• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಿಮ್ಮ ಮನೆಯ ಹತ್ತಿರದ ಚರಂಡಿಯಲ್ಲಿ ಮಳೆಯ ನೀರು ಹರಿದು ಹೋಗುವ ವ್ಯವಸ್ಥೆ ಇದೆಯಾ??

AvatarHanumantha Kamath Posted On May 7, 2019


  • Share On Facebook
  • Tweet It

ಕಳೆದ ಬಾರಿ ಮಳೆಗಾಲದಲ್ಲಿ ಏನಾಗಿತ್ತು ಎನ್ನುವುದನ್ನು ಮಂಗಳೂರಿನ ಮಹಾನಗರದ ಜನರಿಗೆ ಶಬ್ದಗಳ ಮೂಲಕ ವಿವರಿಸಬೇಕಾಗಿಲ್ಲ. ಅದನ್ನು ನಾವು ಒಂದು ಕ್ಷಣ ನೆನಪಿಸಿಕೊಂಡರೆ ಸಿನೆಮಾದಂತೆ ಅದು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಇತಿಹಾಸದಲ್ಲಿ ಅನೇಕ ಮನೆಗಳಿಗೆ ಪ್ರಥಮ ಬಾರಿ ನೀರು ನುಗ್ಗಿ ಸಾಕಷ್ಟು ನಷ್ಟ ಸಂಭವಿಸಿದೆ. ಕೆಲವು ಕಡೆ ನಗರದ ಒಳಗೆ ಹೃದಯಭಾಗದಲ್ಲಿ ಬೋಟಿನ ಮೂಲಕ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲಾಗಿದೆ. ಅನೇಕ ಕಡೆ ಗೋಡೆ ಕುಸಿದು, ಮಣ್ಣು ಮನೆಯ ಒಳಗೆ ನುಗ್ಗಿದೆ. ಹೀಗೆ ಮಂಗಳೂರಿನಲ್ಲಿ ಸಂಭವಿಸಿದ ನಷ್ಟ ಸಣ್ಣ ಏನಲ್ಲ. ಅದು ನಡೆದು ನಾಡಿದ್ದು ಮೇ 30 ಕ್ಕೆ ಭರ್ತಿ ಒಂದು ವರ್ಷ ಆಗಲು ಇದೆ. ಇವತ್ತಿನಿಂದಲೇ ಹಿಡಿದುಕೊಂಡರೇ ಬಹುತೇಕ ಮೂರು ವಾರ. ಹಾಗಾದರೆ ಆವತ್ತು ಕಂಡ ದುರಂತ ಸಿನೆಮಾ ಈ ಬಾರಿ ಮತ್ತೆ ಮರುಕಳಿಸುತ್ತದೆಯಾ? ನಾನು ಹೆದರಿಸಲು ಹೋಗುತ್ತಿಲ್ಲ. ಆದರೆ ಸಣ್ಣ ಸಣ್ಣ ವಿಷಯಗಳ ಬಗ್ಗೆ ನಾವು ಕೇರ್ ತೆಗೆದುಕೊಳ್ಳದೇ ಹೋದರೆ ಈ ಬಾರಿಯ ಮಳೆಗಾಲವೂ ನಮ್ಮ ಪಾಲಿಗೆ ಕರಾಳ ಸ್ವಪ್ನವಾಗಿಯೇ ಉಳಿಯಲಿದೆ.

ಕೃತಕ ನೆರೆ ಸೃಷ್ಟಿ ಹೇಗೆ?

ಮೊದಲನೇಯದಾಗಿ ಮಳೆಯ ನೀರು ಹರಿದು ಹೋಗಲು ನಿಮ್ಮ ಮನೆಯ ಆಸುಪಾಸಿನಲ್ಲಿ ಸರಿಯಾದ ಚರಂಡಿಗಳು ಇವೆಯಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀರು ಬಿದ್ದು ಹೋಗಲು ವ್ಯವಸ್ಥೆ ಇಲ್ಲದೆ ಇದ್ದರೆ ಅದನ್ನು ಸ್ಥಳೀಯ ಮಾಜಿ ಮನಪಾ ಸದಸ್ಯರಿಗೆ ಹೇಳಿ ಮಾಡಿಸಿಕೊಳ್ಳಿ. ನಿಮ್ಮ ಕಾರ್ಪೋರೇಟರ್ ಗಳ ಅಧಿಕಾರಾವಧಿ ಮೀರಿರಬಹುದು. ಆದರೆ ಅವರ ಜವಾಬ್ದಾರಿ ಮುಗಿದಿಲ್ಲ. ಅವರು ಮನಸ್ಸು ಮಾಡಿದರೆ ಮಳೆಯ ಹರಿದು ಹೋಗಲು ಚರಂಡಿಯಲ್ಲಿ ತುಂಬಿರುವ ಹೂಳನ್ನು ತೆಗೆಸಲು ಕೆಲಸ ಮಾಡಬೇಕು. ಒಂದು ವೇಳೆ ಅವರು ಕೆಲಸ ಮಾಡಿಲ್ಲ ಎಂದುಕೊಳ್ಳೋಣ, ಹೆದರಬೇಡಿ. ನಿಮ್ಮ ಮಟ್ಟಿಗೆ ಎಷ್ಟು ಆಗುತ್ತೋ ನೀವೆ ಸ್ಥಳೀಯರು ಸೇರಿ ಮಾಡಿಕೊಳ್ಳಿ. ನಿರ್ಲಕ್ಷ್ಯ ಮಾಡಿದ ಮಾಜಿ ಪಾಲಿಕೆ ಸದಸ್ಯರಿಗೆ ಮುಂದಿನ ಸೆಪ್ಟೆಂಬರ್ ಬಳಿಕ ಬರುವ ಪಾಲಿಕೆ ಚುನಾವಣೆಯಲ್ಲಿ ಬುದ್ಧಿ ಕಲಿಸಿ.
ಇನ್ನು ಸಮಸ್ಯೆ ಹೇಗೆ ಆರಂಭವಾಗುತ್ತದೆ ಎನ್ನುವುದನ್ನು ನಿಮಗೆ ವಿವರಿಸುತ್ತೇನೆ. ಮೊದಲನೇಯದಾಗಿ ರಸ್ತೆ ಬದಿಯಲ್ಲಿ, ಚರಂಡಿಯ ಮೇಲಿನ ಭಾಗದಲ್ಲಿ, ರಸ್ತೆ ವಿಭಾಜಕದಲ್ಲಿ ಸಾಕಷ್ಟು ಮಣ್ಣು, ಮರಳು ತುಂಬಿಕೊಂಡಿದೆ. ನಾಡಿದ್ದು ಮೇ ಕೊನೆಯಲ್ಲಿ ಬೀಳುವ ಮೊದಲ ಮಳೆಗೆ ಈ ಮರಳು, ಮಣ್ಣು, ಮಸಿ, ಕಸಕಡ್ಡಿಗಳು ಸೀದಾ ಅಲ್ಲಿಯೇ ಪಕ್ಕದಲ್ಲಿರುವ ತೋಡನ್ನು ಸೇರುತ್ತದೆ. ಇದರಿಂದ ಏನಾಗುತ್ತದೆ ಎಂದರೆ ಮೊದಲೇ ಅನೇಕ ಒಂದು ಮೀಟರ್ ಅಗಲದ ಚರಂಡಿಗಳ ಹೂಳನ್ನು ತೆಗೆಯದೇ ನೀರು ಸರಾಗವಾಗಿ ಹರಿದು ಹೋಗುವ ಸ್ಥಿತಿಯಲ್ಲಿ ಆ ತೋಡುಗಳು ಇಲ್ಲ. ನೀರು ಹೋಗಲು ದಾರಿ ಇಲ್ಲದಿದ್ದರೆ ಅದೇ ನೀರು ಚರಂಡಿ ಬಿಟ್ಟು ನಿಮ್ಮ ಮನೆಯ ಅಂಗಳ, ಪಾರ್ಕಿಂಗ್ ಜಾಗವನ್ನು ಸೇರಿ ನಂತರ ಅಲ್ಲಿ ಕೂಡ ತುಂಬಿ ಮನೆಯ ಒಳಗೆ ಕಾಲಿಡುತ್ತದೆ. ಅದನ್ನು ತಪ್ಪಿಸಬೇಕಾದರೆ ಮನೆಯ ಅಕ್ಕಪಕ್ಕದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಜಾಗ ಉಳಿದಿದೆಯಾ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ.

ಅವರಿಗೆ ಇವರು, ಇವರಿಗೆ ಅವರು..

ಅದನ್ನು ನೋಡಬೇಕಾಗಿರುವುದು ನಿಜವಾಗಿ ಪಾಲಿಕೆಯ ಅಧಿಕಾರಿಗಳ ಕೆಲಸ. ಅದಕ್ಕಾಗಿಯೇ ತಿಂಗಳಿಗೆ ಎರಡು ಕೋಟಿ ರೂಪಾಯಿಯನ್ನು ನಾವು ನಮ್ಮ ತೆರಿಗೆಯ ಹಣದಿಂದ ಆಂಟೋನಿ ವೇಸ್ಟ್ ಎನ್ನುವ ಸಂಸ್ಥೆಗೆ ಕೊಡುತ್ತಿದ್ದೇವೆ. ಅವರು ಸರಿಯಾಗಿ ಕೆಲಸ ಮಾಡಿದ್ರೆ ಏನೂ ಸಮಸ್ಯೆ ಇರಲಿಲ್ಲ. ಆದರೆ ಅವರು ಕೆಲಸ ಮಾಡುವುದನ್ನು ಬಿಟ್ಟು ಪಾಲಿಕೆಯ ಅಧಿಕಾರಿಗಳ ಜೇಬು ತುಂಬಿಸುವುದರಲ್ಲಿ ಆಸಕ್ತಿ ತೋರಿಸುತ್ತಿರುವುದರಿಂದ ಕಸ ಅಲ್ಲಿಯೇ ಉಳಿಯುತ್ತಿದೆ. ಕಮೀಷನ್ ಹಣ ನೇರವಾಗಿ ಯಾರ ಜೇಬಿಗೆ ಹೋಗಬೇಕಿದೆಯೋ ಅವರಿಗೆ ಹೋಗುತ್ತಿದೆ. ಅದರ ಬದಲು ನಿಮ್ಮ ಎಂಜಿಲು ಕಾಸು ಬೇಡಾ, ನಿಮ್ಮ ಕೆಲಸ ತೃಪ್ತಿಕರವಾಗಿಲ್ಲ ಎನ್ನುವುದನ್ನು ಪಾಲಿಕೆಯವರು ಬರೆದುಕೊಡಲಿ ನೋಡೋಣ. ಎಲ್ಲವೂ ಸರಿಯಾಗುತ್ತದೆ. ಇವರಿಗೆ ಅವರು ಕೊಡುವ ಹಣ ತೃಪ್ತಿ ಕೊಟ್ಟಿದೆ. ಅವರಿಗೆ ಇವರು ಕೊಡುವ ಹಣ ತೃಪ್ತಿ ತಂದಿದೆ. ಒಟ್ಟಿನಲ್ಲಿ ಅವರು ಮತ್ತು ಇವರು ಚೆನ್ನಾಗಿರುವುದರಿಂದ ನಾವು ಕೃತಕ ನೆರೆಯ ಸುಖ ಅನುಭವಿಸುತ್ತಿದ್ದೇವೆ!

  • Share On Facebook
  • Tweet It




Trending Now
ವಿಶ್ವನಾಥ್ ಸಜ್ಜನ್ನರ್ ಅಂದ್ರೆ ಸುಮ್ನೆ ಅಲ್ಲ ಎಂದು ಇವತ್ತು ಸತ್ತವರಿಗೆ ಗೊತ್ತಿರಲಿಲ್ಲ!!
Hanumantha Kamath December 6, 2019
ಮೂಡಬಿದ್ರೆ ದೇವಸ್ಥಾನದ ದಲಿತೆ ವಿವಾದ ಅಸಲಿಯೇತ್ತೇನು??
Hanumantha Kamath December 5, 2019
Leave A Reply

  • Recent Posts

    • ವಿಶ್ವನಾಥ್ ಸಜ್ಜನ್ನರ್ ಅಂದ್ರೆ ಸುಮ್ನೆ ಅಲ್ಲ ಎಂದು ಇವತ್ತು ಸತ್ತವರಿಗೆ ಗೊತ್ತಿರಲಿಲ್ಲ!!
    • ಮೂಡಬಿದ್ರೆ ದೇವಸ್ಥಾನದ ದಲಿತೆ ವಿವಾದ ಅಸಲಿಯೇತ್ತೇನು??
    • ಐದಾರು ಗಂಟೆ ಹಿಂಸಿಸಿ ಅತ್ಯಾಚಾರ ಮಾಡಿ ಕೊಲ್ಲುವವರಿಗೆ ಶಿಕ್ಷೆ ಸಿಗಲು ಏಳು ವರ್ಷವೇ!!
    • ಬಾಕಿ ಇಟ್ಟಿರುವ ನೀರಿನ 40 ಕೋಟಿ ರೂ ಬಿಲ್ ವಸೂಲಿ ಮಾಡಲು ಪಾಲಿಕೆಯಲ್ಲಿ ಯಾರೂ ಗಂಡಸು ಇಲ್ವಾ?
    • ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಹೋರ್ಡಿಂಗ್ಸ್ ಗೋಲ್ ಮಾಲ್ ಪರವಾಗಿ ಮಾತನಾಡಬಾರದಿತ್ತು!!
    • ಸ್ಕಿಲ್ ಇದ್ದರೆ ಉದ್ಯೋಗಾವಕಾಶ ಇದ್ದೇ ಇದೆ- ಬಿ.ಎಲ್. ಸಂತೋಷ್!
    • ಮಂಗಳೂರಿನಲ್ಲಿ ಬರ್ಕಾ ದತ್ತ ಹೇಳಿದ್ದು, ನಾವು ಕೇಳಿದ್ದು, ನೀವು ನಂಬಿದ್ದು!!
    • ಹೈಕೋರ್ಟ್ ಕೊಟ್ಟಿರುವ ಹೊಸ ಆದೇಶ ಫ್ಲಾಟ್ ಮಾಲೀಕರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ!!
    • ಅವರಿಗಿಂತ ನೀವು ಆಗಬಹುದು ಅಂತ ಮಂಗಳೂರಿಗರು ನಿಮ್ಮನ್ನು ಗೆಲ್ಲಿಸಿದ್ದಾರೆ ಬಿಟ್ಟರೆ, ನೀವು ಪ್ರಾಮಾಣಿಕರು ಅಂತ ಅಲ್ಲ!
    • ಮುಂದಿನ ಆರೋಗ್ಯ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಮೇಲೆ ಹೊಸ ಜವಾಬ್ದಾರಿ ಕಾಯುತ್ತಿದೆ, ಮಾಡುತ್ತೀರಾ?
  • Popular Posts

    • 1
      ವಿಶ್ವನಾಥ್ ಸಜ್ಜನ್ನರ್ ಅಂದ್ರೆ ಸುಮ್ನೆ ಅಲ್ಲ ಎಂದು ಇವತ್ತು ಸತ್ತವರಿಗೆ ಗೊತ್ತಿರಲಿಲ್ಲ!!
    • 2
      ಮೂಡಬಿದ್ರೆ ದೇವಸ್ಥಾನದ ದಲಿತೆ ವಿವಾದ ಅಸಲಿಯೇತ್ತೇನು??
    • 3
      ಐದಾರು ಗಂಟೆ ಹಿಂಸಿಸಿ ಅತ್ಯಾಚಾರ ಮಾಡಿ ಕೊಲ್ಲುವವರಿಗೆ ಶಿಕ್ಷೆ ಸಿಗಲು ಏಳು ವರ್ಷವೇ!!
    • 4
      ಬಾಕಿ ಇಟ್ಟಿರುವ ನೀರಿನ 40 ಕೋಟಿ ರೂ ಬಿಲ್ ವಸೂಲಿ ಮಾಡಲು ಪಾಲಿಕೆಯಲ್ಲಿ ಯಾರೂ ಗಂಡಸು ಇಲ್ವಾ?
    • 5
      ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಹೋರ್ಡಿಂಗ್ಸ್ ಗೋಲ್ ಮಾಲ್ ಪರವಾಗಿ ಮಾತನಾಡಬಾರದಿತ್ತು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search