• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪೊಲೀಸರ ಕೊಲೆಯತ್ನ ಮಾಡಿದವನ ಮೂಲ ಹುಡುಕಿದರೆ ತಿಮಿಂಗಲ ಸಿಗಲೂಬಹುದು!!

Hanumantha Kamath Posted On December 18, 2020


  • Share On Facebook
  • Tweet It

ಗಾಂಜಾವನ್ನು ಮೂಲದಿಂದಲೇ ಕಿತ್ತು ಬಿಸಾಡಿದ್ದರೆ ಅದು ನಾಗರಿಕ ಸಮಾಜದೊಳಗೆ ಬಂದು ಪೊಲೀಸರನ್ನೇ ಕಚ್ಚುತ್ತದೆ ಎನ್ನುವುದಕ್ಕೆ ಹಾಡುಹಗಲೇ ಒಬ್ಬ ಯುವಕನಡೆದುಕೊಂಡು ಬಂದು ಸಮವಸ್ತ್ರದಲ್ಲಿದ್ದ ಪೊಲೀಸ್ ಹೆಡ್ ಕಾನ್ಸಟೇಬಲಿಗೆ ತಲವಾರು ಬೀಸುತ್ತಾನೆ ಎನ್ನುವುದೇ ಸಾಕ್ಷಿ. ಪೊಲೀಸರು ಮತ್ತು ಸಿಸಿಬಿ ಡ್ರಗ್ಸ್ ವಿಷಯ ಉತ್ತುಂಗದಲ್ಲಿದ್ದಾಗ, ಮಾಧ್ಯಮಗಳಲ್ಲಿ ಜೋರಾಗಿ ಚರ್ಚೆಯಲ್ಲಿದ್ದಾಗ ಆಕ್ಟಿವ್ ಆಗಿ ಗಾಳಿಯಲ್ಲಿ ಲಾಠಿ ಬೀಸಿ ತಮ್ಮ ಇರುವಿಕೆಯನ್ನು ತೋರಿಸುತ್ತಾರೆ. ಅದೇ ವಿಷಯ ತಣ್ಣಗಾಗುತ್ತಿದ್ದಂತೆ ಯಾವ ಡ್ರಗ್ಸ್ ಡೀಲರ್ ಕೂಡ ಯಾರಿಗೂ ನೆನಪಿರುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ಪೊಲೀಸರಿಗೆ ಇಂತಿಂತಹ ಅಂಗಡಿಗಳಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದೆ ಎಂದು ಗೊತ್ತಿದ್ದೂ ಮೌನವಾಗಿರುತ್ತಾರೆ ಎನ್ನುವುದು ಕೂಡ ಪೂರ್ತಿ ಸುಳ್ಳಲ್ಲ.
ಪೊಲೀಸರು ಮನಸ್ಸು ಮಾಡಿದರೆ ಗಾಂಜಾ ಗಿರಾಕಿಗಳನ್ನು ಚಡ್ಡಿಯಲ್ಲಿ ನಿಲ್ಲಿಸಿ ಬೆಂಡೆತ್ತುವುದು ಕೂಡ ಕಷ್ಟವಲ್ಲ. ಇದೆಲ್ಲವೂ ಕಟ್ಟುನಿಟ್ಟಾಗಿ ಆಗದೇ ಇರುವುದರಿಂದ ಸೈಕಲ್ ತುಳಿಯುವ ಯುವಕರು ಪೊಲೀಸರಿಗೆ ರಕ್ತ ಬರಿಸುತ್ತಿದ್ದಾರೆ. ಯಾವುದೋ ಕುಗ್ರಾಮದಲ್ಲಿ ರಾತ್ರಿ ಪೊಲೀಸ್ ಸಿಬ್ಬಂದಿಯನ್ನು ಹೊಂಚು ಹಾಕಿ ಕಾದು ಗುಂಪಿನಲ್ಲಿ ಬಂದು ಅಟ್ಯಾಕ್ ಮಾಡುವುದು ಬೇರೆ. ಮೊನ್ನೆ ಹಳೆ ನ್ಯೂಚಿತ್ರಾ ಥಿಯೇಟರ್ ಬಳಿ ಆದದ್ದೇ ಬೇರೆ. ಸದ್ಯ ಪೊಲೀಸರು ಕುದ್ರೋಳಿ ಬಳಿ ನಿವಾಸಿ 25 ವರ್ಷದ ನವಾಜ್ ಎನ್ನುವವನನ್ನು ಬಂಧಿಸಿದ್ದಾರೆ. ಇನ್ನೊಬ್ಬನ ಬಂಧನ ಆಗಲಿದೆ. ಒಟ್ಟು ಇಬ್ಬರು ಸೇರಿ ಈ ದುಷ್ಕತ್ಯ ಮಾಡಿದ್ದಾರಾದರೂ ಇವರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಕೂಡ ಪತ್ತೆ ಹಚ್ಚಬೇಕು. ಅದರೊಂದಿಗೆ ಆ ಯುವಕ ಗಾಂಜಾ ನಶೆಯಲ್ಲಿ ಈ ಕೃತ್ಯ ಮಾಡಿರುವುದೇ ಆದರೆ ಅವನಿಗೆ ಗಾಂಜಾ ಎಲ್ಲಿಂದ ಸಿಕ್ಕಿತ್ತು. ಯಾರು ಕೊಟ್ಟರು? ಅವರು ಕೊಟ್ಟಿದ್ದು ಪೊಲೀಸರೊಬ್ಬರ ಕೊಲೆ ಮಾಡೋದಿಕ್ಕಾ? ಇದು ಕೂಡ ಪತ್ತೆ ಹಚ್ಚಿ ಬಯಲಿಗೆ ಎಳೆಯಬೇಕು. ಡಿಸೆಂಬರ್ 19 ಸಿಎಎ ಪ್ರತಿಭಟನೆಯಿಂದ ಮಂಗಳೂರಿನಲ್ಲಿ ಗೋಲಿಬಾರ್ ನಡೆದು ಭರ್ತಿ ಒಂದು ವರ್ಷ. ಅದರ ದ್ವೇಷಾಗ್ನಿ ಕೆಲವರಲ್ಲಿ ಇನ್ನೂ ಇದೆ ಎನ್ನುವುದಕ್ಕೆ ಕೆಲವು ದಿನಗಳ ಹಿಂದಿನ ಗೋಡೆಬರಹಗಳೇ ಸಾಕ್ಷಿ. ಆವತ್ತು ದೊಂಬಿಯಲ್ಲಿ ಭಾಗವಹಿಸಿ ಪೊಲೀಸರತ್ತ ಪೆಟ್ರೋಲ್ ಬಾಂಬ್ ಬಿಸಾಡಿದ ಪುಂಡರ ಗುಂಪಿನಲ್ಲಿದ್ದ ಇಬ್ಬರ ಸಾವಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಪೊಲೀಸರ ತಲೆ ಕೂಡ ಉರುಳಿಸುವ ಸಂಚು ವಿದೇಶದಲ್ಲಿ ಆಗಿರಲೂಬಹುದು. ಅದಕ್ಕೆ ಹಣವೂ ಪೂರೈಕೆ ಆಗಿರಬಹುದು. ಆ ಹಣದಿಂದ ಕೆಲವರು ಇಂತವರನ್ನು ಬಳಸಿರಲೂಬಹುದು. ಈಗ ಬಂಧಿತನಾದವನಿಂದ ಹಲವು ಸ್ಫೋಟಕ ವಿಷಯಗಳನ್ನು ಬಯಲಿಗೆ ಎಳೆಯಬೇಕಿದೆ. ಯಾಕೆಂದರೆ ಆವತ್ತು ಬಂದರು ಪ್ರದೇಶದಲ್ಲಿ ದೊಂಬಿಯನ್ನು ಹತ್ತಿಕ್ಕಲು ಪೊಲೀಸರು ತೆಗೆದುಕೊಂಡಿದ್ದ ಕ್ರಮ ಸೂಕ್ತವಾಗಿತ್ತು. ಇಲ್ಲದಿದ್ದರೆ ಮಂಗಳೂರು ಹೊತ್ತಿ ಉರಿಯುತ್ತಿತ್ತು. ಒವೈಸಿ ಹೇಳಿದ ಹಾಗೆ, 15 ನಿಮಿಷ ಭಾರತದ ಪೊಲೀಸರು ಮೌನವಾಗಿದ್ದರೆ ನಾವು ನಮ್ಮ ಬಲ ತೋರಿಸಲಿದ್ದೇವೆ. ಇವತ್ತು ಪೊಲೀಸರು ಶಕ್ತರಾಗಿರುವುದರಿಂದ ನಾವು ಚೆನ್ನಾಗಿದ್ದೇವೆ. ಆದರೆ ಪೆಟ್ರೋಲ್ ಬಾಂಬ್ ಎಸೆಯುತ್ತಿದ್ದವರ ಮೇಲೆ ಪೊಲೀಸರು ತೆಗೆದುಕೊಂಡ ಕ್ರಮವನ್ನು ಗಾಂಜಾ ಡೀಲರ್ ಗಳ ಮೇಲೆಯೂ ತೆಗೆದುಕೊಳ್ಳಬೇಕು. ಇದು ನಿಧಾನ ವಿಷ. ಮೊನ್ನೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಗಳ ಮನೆಗೆ ಮತಾಂಧರು ಪೂರೈಸಬೇಕಾದ ಹಣ, ವಸ್ತು ಪೂರೈಸಿರಬಹುದು. ಆರೋಪಿಗಳ ನ್ಯಾಯಾಲಯದ ಖರ್ಚನ್ನು ಕೂಡ ನೋಡುವ ವ್ಯವಸ್ಥೆ ಈಗಾಗಲೇ ಆಗಿರಬಹುದು. ಇದನ್ನು ಯಾರು ವ್ಯವಸ್ಥೆ ನೋಡುತ್ತಿದ್ದಾರೆ ಎನ್ನುವುದರ ತನಿಖೆ ಕೂಡ ಆಗಬೇಕು. ಯಾಕೆಂದರೆ ಪೊಲೀಸರ ಮೇಲೆ ಕೊಲೆಯತ್ನ ಎನ್ನುವುದು ಚಿಕ್ಕ ವಿಷಯವೇನಲ್ಲ. ಈಗ ಸಿಕ್ಕಿಬಿದ್ದಿರುವ ಮೀನುಗಳನ್ನು ಹಿಡಿದು ತಿಮಿಂಗಲದ ಬಳಿ ಹೋಗಲು ಅವಕಾಶವಿದೆ.
ಇನ್ನು ಈ ಪ್ರಕರಣದಿಂದ ಮಂಗಳೂರು ಪೊಲೀಸರು ಕಲಿಯಬೇಕಾಗಿರುವ ಮತ್ತೊಂದು ವಿಷಯವೇನೆಂದರೆ ಅವರ ಗುಪ್ತಚರ ವಿಭಾಗ ವೀಕ್ ಆಗಿರುವುದು. ಮುಂಚೆ ಹೀಗೆ ಆಗುತ್ತಿರಲಿಲ್ಲ. ಎನ್ಟಿ ರೌಡಿ ಸ್ಕ್ಯಾಡ್ ಹಿಂದೆ ಇತ್ತು. ಪೊಲೀಸರ ಮೇಲೆ ಹಲ್ಲೆ ಮಾಡುವುದು ಬಿಡಿ ಆ ಬಗ್ಗೆ ಯೋಚಿಸುವವರಿಗೆ ಪೊಲೀಸರು ಎಲ್ಲಿಗೆ ಕಳುಹಿಸಬೇಕೊ ಅಲ್ಲಿ ಕಳುಹಿಸಿಬಿಡುತ್ತಿದ್ದರು. ಈ ವಿಷಯದಲ್ಲಿ ಅವರು ಯಾವ ಹಸ್ತಕ್ಷೇಪವನ್ನು ಸಹಿಸುತ್ತಿರಲಿಲ್ಲ. ಈಗಲೂ ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಕಂಡುಬಂದರೆ ಅದನ್ನು ತೀವ್ರವಾಗಿ ವಿರೋಧಿಸಬೇಕು. ಹೆಚ್ಚೆಂದರೆ ಉನ್ನತ ಪೊಲೀಸ್ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬಹುದು. ಸರಕಾರಿ ಇಲಾಖೆಗೆ ಸೇವೆಗೆ ಸೇರುವಾಗ ಇದಕ್ಕೆಲ್ಲ ತಯಾರಿರಬೇಕು. ಅದು ಬಿಟ್ಟು ಹೊಂದಾಣಿಕೆ ಮಾಡಿಕೊಂಡು ಹೋದರೆ ತಲವಾರುಗಳು ತಮ್ಮ ಮೇಲೆ ಝಳಪಿಸಪಡಬಹುದು ಎಂದು ಗೊತ್ತಿದ್ದರೆ ಸಾಕು!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search