• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೇವೆಗೌಡರ ಮೊಮ್ಮೊಗನ ಮದುವೆಗೆ 45 ವಾಹನಗಳಿಗೆ ಪಾಸ್?

Hanumantha Kamath Posted On April 18, 2020


  • Share On Facebook
  • Tweet It

ದೆಹಲಿಯಲ್ಲಿ ಫಿಜ್ಜಾ ಹೊಂ ಡೆಲಿವರಿ ಮಾಡುತ್ತಿದ್ದ ಯುವಕನಲ್ಲಿ ಕೋವಿಡ್ 19 ಪತ್ತೆಯಾಗಿದೆ. ಅವನಿಂದ ಪಾರ್ಸೆಲ್ ಪಡೆದುಕೊಳ್ಳುತ್ತಿದ್ದವರಲ್ಲಿ ಸಣ್ಣಗೆ ನಡುಕ ಶುರುವಾಗಿದೆ. ತಮಗೆ ಏನಾದರೂ ಆ ಸೊಂಕು ತಗಲಿದೆಯೋ ಎನ್ನುವ ಆತಂಕ ಹಲವರಲ್ಲಿ ಮನೆ ಮಾಡಿದೆ. ಆ ಯುವಕನಿಂದ ಆಹಾರದ ಪೊಟ್ಟಣ ಖರೀದಿಸಿದ ಸುಮಾರು 72 ಜನರಿಗೆ ಈಗ ಕ್ವಾರಂಟೈನ್ ವಿಧಿಸಲಾಗಿದೆ. ನಾನು ಹೇಳುವುದು ನಮ್ಮಲ್ಲಿ ಈ ಕುರಿತು ಯಾವ ಮಟ್ಟದಲ್ಲಿ ಜಾಗೃತಿ ಇದೆ.

ನಿತ್ಯ ಎಷ್ಟೋ ಜನ ಹೊಂ ಡೆಲಿವರಿ ಯುವಕರು ಮಂಗಳೂರಿನ ಬೀದಿಗಳಲ್ಲಿ ಓಡಾಡುತ್ತಾ ಇರುತ್ತಾರೆ. ಅವರಿಗೆ ಪಾಸ್ ನೀಡಲಾಗಿದೆ. ಆದರೆ ಯಾರನ್ನಾದರೂ ಪರೀಕ್ಷೆಗೆ ಒಳಪಡಿಸಲಾಗಿದೆಯಾ? ಮೊದಲು ಪರೀಕ್ಷೆ ಮಾಡಬೇಕಾಗಿರುವುದು ಅವರನ್ನ. ದೆಹಲಿ ಮಾತ್ರವಲ್ಲ, ಇಟಲಿಯಲ್ಲಿಯೂ ಹೊಂ ಡೆಲಿವರಿ ಯುವಕನಿಂದಲೇ ಕೋವಿಡ್ 19 ಹರಡಿತ್ತು ಎಂದು ವರದಿ ಹೇಳುತ್ತದೆ. ನಾನು ಈ ಯುವಕರನ್ನು ಆಗಲಿ ಅಥವಾ ಅವರಿಂದ ಆಹಾರವನ್ನು ಪಡೆದುಕೊಳ್ಳುವ ಜನರನ್ನು ಹೆದರಿಸುತ್ತಿಲ್ಲ. ಆದರೆ ನಮ್ಮ ಸುರಕ್ಷೆಯಲ್ಲಿ ನಾವಿರಬೇಕಲ್ವಾ? ಮಂಗಳೂರಿನ ಸಂಘನಿಕೇತನದ ಹತ್ತಿರದ ಅಪಾರ್ಟ್ ಮೆಂಟಿನಿಂದ ನನಗೆ ಒಬ್ಬರು ಕಾಲ್ ಮಾಡಿದ್ರು. ಅವರ ವಸತಿ ಸಮುಚ್ಚಯದ ಎದುರು ಒಂದು ಮನೆ ಇದೆ. ಅದಕ್ಕೆ ಆಹಾರ ಪೂರೈಕೆಯ ಹೋಟೇಲ್ ಲೈಸೆನ್ಸ್ ನೀಡಲಾಗಿದೆ. ಅಲ್ಲಿ ದಿನಾಲೂ ಅದರಲ್ಲಿಯೂ ಮುಖ್ಯವಾಗಿ ರಾತ್ರಿಯ ಊಟದ ಪಾರ್ಸೆಲ್ ತೆಗೆದುಕೊಳ್ಳಲು ಕನಿಷ್ಟ 40-50 ರ ತನಕ ಡೆಲಿವರಿ ಯುವಕರು ಒಟ್ಟೊಟ್ಟಿಗೆ ಗುಂಪು ಸೇರಿ ನಿಲ್ಲುತ್ತಾರೆ ಎಂದು ಅವರ ದೂರು. ಪಾಸುಗಳನ್ನು ಕಡ್ಲೆಕಾಯಿ ಬೀಜದ ಹಾಗೆ ಹಚ್ಚಿರುವ ಸಹಾಯಕ ಕಮೀಷನರ್ ಅವರು ಇದನ್ನೆಲ್ಲ ನೋಡಬೇಕು ಎನ್ನುವುದು ನನ್ನ ಕಳಕಳಿ.
ಇನ್ನು ನಿನ್ನೆ ಕುಮಾರಸ್ವಾಮಿಯವರ ಹಿರಿಯ (!) ಮಗನ ಮದುವೆ ನಡೆಯಿತು. ಸಾಮಾಜಿಕ ಅಂತರ ಎನ್ನುವುದು ಇರಲೇಇಲ್ಲ ಎನ್ನುವುದನ್ನು ರಾಷ್ಟ್ರೀಯ ವಾಹಿನಿಗಳು ಸುದ್ದಿ ಮಾಡಿದ್ದವು. ಫೋಟೋ ಮತ್ತು ವಿಡಿಯೋಗ್ರಾಫರ್ ಗಳೇ 30 ಜನ ಇದ್ದರು ಎನ್ನುವುದು ಮಾಹಿತಿ. ತಪ್ಪಿಲ್ಲ ಬಿಡಿ, ಮಾಜಿ ಪ್ರಧಾನಿಯೊಬ್ಬರ, ಮಾಜಿ ಮುಖ್ಯಮಂತ್ರಿಯೊಬ್ಬರ ಮತ್ತು ಮಾಜಿ ಸಚಿವರೊಬ್ಬರ ಕುಟುಂಬದ ಮದುವೆ. ಸಾಮಾನ್ಯ ದಿನಗಳಾದರೆ ಒಕೆ. ಆದರೆ ಇದು ಮದುವೆ ಮಾಡುವ ಸಂದರ್ಭ ಅಲ್ಲವೇ ಅಲ್ಲ. ನಮಗಿಂತ ಅವರಿಗೆ ಇದು ಚೆನ್ನಾಗಿ ಗೊತ್ತಿರಬೇಕಿತ್ತು. ಮೊದಲು ಮದುವೆ ಬೆಂಗಳೂರಿನಲ್ಲಿ ಎಂದೇ ನಿರ್ಧರಿತವಾಗಿತ್ತು. ಹಿಂದಿನ ದಿನ ಮಧ್ಯಾಹ್ನದ ತನಕ ಮದುವೆಯ ತೋರಣ ಬೆಂಗಳೂರಿನಲ್ಲಿ ಕಟ್ಟುತ್ತಿರುವ ದೃಶ್ಯಗಳನ್ನು ತೋರಿಸಲಾಗುತ್ತಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಮದುವೆ ರಾಮನಗರದಲ್ಲಿ ಎಂದು ಬದಲಾಗಿದೆ. 45 ವಾಹನಗಳಲ್ಲಿ ದೇವೆಗೌಡರ ಕುಟುಂಬ ರಾಮನಗರಕ್ಕೆ ಹೊರಟಿತ್ತು. ಅವರಿಗೆ 45 ಪಾಸುಗಳನ್ನು ಕೆಲವೇ ಗಂಟೆಗಳಲ್ಲಿ ಒದಗಿಸಿದ ಮಹಾನುಭಾವ ಯಾರು? ಹಾಗಾದರೆ ತಾವು ಅಧಿಕಾರದಲ್ಲಿ ಇರಲಿ, ಬಿಡಲಿ ರಾಜ್ಯದಲ್ಲಿ ತಮ್ಮ ಮಾತೇ ನಡೆಯುವುದು ಎಂದು ಗೌಡರ ಕುಟುಂಬ ತೋರಿಸಿಕೊಟ್ಟಿದೆ. ಹಾಗಾದರೆ ಲಾಕ್ ಡೌನ್ ಶ್ರೀಮಂತರಿಗೆ ಇಲ್ಲವೇ ಎನ್ನುವ ಮಾತು ಮತ್ತೊಮ್ಮೆ ಚಾಲ್ತಿಯಲ್ಲಿ ಬರುತ್ತಿದೆ.

ಇತ್ತ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿ ವಾಹನವನ್ನು ಏನೂ ಜೀವನಾವಶ್ಯಕ ವಸ್ತು ಸಾಗಿಸುತ್ತಿದ್ದಿರಾ ಎಂದು ಎರಡೆರಡು ಬಾರಿ ಕೇಳಿ ನೋಡಿ ಬಿಡುತ್ತಿದ್ದಾರೆ. ದೇವೆಗೌಡರ ಮೊಮ್ಮೊಗನ ಮದುವೆ ಯಾವ ಜೀವನಾವಶ್ಯಕ ಕಾರ್ಯ. ಮದುವೆ ಜೀವನಕ್ಕೆ ಅವಶ್ಯಕ ಇರಬಹುದು. ಆತ ಮದುವೆ ಆಗಿದ್ದು ತಪ್ಪು ಎಂದಲ್ಲ. ಆದರೆ ಈಗ ಅದು ಬೇಕಿತ್ತಾ? ಒಂದು ವೇಳೆ ಕುಮಾರಸ್ವಾಮಿಯವರ 45 ವಾಹನಗಳಿಗೆ ಬೆಂಗಳೂರು ಜಿಲ್ಲೆಯಿಂದ ರಾಮನಗರ ಜಿಲ್ಲೆಗೆ ಹೋಗಲು ಅವಕಾಶ ಸಿಗುತ್ತದೆ ಎಂದರೆ ಮುಂಬೈಯಿಂದ ಬೆಳಗಾವಿಯ ತನಕ ಬಂದು ಸಿಲುಕಿ ಬಿದ್ದವರು, ಗೋವಾದ ಗಡಿಯಲ್ಲಿ ಸಿಲುಕಿಕೊಂಡವರು, ಚಾಮರಾಜನಗರದಲ್ಲಿ ಸಿಲುಕಿಕೊಂಡ ಕರಾವಳಿಯವರಿಗೆ ಯಾಕೆ ಅವಕಾಶ ಸಿಗುತ್ತಿಲ್ಲ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search