ದಕ್ಷಿಣ ಕನ್ನಡದಲ್ಲಿರೋ ಈ ಪುಣ್ಯ ದೇವಾಲಯಗಳಿಗೆ ಹೋಗಲು ಮಿಸ್ ಮಾಡ್ಲೇ ಬೇಡಿ!
ಮಂಗಳೂರು ಅನೇಕ ದೇವಾಲಯಗಳ ನಾಡು ಕರ್ನಾಟಕದ ದೇವರ ನಾಡು ಎಂದು ಕರೆದರೆ ತಪ್ಪಾಗಲ್ಲ. ಯಾಕೆಂದರೆ ಇಲ್ಲಿ ಅನೇಕ ದೇವಾಲಯಗಳು ಇದೆ. ಅದರಲ್ಲೂ ಮುಖ್ಯವಾಗಿ ಹಸಿದವನಿಗೆ ಅನ್ನವನ್ನ ಇಲ್ಲಿನ ಹಲವು ದೇವಾಲಯಗಳು ನೀಡುತ್ತದೆ ಎಂದರೆ ತಪ್ಪಾಗಲ್ಲ. ಇಲ್ಲಿನ ನಂಬಿಕೆ ಪ್ರಕಾರ ಅದು ಕೆವಲ ಅನ್ನವಲ್ಲ ಅದು ದೇವರ ಪ್ರಸಾದ ಎಂದು ಇಲ್ಲಿನ ಭಕ್ತರು ಸಂತೋಷದಿಂದ ಸ್ವೀಕರಿಸುತ್ತಾರೆ. ನಾನು ಬೆಳದ ಊರಿನಲ್ಲಿ ಒಂದು ಪುಣ್ಯ ಕ್ಷೇತ್ರವಿದೆ ಅಲ್ಲಿ ದಿನ ನಿತ್ಯ ದೇವರ ದರ್ಶನ, ಪೂಜೆಗಳ ಜೊತೆಗೆ ದಿನ ನಿತ್ಯ ಅನ್ನದಾನ ಸೇವೆ ನೀಡಲಾಗುತ್ತೆ. ಅದುವೇ ಹಳೆಯ ಕುಡುಮ ಕ್ಷೇತ್ರ ಈಗೀನ ಧರ್ಮಸ್ಥಳ ಇಲ್ಲಿ ಶೀಮಂಜುನಾಥನ್ನು ಆರಾಧಿಸಲಾಗುತ್ತೆ. ದೇಶ ವಿದೇಶದ ಎಲ್ಲಾ ಕಡೆಗಳಿಂದ ಇಲ್ಲಿಗೆ ದೇವರ ದರ್ಶನಕ್ಕೆ ಭಕ್ತರು ಹರಿದು ಬರುತ್ತಾರೆ.
ಧರ್ಮಸ್ಥಳದ ಪಕ್ಕ ಒಂದು ವಿಶಿಷ್ಟ ಗಣಪತಿ ಕ್ಷೇತ್ರವಿದೆ ಅದುವೇ ಸೌತಡ್ಕ ಗಣಪತಿ ಕ್ಷೇತ್ರ. ಈ ದೇವಸ್ಥಾನ ವಿಭಿನ್ನ ಯಾಕೆಂದರೆ ಇಲ್ಲಿ ದೇವರಿಗೆ ಯಾವುದೇ ಕೋಣೆಗಳಿಲ್ಲ ಮುಖ್ಯವಾಗಿ ಅಥಾವ ದೇವರ ಮೇಲೆ ಚಪ್ಪರವು ಇಲ್ಲ.ಹಿಂದಿನ ಕಾಲದಲ್ಲಿ ಈ ಸ್ಥಳ ದೊಡ್ಡ ಕಾಡಗಿತ್ತಂತೆ, ಇಲ್ಲಿ ದನ ಕಾಯಲು ಮಕ್ಕಳು ಬರ್ತಾ ಇದ್ದರಂತೆ. ಹೀಗೆ ದಿನವೂ ಕಲ್ಲಿನ ಮೇಲೆ ಮಕ್ಕಳು ಸೌತೆಕಾಯಿಯನ್ನ ಇಟ್ಟು ಪ್ರಾರ್ಥನೆ ಮಾಡುತಿದ್ದರಂತೆ. ಹೀಗೆ ಈ ಮಕ್ಕಳ ಮುಗ್ದತೆಗೆ ದೇವರು ಒಲಿದ ಅನ್ನೋ ನಂಬಿಕೆ ಇಲ್ಲಿನ ಜನರದ್ದು. ಬೇಡಿ ಬಂದ ಭಕ್ತರನ್ನ ಈ ಗಣಪ ಕೈ ಬಿಡಲ್ಲ ಅನ್ನೊ ವಿಶ್ವಾಸ ಇಲ್ಲಿನ ಭಕ್ತರದ್ದು.
ಇನ್ನು ಇಲ್ಲಿಂದ ಮುಂದೆ ಹೋದರೆ ನಾಗಾರಾಜನ ದೇವಾಲಯ ಅಂದರೆ ಸುಬ್ರಹ್ಮಣ್ಯನ ದೇವಾಸ್ಥಾನ ಕಾಣಸಿಗುತ್ತದೆ. ಇಲ್ಲಿ ನಾನು ನೋಡಿದ ಹಾಗೇ ಎಲ್ಲಾ ಧರ್ಮದವರು ಈ ದೇವಾಲಯಕ್ಕೆ ಭೇಟಿ ನೀಡಿ ತಮಗೆ ಬಂದಂತಹ ವಿಘ್ನವನ್ನ ದೂರ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಅಲ್ಲಿನ ಶಕ್ತಿಗೆ ಎಲ್ಲಾರೂ ತಲೆ ಬಾಗುವವರೆ ಮನೆಯಲ್ಲಿ ಏನೇ ಸಮಸ್ಯೆ ಇರಲಿ, ಅಲ್ಲಿನ ದೇವರ ಮೊರೆ ಹೋದ್ರೆ ಖಂಡಿತವಾಗಿಯೂ ಮನೆಯಲ್ಲಿ ನೆಮ್ಮದಿ, ಶಾಂತಿ ದೊರಕುವುದರಲ್ಲಿ ಯಾವುದೇ ಸಂಶಯ ಇಲ್ಲ. ಇಲ್ಲಿ ವಿಶೇಷ ನಾಗಾಮಂಡಲ, ಆಶ್ಲೇಷ ಪೂಜೆ ನಡೆಯುತ್ತೆ.
ಮಂಗಳೂರು ಬಜ್ಪೆ ಕಡೆ ಹೋದ್ರೆ ಕಟೀಲು ಶ್ರೀ ದುಗಾಪರಮೇಶ್ವರಿ ದೇವಾಲಯ ಕಾಣ ಸಿಗುತ್ತದೆ. ಇಲ್ಲಿ ನದಿಯ ಮಧ್ಯದಲ್ಲೇ ದೇವಿ ಕುಳಿತಿದ್ದಾಳೆ. ಇಲ್ಲಿನ ದೇವಾಲಯಕ್ಕೂ ಇದರದೆ ಆದ ಇತಿಹಾಸವಿದೆ ಇಲ್ಲಿ ಮದುವೆ ಆಗದ ಯುವತಿಯರು ಬಂದು ಮನ ತುಂಬಿ ಪ್ರಾರ್ಥಿಸಿ ದೇವರಿಗೆ ಸೀರೆಯನ್ನ ಅರ್ಪಿಸಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ.
ವಿವಿಧ ವಾಸ್ತು ಶಿಲ್ಪಗಳಿಂದ ಕೂಡಿದ ಕುದ್ರೋಳಿ ದೇವಾಲಯದ ಭೇಟಿಗೆ ವಿವಿಧೆಡೆಯಿಂದ ಪ್ರವಾಸಿಗರು, ಭಕ್ತರು ಬರುತ್ತಾರೆ ಕರ್ನಾಟಕದಲ್ಲಿ ಅತೀ ದೊಡ್ಡ ದಸಾರ ನಡೆಯೋ 2ನೇ ಸ್ಥಳವಿದು. ಇಲ್ಲಿ ವಿದೇಶಿಗರನ್ನ ಹೆಚ್ಚಾಗಿ ನಾವು ನೋಡಬಹುದು. ಈಶ್ವರ ಅಂದ್ರೆ ಸಾಕ್ಷಾತ್ ಶಿವನನ್ನ ಇಲ್ಲಿ ಪೂಜಿಸಲಾಗುತ್ತೆ. ಇಲ್ಲಿನ ವಾಸ್ತು ಶಿಲ್ಪಕ್ಕೆ ಮಾರು ಹೋಗದವರೇ ಇಲ್ಲ.
ಕದ್ರಿ ಮಂಜುನಾಥ ಕೂಡ ತುಂಬಾನೆ ಫೇಮಸ್, ಇಲ್ಲಿ ಶನಿವಾರ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ, ಅಂದು ದೇವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಲಾಗುತ್ತೆ. ಇಲ್ಲಿ 7 ಕೊಳಗಳಿದ್ದು ಈ ಏಳು ಕೊಳಗಳಿಗೆ ಒಂದೊಂದು ಕಥೆಯಿದೆ. ಗಂಗೆಯಿಂದ ಶುದ್ದ ಜಲ ಹರಿದು ಬರೋ ಸ್ಥಳ ಕೂಡವಿದು. ಇದೊಂದು ಪುರಾತನ ಪುಣ್ಯ ಕ್ಷೇತ್ರವಾಗಿದ್ದು ಧರ್ಮಸ್ಥಳ ಮತ್ತು ಕದ್ರಿ ಮಂಜುನಾಥನಿಗೆ ನಂಟಿದೆ ಎಂದು ಪುರಾಣದಲ್ಲಿ ಉಲ್ಲೇಖವಿದೆ.
ಮಂಗಳಾದೇವಿ ದೇವಾಲಯ ಅತೀ ಪುರಾತನ ಹಾಗೂ ಪ್ರಸಿದ್ದಿ ಹೊಂದಿರುವ ದೇವಾಲಯ ಇಲ್ಲಿ ದೇವಿಯನ್ನ ಭಜಿಸಲಾಗುತ್ತದೆ. ಇಲ್ಲಿ ಕೂಡ ಮಗು, ಮದುವೆಯ ಹರಕೆಗೆ ಒಪ್ಪಿಸಲು ವಿವಿಧೆಡೆಯಿಂದ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ಪ್ರತೀ ಶುಕ್ರವಾರ ದೇವಿಗೆ ವಿಶೇಷ ಪೂಜೆಗೈಯಲಾಗುತ್ತೆ. ಇಲ್ಲಿ ಸೀರೆ ನೀಡುವ ಹರಕೆ ಹೆಚ್ಚಿನ ಸಂಖ್ಯೆಯಲ್ಲಿ ರೂಢಿಯಲ್ಲಿದೆ.
ಮುಂಬಯಿಯಲ್ಲಿ ಇರೋ ರೀತಿ ಶ್ರೀ ಸಾಯಿ ಮಂದಿರ ಮಂಗಳೂರಿನ ಚಿಲಿಂಬಿಯಲ್ಲಿದೆ. ಇದು ಚಿಲಿಂಬಿ ಶ್ರೀ ಸಾಯಿಬಾಬಾ ಮಂದಿರವೆಂದೆ ಪ್ರಸಿದ್ದಿ. ಇಲ್ಲಿ ಗುರುವಾರ ಸಾಯಿಬಾಬಾನಿಗೆ ವಿಶೇಷ ಪೂಜೆಯ ಜೊತೆಗೆ ಅನ್ನದಾನವು ನಡೆಯುತ್ತೆ. ಗುರುವಾರದಂದು ಭಕ್ತರ ದಂಡೆ ಇಲ್ಲಿ ಬಂದು ಸೇರುತ್ತೆ. ಇಲ್ಲಿ ಬೇಡಿ ಬಂದ ಭಕ್ತರನ್ನ ಎಂದು ಬಾಬ ಕೈ ಬಿಡುವವನಲ್ಲ ಅನ್ನೋ ನಂಬಿಕೆ ಭಕ್ತರಲ್ಲಿದೆ.
ದಕ್ಷಿಣ ಕನ್ನಡದಲ್ಲಿ ಇಷ್ಟೇ ಅಲ್ಲದೇ ಅನೇಕ ದೇವಾಲಯಗಳು ಕಾಣ ಸಿಗುತ್ತದೆ. ದೇವರ ಪ್ರಾರ್ಥನೆ ಅತೀ ಸೂಕ್ತವಾದ ಸ್ಥಳವು ಕೂಡ ಇದೆ. ದಕ್ಷಿಣ ಕನ್ನಡವನ್ನ ದೇವರ ನಾಡು ಎಮದು ಕರೆದರೂ ತಪ್ಪಾಗಲ್ಲ, ಹಸಿದವನಿಗೆ ಅನ್ನವನ್ನ ಕೊಡುವ ದೇವಾಲಯ, ಭಕ್ತಿಯಿಂದ ಪ್ರಾರ್ಥಿಸಿದರೆ ತನ್ನ ಬೆನ್ನು ಹಿಂದೆ ನಿಲ್ಲುವ ದೇವರು ಇರೋ ಪುಣ್ಯ ಭೂಮಿ ಈ ನಮ್ಮ ಮಂಗಳೂರು.
Leave A Reply