• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಾಯಿ ಹೃದಯದ ರೈತ ಪೊಲೀಸರ ಮೇಲೆ ತಲವಾರು ಬೀಸಲು ಸಾಧ್ಯವೇ ಇಲ್ಲ!!

Hanumantha Kamath Posted On January 27, 2021


  • Share On Facebook
  • Tweet It

10 ರಿಂದ 12 ಸಭೆಗಳು ನಡೆದವು. ಆದರೂ ಒಂದು ಮಧ್ಯಂತರ ನಿರ್ಣಯಕ್ಕೆ ಬರಲು ರೈತರಿಗೂ, ಸರಕಾರಕ್ಕೂ ಸಾಧ್ಯವಾಗಿಲ್ಲ. ಅದಕ್ಕೆ ಮುಖ್ಯ ಕಾರಣ ಏನು ಅಂದರೆ ರೈತ ಮುಖಂಡರು ಸಭೆಗೆ ಮುಕ್ತ ಮನಸ್ಸಿನಿಂದ ಬರಲೇ ಇಲ್ಲ. ತಮಗೆ ಯಾವ ವಿಷಯದಲ್ಲಿ ಸಂಶಯಗಳು ಇದ್ದಾವೆಯೋ ಆ ವಿಷಯದಲ್ಲಿ ಸೃಷ್ಟೀಕರಣ ಕೇಳಿದ್ದರೆ, ಅದು ಕೂಡ ಲಿಖಿತವಾಗಿ ಕೇಳಿ ತೃಪ್ತಿಗೊಂಡರೆ ಅಲ್ಲಿಗೆ ಸಮಸ್ಯೆ ಎರಡು ತಿಂಗಳ ಮೊದಲೇ ಪರಿಹಾರವಾಗುತ್ತಿತ್ತು. ಆದರೆ ಆಗಿರುವುದೇನು? ಸಭೆಗೆ ಬಂದ ರೈತ ಮುಖಂಡರು ಕಿವಿ ಮುಚ್ಚಿಕೊಳ್ಳುತ್ತಿದ್ದರು. ಕೇವಲ ಸಮಯ ಕೊಲ್ಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದು ನಿಜವೋ, ಸುಳ್ಳೊ ಎನ್ನುವುದು ಸಭೆಯಲ್ಲಿ ಭಾಗವಹಿಸಿದ ಕೇಂದ್ರ ಮಂತ್ರಿಗಳು ಹೇಳಬೇಕು. ಆದರೆ ರೈತರು ತಮ್ಮ ಹೋರಾಟದ ಅಂತಿಮ ಸುತ್ತಿನಲ್ಲಿ ಮಾತ್ರ ಕಣ್ಣು, ಕಿವಿ, ಮೂಗು ಎಲ್ಲವನ್ನು ತೆರೆದಿಡಬೇಕಾಗಿತ್ತು. ಹಾಗೆ ಮಾಡದೇ ಇದ್ದ ಪರಿಣಾಮ ಅವರ ಗುಂಪಿನೊಳಗೆ ತೋಳಗಳು ನುಗ್ಗಿದ್ದವು. ಅವು ಕೈಗೆ ಖಲಿಸ್ತಾನ ಎಂದು ಬರೆದ ಕಡಗವನ್ನು ಧರಿಸಿದ್ದವು. ತಲವಾರು ತೆಗೆದುಕೊಂಡೇ ಬಂದಿದ್ದವು. ಕುದುರೆಗಳು ಒಳಗೆ ಬಂದಿದ್ದವು. ಲಾಠಿ, ಆಯುಧಗಳ ನಡುವೆ ಗಲಾಟೆ ಪರಾಕಾಷ್ಟೆ ತಲುಪಿತ್ತು. ಅಂತಿಮವಾಗಿ ನಮಗೆ ಹೊಡೆಯಬೇಡಿ ಎಂದು ಪೊಲೀಸರು ಕೈ ಮುಗಿದು ಬೇಡಿಕೊಳ್ಳುವಂತಾಯಿತು. ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜಕ್ಕೆ ಸಮಾನವಾಗಿ ಸಿಖ್ ಧರ್ಮದ ಧ್ವಜ ಹಾಗೂ ರೈತರ ಯೂನಿಯನ್ ಧ್ವಜ ಹಾಕಲಾಯಿತು. ಇದೆಲ್ಲ ನೋಡುವಾಗ ರೈತರ ಹೋರಾಟ ದಾರಿ ತಪ್ಪಿತಾ ಎನಿಸದೇ ಇರುವುದಿಲ್ಲ. ಒಂದು ಹೋರಾಟಕ್ಕೆ ಕ್ರಾಂತಿಕಾರಿ ತಿರುವು ಸಿಗುವುದು ಹೊಸತೇನಲ್ಲ. ಆದರೆ ಹೋರಾಟಗಳನ್ನು ಯಾರೋ ಹೈಜಾಕ್ ಮಾಡಿ ಮೂಲ ಉದ್ದೇಶಕ್ಕೆ ಹಾನಿ ಮಾಡಿ ತಮ್ಮ ಮೇಲುಗೈ ಸ್ಥಾಪಿಸುವುದು ಇದೆಯಲ್ಲ, ಅದೇ ಅಸಹ್ಯ. ಇಲ್ಲಿ ರೈತರ ಹೋರಾಟ ಇದ್ದದ್ದು ಕೇಂದ್ರ ಸರಕಾರ ಜಾರಿಗೆ ತರಲು ತಯಾರಾಗಿರುವ ಮೂರು ಕಾಯ್ದೆಗಳ ಬಗ್ಗೆ. ಯಾವುದೇ ಕಾಯ್ದೆ ತರುವ ಯಾವುದೇ ಸರಕಾರ ನೂರಕ್ಕೆ ನೂರಕ್ಕೆ ಸರಿಯಾಗಿರುತ್ತೆ ಎಂದು ನಾನು ಹೇಳುವುದಿಲ್ಲ. ಎಸಿ ರೂಂನಲ್ಲಿ ಕುಳಿತು ಕಾಗದದ ಮೇಲೆ ಬುದ್ಧಿಮತ್ತೆ ಪ್ರದರ್ಶಿಸುವ ಅಧಿಕಾರಿಗಳು ಗ್ರೌಂಡ್ ರಿಯಾಲಿಟಿ ಬಗ್ಗೆ ಯೋಚಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಹೀಗೆ ಒತ್ತಡ ಹಾಕಿ ಎರಡೂ ಕಡೆಯವರಿಗೆ ತೊಂದರೆ ಆಗದೆ ಕಾಯ್ದೆ ರೂಪಿಸಬೇಕಾಗಿರುವುದು ಅತ್ಯಗತ್ಯ. ಆದರೆ ಹೋರಾಟದಲ್ಲಿರುವವರು ತಮ್ಮ ಬಿಗಿ ನಿಲುವಿಗೆ ಅಂಟಿಕೊಂಡು ಕುಳಿತರೆ ಕಷ್ಟ. ಹಾಗಂತ ಸರಕಾರದ ಮೇಲೆ ದ್ವೇಷ ಕಾರಲು ಆ ಮೂಲಕ ಉದ್ವೀಗ್ನತೆ ಸೃಷ್ಟಿ ಮಾಡಲು ಸಮಾಜ ಘಾತುಕ ಶಕ್ತಿಗಳನ್ನು ತಮ್ಮ ಹೋರಾಟದಲ್ಲಿ ಸೇರಿಸಿಕೊಂಡರೆ ಅದು ನಿಜಕ್ಕೂ ದೇಶದ್ರೋಹ. ನಮಗೆಲ್ಲ ಗೊತ್ತಿರುವಂತೆ ಖಲಿಸ್ತಾನ ಚಳುವಳಿಯೇ ಒಂದು ದೇಶದ್ರೋಹಿ ಹೋರಾಟ. ದೇಶದ ಒಳಗೆ ಪ್ರತ್ಯೇಕ ರಾಷ್ಟ್ರವನ್ನು ಬಯಸುವುದು ನಿಜಕ್ಕೂ ಅಪ್ಪಟ ದೇಶದ್ರೋಹಿ ಕೃತ್ಯ. ಅದನ್ನು ಹತ್ತಿಕ್ಕಲು ಹೋದ ಇಂದಿರಾ ಗಾಂಧಿಯೇ ಪ್ರಾಣ ಕಳೆದುಕೊಳ್ಳಬೇಕಾಯಿತು. ವ್ಯವಸ್ಥಿತವಾಗಿ ಸಂಚು ರೂಪಿಸಿ ಪ್ರಧಾನಿ ಇಂದಿರಾ ಗಾಂಧಿಯನ್ನು ಹತ್ಯೆ ಮಾಡಲಾಗಿತ್ತು. ಈಗ ಮೋದಿಯವರ ಮೇಲೆ ಸಿಖ್ ಕೋಪ ತಿರುಗಿದಂತೆ ಕಾಣುತ್ತಿದೆ. ಇಲ್ಲಿ ಹೋರಾಟ ಮಾಡುವವರು ತಾವು ರಾಷ್ಟ್ರದ ಸ್ವತುಗಳಿಗೆ ಹಾನಿ ಮಾಡಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟ ನಂತರವೂ ಪಾನಮತ್ತರಾಗಿ, ಖಡ್ಗ ಝಳಪಿಸಿ ಪೊಲೀಸರ ಮೇಲೆ ಮುಗಿ ಬೀಳುತ್ತಾರೆ ಎಂದರೆ ಅವರು ರೈತರಾಗಲು ಸಾಧ್ಯವಲ್ಲ. ಹಾಗಂತ ರೈತರಿಗೆ ಕೋಪ ಬರಬಾರದು ಎಂದೆನಿಲ್ಲ. ಆದರೆ ಈ ಮಣ್ಣಿನಲ್ಲಿ ಬೆಳೆ ಬೆಳೆಯುವ ರೈತ ಯಾವಾಗಲೂ ಹಿಂಸೆಗೆ ತೊಡಗುವುದಿಲ್ಲ. ಯಾಕೆಂದರೆ ಅವನದ್ದು ತಾಯಿ ಹೃದಯ. ಆದರೆ ದೆಹಲಿಯಲ್ಲಿ ಗೂಂಡಾಗಳಂತೆ ವರ್ತಿಸಿದವರು ರೈತರಾ ಎನ್ನುವ ಅನುಮಾನ ಮೂಡುತ್ತದೆ. ಅದರೊಂದಿಗೆ ಆಶ್ಚರ್ಯವಾಗುವುದು ದೆಹಲಿಯಲ್ಲಿ ಇಂತಹ ಗಲಭೆ ನಡೆಯಬಹುದು ಎಂದು ಗುಪ್ತಚರ ಇಲಾಖೆಗೆ ಗೊತ್ತೆ ಆಗಿಲ್ವಾ? ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವುದು ಕೇಂದ್ರ ಸರಕಾರ. ಬೇರೆ ರಾಜ್ಯದಲ್ಲಿ ಆದರೆ ಸರಕಾರ ಬೇರೆ ಇತ್ತು. ಅವರೇ ಕುಮ್ಮಕ್ಕು ಕೊಟ್ಟಿರಬಹುದು ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದರೇನೋ. ಆದರೆ ದೆಹಲಿಯಲ್ಲಿ ಸರಕಾರ ಬೇರೆ ಪಕ್ಷದ್ದೇ ಇದ್ದರೂ ಒಬ್ಬ ಪೊಲೀಸ್ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಬೇಕಾದರೂ ಕೇಂದ್ರದ ಗೃಹ ಇಲಾಖೆ ಹೇಳಬೇಕು. ಮಿಲಿಟರಿ ಅವರ ಕೈಯಲ್ಲಿಯೇ ಇದೆ. ಮೂಗಿನ ಕೆಳಗೆ ಸಿಂಬಳ ಬರುವ ಸಂದರ್ಭದಲ್ಲಿ ಮೂಗಿಗೆ ವಿಷಯ ಗೊತ್ತಾಗಿಲ್ಲ ಎಂದರೆ ಏನು ಅರ್ಥ. ಇನ್ನು ಕೆಲವರಿಗೆ ಇಲ್ಲಿ ಕೇಂದ್ರ ಸರಕಾರ ಫೈರಿಂಗ್ ಮಾಡಲಿ, ಒಂದಿಷ್ಟು ಹೆಣಗಳು ಬೀಳಲಿ. ಈ ಮೂಲಕ ರೈತರ ಮೇಲೆ ಗುಂಡಿಕ್ಕಿದ ಕೇಂದ್ರ ಸರಕಾರ, ಮೋದಿಯಿಂದ ರೈತರ ಕೊಲೆ ಎನ್ನುವ ಹೇಳಿಕೆ ಬರಬೇಕು ಎಂದು ಕೆಲವರು ಕಾಯುತ್ತಿದ್ದರೇನೊ. ನಾವು ಅನಿವಾರ್ಯವಾಗಿ ಫೈರಿಂಗ್ ಮಾಡಬೇಕಾಗಿದೆ ಎಂದು ಅರೆ ಸೇನಾಪಡೆಯ ಯೋಧರೊಬ್ಬರು ವಾಯರ್ ಲೆಸ್ ನಲ್ಲಿ ಗೋಗರೆಯುತ್ತಿದ್ದರೂ ಕೇಂದ್ರ ಈ ಬಗ್ಗೆ ಯಾಕೆ ಅಂತಹ ನಿರ್ಧಾರ ಇಟ್ಟಿಲ್ಲ ಎಂದರೆ ಕೆಲವರು ಇದನ್ನೇ ಕಾಯುತ್ತಿದ್ದರು. ಅವರಿಗೆ ಮೋದಿ ತಮ್ಮ ಆಡಳಿತದ ಒಂದು ಐತಿಹಾಸಿಕ ತಪ್ಪು ಮಾಡಲೇಬೇಕಿತ್ತು. ಮೋದಿ ಮಾಡಿಲ್ಲ ಎನ್ನುವುದೇ ಅವರಿಗೆ ಈಗ ತಲೆನೋವಾಗಿರುವ ಸಂಗತಿ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search