ನಾನೊಬ್ಬ ಹಿಂದೂ, ಕ್ರಾಂತಿಕಾರಕ ಬದಲಾವಣೆ ತರಲು ಸರಕಾರವನ್ನು ಒತ್ತಾಯಿಸುತ್ತೇನೆ!
ದೇವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಹಣ ಹಾಕಿದರೆ ಅದು ಸರಕಾರಕ್ಕೆ, ಅದೇ ತಟ್ಟೆಯಲ್ಲಿ ಹಾಕಿದರೆ ಅರ್ಚಕರಿಗೆ ಎನ್ನುವ ವಾಕ್ಯವನ್ನು ಹಿಂದೆಲ್ಲೋ ಸಾಮಾಜಿಕ ತಾಣಗಳಲ್ಲಿ ಓದಿದ ನೆನಪು. ನಾವು ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಹಾಕುವ ಹಣವನ್ನು ಸರಕಾರ ಮಸೀದಿಗಳಿಗೆ, ಹಜ್ ಯಾತ್ರೆಗೆ ಕೊಡುತ್ತದೆ, ಆದ್ದರಿಂದ ಡಬ್ಬಿಗೆ ಹಾಕಬೇಡಿ ಎಂದು ಕೆಲವರು ಹೇಳುತ್ತಿದ್ದರು. ಇದನ್ನು ಹೀಗೆ ಪ್ರಚಾರ ಮಾಡುತ್ತಿದ್ದವರು ಯಾವ ಧರ್ಮದವರು ಎಂದು ಮತ್ತೆ ಹೇಳಬೇಕಾಗಿಲ್ಲ.
ನಾನೊಬ್ಬ ಹಿಂದೂ ಧರ್ಮದವನಾಗಿ ಹೇಳುವುದಾದರೆ ನಾವು ಕೊಡುವ ಹಣ ಆ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಬಯಸುವುದು ತಪ್ಪಲ್ಲ. ಈಗ ಉದಾಹರಣೆಗೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ದೇವಸ್ಥಾನಗಳಲ್ಲಿ ದೇವಳದ ನಿತ್ಯ ಖರ್ಚು ಹೋಗಿ ಕೋಟಿಗಟ್ಟಲೆ ಹಣ ಇಡೀ ವರ್ಷ ಉಳಿಯುತ್ತದೆ. ಅಂತಹ ಹಣ ದೇವಸ್ಥಾನದ ಹೊರಗೆ ಕೂಡ ಪ್ರಯೋಜನವಾಗಬೇಕು.
Leave A Reply