• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮುಂಬೈ ಪಾಲಿಕೆ 24 ಗಂಟೆಯೊಳಗೆ ಮಾಡಿದ್ದು ಮಂಗಳೂರಿಗೆ ಯಾಕಾಗಲ್ಲ!!

Hanumantha Kamath Posted On September 10, 2020


  • Share On Facebook
  • Tweet It

ಕಂಗನಾ ರಾಣಾವತ್ ಬಗ್ಗೆ ನಾನು ಡಿಟೇಲ್ಸ್ ಆಗಿ ಹೋಗಲ್ಲ. ಅದನ್ನು ನೀವು ವಾರದಿಂದ ನಿತ್ಯ ಮಾಧ್ಯಮಗಳಲ್ಲಿ ನೋಡಿದ್ದೀರಿ. ನನಗೆ ಆಶ್ಚರ್ಯವಾಗುವುದು ಇಚ್ಚಾಶಕ್ತಿಯ ಬಗ್ಗೆ. ಕಂಗನಾ ಎನ್ನುವ ಓರ್ವ ನಟಿಯ ವಿರುದ್ಧ ತನ್ನ ಸರಕಾರದ ಅಷ್ಟು ಅಸ್ತ್ರಗಳನ್ನು ಓರೆಗೆ ಹಚ್ಚಿದರಲ್ಲ ಉದ್ಭವ್ ಠಾಕ್ರೆ, ಅದರ ಬಗ್ಗೆ ಆಶ್ಚರ್ಯ ಮತ್ತು ಅಸಹ್ಯ ಎರಡೂ ಆಗುತ್ತದೆ. ಕಂಗನಾರ ಸಿನೆಮಾ ನಿರ್ಮಾಣ ಕಂಪೆನಿಯ ಕಚೇರಿಯನ್ನು ಧೂಳೀಪಟ ಮಾಡಲು ಮುಂಬೈ ಪಾಲಿಕೆ ತೆಗೆದುಕೊಂಡದ್ದು ಬರೇ 24 ಗಂಟೆ ಮಾತ್ರ. ಆ ಕಚೇರಿಯ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಲಾಗಿದೆ, ಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಂಬೈ ಪಾಲಿಕೆಗೆ ಗೊತ್ತಾದದ್ದು ಕಂಗನಾ ಶಿವಸೇನೆಯ ವಿರುದ್ಧ ವಾಕ್ದಾಳಿ ಮಾಡಿದ ಬಳಿಕ. ಅಲ್ಲಿಯ ವರೆಗೆ ಆ ಕಟ್ಟಡ ಸರಿಯಾಗಿಯೇ ಇತ್ತು. ಯಾವಾಗ ರಾಣಾವತ್ ಶಿವಸೇನೆಯ ವಿರುದ್ಧ ಹೇಳಿಕೆ ಕೊಟ್ಟಳೋ ಅವಳ ಕಚೇರಿ ಅನಧಿಕೃತ ಎನಿಸಿತು. 24 ಗಂಟೆಯ ನೋಟಿಸು ನಂತರ ಧ್ವಂಸ. ಇಲ್ಲಿ ಕಟ್ಟಡದ ಮಾಲೀಕರಿಗೆ ತನ್ನ ಪರ ವಾದ ಮಂಡಿಸಲು ಅವಕಾಶವೇ ನೀಡಲಿಲ್ಲ. ಅಷ್ಟಕ್ಕೂ ಕಟ್ಟಡ ಮಾಲಕಿ ರಾಜ್ಯದಲ್ಲಿಯೇ ಇರಲಿಲ್ಲ. ಆಕೆ ಬಂದು ವಾದಿಸುವಷ್ಟು ಸಮಯವನ್ನು ಮುಂಬೈ ಪಾಲಿಕೆ ನೀಡಲಿಲ್ಲ. ಮಾಲಕಿ ಕೋರ್ಟಿಗೆ ಹೋಗಿ ತಡೆಯಾಜ್ಞೆ ತರುತ್ತಾರೆ ಎಂದು ಗೊತ್ತಿಲ್ಲದಷ್ಟು ಅಮಾಯಕರಲ್ಲ ಠಾಕ್ರೆ. ಅದಕ್ಕಾಗಿ ಕಂಗನಾ ಹರ್ಯಾಣದಲ್ಲಿ ವಿಮಾನದಲ್ಲಿ ಕುಳಿತು ಮುಂಬೈನಲ್ಲಿ ಇಳಿಯುವ ಮೊದಲೇ ಆಕೆಯ ಕಚೇರಿ ಈ ನೆಲದ ಮೇಲೆ ಇರಲೇಬಾರದು ಎಂದು ಶಿವಸೇನೆ ಎನ್ನುವ ಪುಟ್ಟ ಪ್ರಾದೇಶಿಕ ಪಕ್ಷ ನಿರ್ಧರಿಸಿಯಾಗಿತ್ತು. ನಾನು ಯಾಕೆ ಈ ವಿಷಯವನ್ನು ಬರೆಯುತ್ತಿದ್ದೇನೆ ಎಂದರೆ ಖಂಡಿತವಾಗಿ ಇಲ್ಲಿ ಮುಂಬೈ ಮೇಯರ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ನಿಜ. ಆದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆಗೆ ಏನು ಆಗಿದೆ.

ಮಂಗಳೂರಿನಲ್ಲಿ ಹರೀಶ್ ಕುಮಾರ್ ಪಾಲಿಕೆಯ ಆಯುಕ್ತರಾಗಿದ್ದಾಗ ಅನಧಿಕೃತ ಕಟ್ಟಡಗಳು ಎನ್ನುವ ದೊಡ್ಡ ಪಟ್ಟಿಯನ್ನೇ ಮಾಡಿದ್ರು. ಇನ್ನೇನೂ ಅವರು ಅದನ್ನು ಕೆಡವಲು ಹೊರಟಾಗ ಆ ಕಟ್ಟಡದ ಮಾಲೀಕರಲ್ಲಿ ಅನೇಕರು ಕೋರ್ಟಿಗೆ ಹೋದರು. ಆದರೆ ಸುಮಾರು 56 ಕಟ್ಟಡಗಳ ಮಾಲೀಕರು ಕೋರ್ಟಿಗೆ ಹೋಗಲೇ ಇಲ್ಲ. ಇನ್ನು ಕೆಲವರು ಅಕ್ರಮ- ಸಕ್ರಮಕ್ಕೆ ಅರ್ಜಿ ಹಾಕಿದರು. ಆದರೆ ಅನೇಕವು ಈಗಲೂ ತಡೆಯಾಜ್ಞೆಯೂ ಇಲ್ಲದೆ, ಕೋರ್ಟಿಗೆ ಹೋಗದೆ, ಅಕ್ರಮ-ಸಕ್ರಮದಲ್ಲಿ ಏನೂ ಮಾಡದೇ ಹಾಗೆ ಉಳಿದಿವೆ. ಅದನ್ನು ಕಣ್ಣುಮುಚ್ಚಿ ಕೆಡವುದು ಎಷ್ಟು ಹೊತ್ತಿನ ಮಾತು. ಮುಂಬೈ ಪಾಲಿಕೆ ಎಲ್ಲಾ ಗೊತ್ತಿದ್ದೂ, ಧ್ವಂಸ ಮಾಡಿಲ್ವಾ? ಕಂಗನಾ ಅತಿಕ್ರಮಣ ಮಾಡಿ ಕಟ್ಟಿದ್ದಾರಾ, ಇಲ್ವಾ ಅದು ಬೇರೆ ವಿಷಯ. ಒಂದು ವೇಳೆ ಅತಿಕ್ರಮಣವಾಗಿ ಕಟ್ಟಿದ್ದರೂ ಅವರಿಗೆ ನ್ಯಾಯಯುತವಾಗಿ ಒಂದಿಷ್ಟು ಸಮಯ ಕೊಡಬಹುದಿತ್ತು. ಇಷ್ಟು ಗಡಿಬಿಡಿಯಲ್ಲಿ ಕೆಡವುಹ ಅಗತ್ಯವೇ ಇರಲಿಲ್ಲ. ಆದರೂ ಕೆಡವಿದ್ದಾರೆ. ಅತಿಕ್ರಮಣ ಕಟ್ಟಡವಾಗಿದ್ದರೆ ಪಾಲಿಕೆ ಗೆದ್ದ ಹಾಗೆ. ಸಕ್ರಮವಾಗಿದ್ದರೆ, ಕಂಗನಾ ಗೆದ್ದು ಬಿಟ್ಟರೆ ಉದ್ಭವ್ ಮತ್ತೆಂದೂ ಸಿಎಂ ಆಗುವ ಕನಸನ್ನು ಕಾಣುವಂತಿಲ್ಲ. ಯಾಕೆಂದರೆ ಉದ್ಭವ್ ದ್ವೇಷ ರಾಜಕಾರಣ ಮಾಡಿರುವುದು ಸ್ಪಷ್ಟ. ಆಗ ಸಂಜಯ್ ರಾಹುತ್ ಎಂಬ ಎಂಪಿ ಸಾಮ್ನಾದ ಸಂಪಾದಕರಾಗಿಯೂ ಶಿವಸೇನೆಯನ್ನು ಕನಿಷ್ಟ ಗೌರವಯುತ ವಿಪಕ್ಷಕ್ಕೂ ತರಲು ಕಷ್ಟವಾದೀತು.

ನಾನು ಮಂಗಳೂರಿನಲ್ಲಿ ದ್ವೇಷದ ರಾಜಕಾರಣ ಮಾಡಿ ಎನ್ನಲ್ಲ. ಅದು ಮಾಡುವಂತಹ ಧೈರ್ಯ ಯಾವ ಪಕ್ಷದ ಮುಖಂಡರಲ್ಲಿಯೂ ಇಲ್ಲ. ಯಾಕೆಂದರೆ ಜನ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರುತ್ತಾರೆ. ಆದರೆ ಅತಿಕ್ರಮಣ ಮಾಡಿ ಕಟ್ಟಿದ್ದ ಅನಧಿಕೃತ ಕಟ್ಟಡಗಳು ಹಲವು ಇವೆ. ಅವುಗಳಿಗೆ ಒಂದು ಗತಿ ಕಾಣಿಸಬಹುದಲ್ಲ. ಅದರಲ್ಲಿ ತಪ್ಪೇನಿದೆ. ಹೇಗೂ ಪಾಲಿಕೆಗೆ ಯುವ ಆಯುಕ್ತರು ಬಂದಿದ್ದಾರೆ. ಐಎಎಸ್ ಎಂಬ ಪದವಿ ಮತ್ತು ಸಾಮರ್ತ್ಯ ಎರಡೂ ಇದೆ. ಹೇಗೂ ಪಾಲಿಕೆಯಲ್ಲಿ ಗಂಡುಮಗನಾಗಿ ಮೇಯರ್ ದಿವಾಕರ್ ಪಾಂಡೇಶ್ವರ್ ಇದ್ದಾರೆ. ಇಬ್ಬರೂ ಉತ್ಸಾಹಿ ಶಾಸಕರಿದ್ದಾರೆ. ಎಲ್ಲರೂ ಮನಸ್ಸು ಮಾಡಿದರೆ ಈ ಬಾರಿ ನವರಾತ್ರಿಯ ಮೊದಲೇ ಅನಧಿಕೃತ ಕಟ್ಟಡಗಳು ಮಾಯವಾಗಬಹುದು. ಹೇಗೂ ಕೆಡವುಹ ಅಧಿಕಾರ ಮತ್ತು ಅವಕಾಶ ದಾಖಲೆಯಲ್ಲಿದೆ. ಇಚ್ಚಾಶಕ್ತಿ ಬೇಕು ಅಷ್ಟೇ. ಬೇಕಾದರೆ ನನ್ನನ್ನು ಕರೆದರೆ ನಾನು ಆ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಬಲ್ಲೆ. ಯಾವ ಕಟ್ಟಡ, ಕೆಡವಿದರೆ ಯಾಕೆ ಯಾರಿಗೂ ಕೋರ್ಟಿನಿಂದ ಛೀಮಾರಿ ಬೀಳಲ್ಲ. ಎಲ್ಲವೂ ನನ್ನ ಬಳಿ ಅಂಕಿಅಂಶ ಇದೆ. ಹನುಮಂತ ಕಾಮತ್ ಅವರನ್ನು ಕರೆದರೆ ನಾವು ಚಿಕ್ಕವರಾಗುತ್ತೇವೆ ಎಂದು ಮನಸ್ಸಿನಲ್ಲಿ ಇದ್ದರೆ ನಿಮ್ಮ ಇಷ್ಟ. ಅಷ್ಟಕ್ಕೂ ಮುಂಬೈ ಪಾಲಿಕೆಯಂತೆ ಭಂಡ ಧೈರ್ಯ ಮಾಡಲು ಎದೆಗುಂಡಿಗೆ ಗಟ್ಟಿ ಇರಬೇಕು. ಕೆಡವಿದರೆ ಅವನು ಬೇಸರ ಮಾಡುತ್ತಾನೆ, ಇವನಿಗೆ ಲಾಸ್ ಆಗುತ್ತದೆ ಎಂದು ಅಂದುಕೊಂಡರೆ ಏನೂ ಪ್ರಯೋಜನವಿಲ್ಲ. ಬೇಕಾದರೆ ಅನಧಿಕೃತ ಕಟ್ಟಡ ಕೆಡವಿದವರು ನಾವೇ ಎಂದು ನಾಲ್ಕು ಫ್ಲೆಕ್ಸ್ ಹಾಕಲಿ. ಅದರಿಂದ ನಾಲ್ಕು ವೋಟ್ ಜಾಸ್ತಿ ಬೀಳುತ್ತದೆ. ಧಮ್ ಇದೆಯಾ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search