ಇಷ್ಟು ಗಲಾಟೆಯ ಬಳಿಕ ಸದ್ಯ 126 ಹೋರ್ಡಿಂಗ್ಸ್ ಮಾತ್ರ ಅಧಿಕೃತಗೊಂಡಿವೆ. ಉಳಿದವುಗಳ ಕಥೆ ಏನು? ಅವು ಎಷ್ಟು ಕೋಟಿಗಳ ಕಥೆ?
ಮಂಗಳೂರು ಮಹಾನಗರ ಪಾಲಿಕೆಯಿಂದ ನಮ್ಮನ್ನು ರಕ್ಷಿಸುವವರು ಯಾರು? ಕಾನೂನುಗಳು ಎಷ್ಟೇ ಕಠಿಣವಾಗಿರಲಿ ಯಾರೂ ಪ್ರಶ್ನಿಸದೆ ಹೋದರೆ ಅದನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬದಲಾಯಿಸಿ ಬಿಡಬಲ್ಲ ಚತುರರು ನಮ್ಮ ಪಾಲಿಕೆಯಲ್ಲಿ ಇದ್ದಾರೆ. ಇಲ್ಲದೆ ಹೋದರೆ 1996 ರಲ್ಲಿಯೇ ಜಾರಿಯಲ್ಲಿರುವ ಒಂದು ನಿಯಮದ ಪ್ರಕಾರ ಮನಪಾದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಜಾಗಗಳಲ್ಲಿ ಯಾವುದೇ ಹೋರ್ಡಿಂಗ್ ಹಾಕುವಂತಿಲ್ಲ. ಆದರೆ ಯಾವಾಗ ಫಿಜಾ ಮಾಲ್ ಪಾಂಡೇಶ್ವರದಲ್ಲಿ ನಿರ್ಮಾಣವಾಯಿತೊ ಆವಾಗ ಧುತ್ತನೆ 14 ಹೋರ್ಡಿಂಗ್ ಗಳು ಅಲ್ಲಿ ಪ್ರತ್ಯಕ್ಷವಾಗಿದ್
ಮನಪಾದಿಂದ ನಾಮಫಲಕಗಳನ್ನು ಶಿಫ್ಟ್ ಮಾಡಲು ಅನುಮತಿ ಕೊಡಲಾಗಿದೆ ಎಂದು ಹೊಸ ಆದೇಶದ ಪ್ರತಿಯನ್ನು ತಯಾರು ಮಾಡಲಾಯಿತು. ಆದರೆ ನನಗೆ ಆ ಉತ್ತರ ಸಮಾಧಾನ ನೀಡಲಿಲ್ಲ. ಹಾಕಲೇಬಾರದು ಎಂದು ತೀರ್ಮಾನವಾದ ಬಳಿಕ ಶಿಫ್ಟ್ ಮಾಡಬಹುದು ಎನ್ನುವುದು ಕೂಡ ಅಸಂಬದ್ಧ ಎಂದು ನಾನು ವಾದಿಸಿದ ಬಳಿಕ ಆ ಫೆಕ್ಸ್ ಗಳು ಅಲ್ಲಿಂದ ಕಳಚಿ ಬಿದ್ದವು. ಇನ್ನೂ ಹನುಮಂತ ಕಾಮತ್ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಂದುಕೊಂಡ ಮನಪಾದ ಕಂದಾಯ ಇಲಾಖೆ ಕೆಲವು ದಿನಗಳ ಹಿಂದೆ ಒಟ್ಟು 126 ಅನಧಿಕೃತ ಹೋರ್ಡಿಂಗ್ ಗಳನ್ನು ಸಕ್ರಮಗೊಳಿಸಿದೆ. ಈಗ ನೀವೆ ಯೋಚನೆ ಮಾಡಿ. ನಾನು 27.7.15 ರಂದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಉತ್ತರ ಕೇಳಿದಾಗ ಇದ್ದ ಅನಧಿಕೃತ ಹೋರ್ಡಿಂಗ್ ಗಳು 1846. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಪರಿಷತ್ತಿನಲ್ಲಿ ಕೇಳಿದಾಗ ಸಿಕ್ಕಿದ ಲಿಖಿತ ಉತ್ತರ ಅನಧಿಕೃತ ನಾಮಫಲಕಗಳ ಸಂಖ್ಯೆ ಕೇವಲ 19. ಅದರ ನಂತರ ಇಲ್ಲಿಯ ತನಕ 126 ಅನಧಿಕೃತ ಹೋರ್ಡಿಂಗ್ ಗಳನ್ನು ಅಧಿಕೃತಗೊಳಿಸಲಾಗಿ
ಇನ್ನೂ ಸರಕಾರಿ ಜಾಗದಲ್ಲಿ ಮೊದಲಿನಿಂದಲೂ ಇದ್ದ ಹೋರ್ಡಿಂಗ್ ಗಳನ್ನು ಅಭಿವೃದ್ಧಿಯ ಕಾರಣ ನೀಡಿ ಅಲ್ಲಿಂದ ಕಿತ್ತು ಹಾಕಲು ಪಾಲಿಕೆಗೆ ಕಾನೂನಿನಲ್ಲಿ ಅವಕಾಶ ಇದೆ. ಆದ್ದರಿಂದ ಸರಕಾರಿ ಜಾಗದಲ್ಲಿ ಹೋರ್ಡಿಂಗ್ ಅಳವಡಿಸಲು ಅನುಮತಿ ನೀಡುವಾಗ ಒಪ್ಪಂದ ಪತ್ರದಲ್ಲಿ ಒಂದು ನಿರ್ಬಂಧ ನೀಡಿಯೇ ಒಪ್ಪಿಗೆ ಕೊಡಲಾಗುತ್ತದೆ. ಆದ್ದರಿಂದ ಮನಪಾ ಹೋರ್ಡಿಂಗ್ ಕಿತ್ತು ಹಾಕಿತು ಎಂದಾದಾಗ ಅದನ್ನು ಪ್ರಶ್ನಿಸುವ ಹಕ್ಕು ಜಾಹೀರಾತನ್ನು ಹಾಕಿದ್ದ ಏಜೆನ್ಸಿಗಳಿಗೆ ಇರುವುದೇ ಇಲ್ಲ. ಆದರೆ ಮನಪಾದಲ್ಲಿರುವ ಜಾಹೀರಾತು ಏಜೆನ್ಸಿಗಳ ಕೃಪಾಪೋಷಿತರು ಒಂದು ಕಡೆಯಿಂದ ಕಿತ್ತು ಹಾಕುವ ಸಂದರ್ಭ ಬಂದರೆ ಮತ್ತೊಂದು ಕಡೆ ಅದನ್ನು ಅಳವಡಿಸುವ ಅನುಮತಿ ನೀಡಿ ಈ ಜಾಹೀರಾತು ಏಜೆನ್ಸಿಯವರ ಗಾಯಕ್ಕೆ ಮುಲಾಮು ಹಚ್ಚುತ್ತಾರೆ. ಯಾಕೆಂದರೆ ಜಾಹೀರಾತು ಏಜೆನ್ಸಿಯವರು ಅಸಮಾಧಾನಗೊಂಡರೆ ಇವರ ಹೊಟ್ಟೆಗೆ ಕಲ್ಲಲ್ಲವೇ? ಮನಪಾದಲ್ಲಿ ಈ ಹೋರ್ಡಿಂಗ್ ಲಾಬಿ ಜೋರಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ನಾನು ಇವರ ಬಳಿ ವಾದಿಸಿದ ಬಳಿಕ ಇವರು ಹೋರ್ಡಿಂಗ್ ಗಳನ್ನು ತೆಗೆಯಲು ಒಪ್ಪಿದರು ಎಂದಾದರೆ ಮೊದಲೇ ಇವರಿಗೆ ತಾವು ಮಾಡುವುದು ತಪ್ಪು ಎಂದು ಗೊತ್ತಿತ್ತು ಅಲ್ಲವೇ?
Leave A Reply