ತುಂಬಿರುವ ಹೂಳನ್ನು ತೆಗೆಸಲು ಕೆಲಸ ಮಾಡಬೇಕು. ಒಂದು ವೇಳೆ ಅವರು ಕೆಲಸ ಮಾಡಿಲ್ಲ ಎಂದುಕೊಳ್ಳೋಣ, ಹೆದರಬೇಡಿ. ನಿಮ್ಮ ಮಟ್ಟಿಗೆ ಎಷ್ಟು ಆಗುತ್ತೋ ನೀವೆ ಸ್ಥಳೀಯರು ಸೇರಿ ಮಾಡಿಕೊಳ್ಳಿ. ನಿರ್ಲಕ್ಷ್ಯ ಮಾಡಿದ ಮಾಜಿ ಪಾಲಿಕೆ ಸದಸ್ಯರಿಗೆ ಮುಂದಿನ ಸೆಪ್ಟೆಂಬರ್ ಬಳಿಕ ಬರುವ ಪಾಲಿಕೆ ಚುನಾವಣೆಯಲ್ಲಿ ಬುದ್ಧಿ ಕಲಿಸಿ.
ಇನ್ನು ಸಮಸ್ಯೆ ಹೇಗೆ ಆರಂಭವಾಗುತ್ತದೆ ಎನ್ನುವುದನ್ನು ನಿಮಗೆ ವಿವರಿಸುತ್ತೇನೆ. ಮೊದಲನೇಯದಾಗಿ ರಸ್ತೆ ಬದಿಯಲ್ಲಿ, ಚರಂಡಿಯ ಮೇಲಿನ ಭಾಗದಲ್ಲಿ, ರಸ್ತೆ ವಿಭಾಜಕದಲ್ಲಿ ಸಾಕಷ್ಟು ಮಣ್ಣು, ಮರಳು ತುಂಬಿಕೊಂಡಿದೆ. ನಾಡಿದ್ದು ಮೇ ಕೊನೆಯಲ್ಲಿ ಬೀಳುವ ಮೊದಲ ಮಳೆಗೆ ಈ ಮರಳು, ಮಣ್ಣು, ಮಸಿ, ಕಸಕಡ್ಡಿಗಳು ಸೀದಾ ಅಲ್ಲಿಯೇ ಪಕ್ಕದಲ್ಲಿರುವ ತೋಡನ್ನು ಸೇರುತ್ತದೆ. ಇದರಿಂದ ಏನಾಗುತ್ತದೆ ಎಂದರೆ ಮೊದಲೇ ಅನೇಕ ಒಂದು ಮೀಟರ್ ಅಗಲದ ಚರಂಡಿಗಳ ಹೂಳನ್ನು ತೆಗೆಯದೇ ನೀರು ಸರಾಗವಾಗಿ ಹರಿದು ಹೋಗುವ ಸ್ಥಿತಿಯಲ್ಲಿ ಆ ತೋಡುಗಳು ಇಲ್ಲ. ನೀರು ಹೋಗಲು ದಾರಿ ಇಲ್ಲದಿದ್ದರೆ ಅದೇ ನೀರು ಚರಂಡಿ ಬಿಟ್ಟು ನಿಮ್ಮ ಮನೆಯ ಅಂಗಳ, ಪಾರ್ಕಿಂಗ್ ಜಾಗವನ್ನು ಸೇರಿ ನಂತರ ಅಲ್ಲಿ ಕೂಡ ತುಂಬಿ ಮನೆಯ ಒಳಗೆ ಕಾಲಿಡುತ್ತದೆ. ಅದನ್ನು ತಪ್ಪಿಸಬೇಕಾದರೆ ಮನೆಯ ಅಕ್ಕಪಕ್ಕದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಜಾಗ ಉಳಿದಿದೆಯಾ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ.

ಅವರಿಗೆ ಇವರು, ಇವರಿಗೆ ಅವರು..

ಅದನ್ನು ನೋಡಬೇಕಾಗಿರುವುದು ನಿಜವಾಗಿ ಪಾಲಿಕೆಯ ಅಧಿಕಾರಿಗಳ ಕೆಲಸ. ಅದಕ್ಕಾಗಿಯೇ ತಿಂಗಳಿಗೆ ಎರಡು ಕೋಟಿ ರೂಪಾಯಿಯನ್ನು ನಾವು ನಮ್ಮ ತೆರಿಗೆಯ ಹಣದಿಂದ ಆಂಟೋನಿ ವೇಸ್ಟ್ ಎನ್ನುವ ಸಂಸ್ಥೆಗೆ ಕೊಡುತ್ತಿದ್ದೇವೆ. ಅವರು ಸರಿಯಾಗಿ ಕೆಲಸ ಮಾಡಿದ್ರೆ ಏನೂ ಸಮಸ್ಯೆ ಇರಲಿಲ್ಲ. ಆದರೆ ಅವರು ಕೆಲಸ ಮಾಡುವುದನ್ನು ಬಿಟ್ಟು ಪಾಲಿಕೆಯ ಅಧಿಕಾರಿಗಳ ಜೇಬು ತುಂಬಿಸುವುದರಲ್ಲಿ ಆಸಕ್ತಿ ತೋರಿಸುತ್ತಿರುವುದರಿಂದ ಕಸ ಅಲ್ಲಿಯೇ ಉಳಿಯುತ್ತಿದೆ. ಕಮೀಷನ್ ಹಣ ನೇರವಾಗಿ ಯಾರ ಜೇಬಿಗೆ ಹೋಗಬೇಕಿದೆಯೋ ಅವರಿಗೆ ಹೋಗುತ್ತಿದೆ. ಅದರ ಬದಲು ನಿಮ್ಮ ಎಂಜಿಲು ಕಾಸು ಬೇಡಾ, ನಿಮ್ಮ ಕೆಲಸ ತೃಪ್ತಿಕರವಾಗಿಲ್ಲ ಎನ್ನುವುದನ್ನು ಪಾಲಿಕೆಯವರು ಬರೆದುಕೊಡಲಿ ನೋಡೋಣ. ಎಲ್ಲವೂ ಸರಿಯಾಗುತ್ತದೆ. ಇವರಿಗೆ ಅವರು ಕೊಡುವ ಹಣ ತೃಪ್ತಿ ಕೊಟ್ಟಿದೆ. ಅವರಿಗೆ ಇವರು ಕೊಡುವ ಹಣ ತೃಪ್ತಿ ತಂದಿದೆ. ಒಟ್ಟಿನಲ್ಲಿ ಅವರು ಮತ್ತು ಇವರು ಚೆನ್ನಾಗಿರುವುದರಿಂದ ನಾವು ಕೃತಕ ನೆರೆಯ ಸುಖ ಅನುಭವಿಸುತ್ತಿದ್ದೇವೆ!

0
Shares
  • Share On Facebook
  • Tweet It




Trending Now
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
Hanumantha Kamath April 6, 2026
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Hanumantha Kamath March 27, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
  • Popular Posts

    • 1
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search