• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

Hanumantha Kamath Posted On January 29, 2021
0


0
Shares
  • Share On Facebook
  • Tweet It

ಕೆಲವರನ್ನು ನೋಡಿದಾಗ ಜೀವನದಲ್ಲಿ ಪುಣ್ಯ ಮಾಡಿದವರು ಎಂದು ಹೇಳುತ್ತೇವೆ. ಕೆಲವರ ಅದೃಷ್ಟವನ್ನು ಹೊಗಳುವಾಗ ಅವರ ಪುಣ್ಯ ಚೆನ್ನಾಗಿದೆ ಎಂದು ಹೇಳುವುದು ವಾಡಿಕೆ. ನಾವು ಯಾಕೆ ಹಾಗೆ ಹೇಳುತ್ತೇವೆ. ಅಷ್ಟಕ್ಕೂ ನಾವು ತುಂಬಾ ಪುಣ್ಯ ಮಾಡಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿದಾಗ ನಾನು ನಮ್ಮ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ದಿವ್ಯ ಸಂದೇಶವನ್ನು ನೆನಪು ಮಾಡಿಕೊಳ್ಳುತ್ತೇನೆ. ಜೀವನದಲ್ಲಿ ಪುಣ್ಯ ಮಾಡಲು ಅಧಿಕ ಅವಕಾಶಗಳು ಬೇಕೆಂದು ಅನಿಸಿದರೆ, ಅದು ಕೇವಲ ದೇವರ ದಯೆಯಿಂದ ಮಾತ್ರ ಸಾಧ್ಯವಾಗಬಹುದು. ದೇವರನ್ನು ಬೇಡಬೇಕು. ಆಗ ಪುಣ್ಯವನ್ನು ಹೆಚ್ಚೆಚ್ಚು ಮಾಡಲು ಅವಕಾಶಗಳು ಬಂದಾಗ, ಪಾಪ ಮಾಡುವ ಅವಕಾಶಗಳೇ ಸಿಗುವುದಿಲ್ಲ. ಇದು ಜೀವನದ ಉದ್ದೇಶ ಆಗಬೇಕು. ಇದನ್ನು ಬುದ್ಧಿಯ ಮೂಲಕ ಮುಂದುವರೆಸಬೇಕು. ಇದು ನಮ್ಮ ಜೀವನದಲ್ಲಿ ನಾವು ಅನುಸರಿಸಿದರೆ ಯಾವ ಕಿರಿಕಿರಿ, ಸಂಕಟಗಳು ಇಲ್ಲದೆ ನಾವು ಉತ್ತಮ ಜೀವನ ನಡೆಸಬಹುದು. ಆದರೆ ಈ ಮಾತನ್ನು ಮಂಗಳೂರು ನಗರದ ಹೃದಯಭಾಗದಲ್ಲಿ ವ್ಯಾಪಾರ ಮಾಡುತ್ತಿರುವ ಕೆಲವು ವ್ಯಾಪಾರಿಗಳು ಕಿವಿಯ ಮೇಲೆ ಹಾಕಿಕೊಳ್ಳದೇ ಇರುವುದರಿಂದ ಅವರು ಕೂಡ ಒಳ್ಳೆಯ ಕೆಲಸ ಮಾಡುವುದಿಲ್ಲ ಮತ್ತು ಬೇರೆಯವರಿಗೆ ಕೂಡ ಒಳ್ಳೆಯದು ಮಾಡಲು ಬಿಡುತ್ತಿಲ್ಲ.

ನಿನ್ನೆ ಭವಂತಿಸ್ಟ್ರೀಟ್ ರಸ್ತೆಯ ಬಗ್ಗೆ ಬರೆದಿದ್ದೆ. ಆ ರಸ್ತೆಗೆ ಜಾಗ ಬಿಟ್ಟುಕೊಟ್ಟವರು ಮಂಗಳೂರು ಮಹಾನಗರ ಪಾಲಿಕೆಗೆ ಹಿಡಿಶಾಪ ಯಾಕೆ ಹಾಕುತ್ತಿದ್ದಾರೆ ಎಂದು ನಿಮ್ಮ ಮನಸ್ಸಿಗೆ ಹೋಗಿದೆ ಎಂದು ಅಂದುಕೊಂಡಿದ್ದೇನೆ. ಇವತ್ತು ಗಣಪತಿ ಹೈಸ್ಕೂಲ್ ರಸ್ತೆ ಎನ್ನುವ ಭವಂತಿ ಸ್ಟ್ರೀಟ್ ರಸ್ತೆಯ ಸಹೋದರ ಸಂಬಂಧದ ರಸ್ತೆಗೆ ಬರೋಣ.

ಈ ಜಿಎಚ್ ಎಸ್ ರಸ್ತೆಯ ಕಥೆಯನ್ನು ನಾನು ಬಿಡಿಬಿಡಿಯಾಗಿ ಹೇಳಿದರೂ ಅದು ಒಂದು ಸರಣೆಯಾಗುತ್ತದೆ. ಈ ರಸ್ತೆಯಲ್ಲಿ ಕಾಮತ್ ಅಂಡ್ ಕೋ ಎನ್ನುವ ಅಂಗಡಿಯ ಬಿಲ್ಡಿಂಗ್ ಇದೆ. ಅದರ ಕಥೆಯ ಮೊದಲು ಅಲ್ಲಿ ಪಕ್ಕದಲ್ಲಿ ಕೊಯಮೂತ್ತೂರು ಟೆಕ್ಸ್ ಟೈಲ್ ಎನ್ನುವ ಅಂಗಡಿ ಇದೆ. ಇದು ರಸ್ತೆಯ ಎಷ್ಟು ಬದಿಯಲ್ಲಿ ಎಷ್ಟು ತಾಗಿಕೊಂಡು ಇದೆ ಎಂದರೆ ಮನಪಾದವರು ನಾಳೆ ಬೆಳಿಗ್ಗೆ ಎದ್ದು ಹಲ್ಲುಜ್ಜಿಕೊಂಡವರೇ ಮೊದಲು ಆ ಕೊಯಮೂತ್ತೂರು ಟೆಕ್ಸ್ ಟೈಲ್ ಕೆಡವಿ ಬರೋಣ ಎಂದು decide ಮಾಡಿದರೂ ಅವರನ್ನು ಯಾರೂ ತಡೆಯುವಂತಿಲ್ಲ. ಯಾಕೆಂದರೆ ಆ ಅಂಗಡಿ ಸಂಪೂರ್ಣವಾಗಿ ಅಕ್ರಮವಾಗಿಯೇ ಇದೆ. ಹೆಂಗಸರ, ಗಂಡಸರ ಒಳ ಹೊರಗಿನ ಬಟ್ಟೆಗಳನ್ನು ಮಾರುವ ಆ ಅಂಗಡಿಯವರು ಅಷ್ಟು ಧೈರ್ಯದಲ್ಲಿ ಮುಖ್ಯರಸ್ತೆಗೆ ತಾಗಿ ಅಕ್ರಮವಾಗಿ ಅಂಗಡಿ ತೆರೆದು ಕುಳಿತುಕೊಳ್ಳುತ್ತಾರೆಂದರೆ ಅವರಿಗೆ ಪಾಲಿಕೆಯ ashirvada ಇದೆ. ಪಾಲಿಕೆ ಇವರಿಗೆ ashirvada ಮಾಡಿದ್ದಕ್ಕೆ ತಿಂಗಳಿಗೆ ಎಷ್ಟು ಚಡ್ಡಿ, ಬನಿಯನ್ ಗಳನ್ನು ಉಚಿತವಾಗಿ ತೆಗೆದುಕೊಳ್ಳುತ್ತದೆ, ಯಾರ್ಯಾರು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ತೆಗೆದುಕೊಳ್ಳುವವರೇ ಹೇಳಬೇಕು. ಇನ್ನೂ ಇಂತಹ ಅಂಗಡಿಗಳನ್ನೇ ಮುಟ್ಟದವರು ಅಲ್ಲಿಯೇ ಪಕ್ಕದಲ್ಲಿರುವ ಟೋಕಿಯೋ market,Akbar complex,kunil complex ನ ಅಕ್ರಮ parking ಮುಟ್ಟುತ್ತಾರೆ ಎಂದು ನೀವ್ಯಾರು ಈ ಕನಸು ಮನಸ್ಸಿನಲ್ಲಿ ಎನಿಸುವುದು ಬೇಡಾ. ಆದರೆ ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ, ಅದನ್ನು ತಡೆಯಲು ನಾವೇನಾದರೂ ಕೆಲಸ ಮಾಡಬೇಕು ಎಂದು ಮಾಜಿ ಶಾಸಕರು ಒಮ್ಮ ಪುರಭವನದಲ್ಲಿ ಸಾರ್ವಜನಿಕರ ಸಭೆ ಮಾಡುತ್ತಾರೆ. ಪುರಭವನದಲ್ಲಿ ಜೋರು ಉಸಿರು ಬಿಟ್ಟರೂ ತಾಗುವಷ್ಟು ಹತ್ತಿರದಲ್ಲಿರುವ ಟೋಕಿಯೋ market,Akbar complex,Kunil complex ನಲ್ಲಿ ಅಕ್ರಮವಾಗಿ parking ಮಾಡಿರುವ ವಾಹನಗಳನ್ನು ತೆರವುಗೊಳಿಸಿ, parking ಜಾಗದಲ್ಲಿ ಬಿಲ್ಡಿಂಗ್ ನವರು ಅಕ್ರಮವಾಗಿ ತೆರೆದಿರುವ ಅಂಗಡಿಗಳನ್ನು ಇವರು ಮುಚ್ಚಿಸುವುದಿಲ್ಲ. ಅಲ್ಲಿ ಪುರಭವನದಲ್ಲಿ ಮೂವತ್ತು ಜನ ಕೂಡ ಸೇರುವುದಿಲ್ಲ. ಅದೇ ಈ ಅಕ್ರಮ parking ಜಾಗದಲ್ಲಿ ಲೆಕ್ಕ ಹಾಕಿದರೆ ಸಿಗದಷ್ಟು ವಾಹನಗಳು ಗುಡ್ಡೆ ಹಾಕಿ ನಿಂತಿರುತ್ತವೆ.ಕೆಲವರಿಗೆ ಮಂಗಳೂರಿನ ಟ್ರಾಫಿಕ್ ಸಮಸ್ಯೆ ಸರಿಯಾಗಬೇಕೆನ್ನುವ ಮನಸ್ಸಿದೆ. ಜಿ ಎಚ್ ಎಸ್ ರಸ್ತೆಯ ಕೊನೆಯಲ್ಲಿರುವ ಲಕ್ಷ್ಮಿ ಮಹಾಗಣಪತಿ ದೇವಸ್ಥಾನದವರು, ತಾರಾ ಕ್ಲಿನಿಕ್ ನವರು, ಗಣಪತಿ ಹೈಸ್ಕೂಲಿನವರು, ಜನತಾ ಬಜಾರಿನವರು ರಸ್ತೆ ಅಗಲ ಮಾಡಲು ಜಾಗ ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಲಕ್ಷಗಟ್ಟಲೆ ಖರ್ಚು ಮಾಡಿ ಮನಪಾದವರು ಅವರಣ ಗೋಡೆ ಕಟ್ಟಿಕೊಟ್ಟಿದ್ದಾರೆ.

ಆದರೆ ಅದರ ಮುಂದಿನ ಅಂಗಡಿಯವರು ಜಾಗ ಬಿಟ್ಟುಕೊಟ್ಟಿಲ್ಲದಿರುವುದರಿಂದ ಕೆಲಸ ಅರ್ಧಂಬರ್ಧ ಕ್ಕೆ ನಿಂತು ಹೋಗಿದೆ. ಆ ನಡುವೆ ಆ ರಸ್ತೆಯ ಮಧ್ಯದಲ್ಲಿರುವ ಶ್ರೀಕೃಷ್ಣ ಭವನದವರದ್ದು ಬೇರೆನೇ ಕಥೆ. ಇವರು ಮೊದಲಿಗೆ ಜಾಗ ಬಿಟ್ಟುಕೊಡಲು ಎಲ್ಲಾ ಒಪ್ಪಿಯಾಗಿತ್ತು. ಇವರು ಒಪ್ಪಿದರೂ ಅಂತ ಪಾಲಿಕೆ ಇವರು ಎಷ್ಟು ಜಾಗ ಬಿಟ್ಟುಕೊಡಬೇಕಿತ್ತೊ ಅಲ್ಲಿ ಗೋಡೆ ಕಟ್ಟಿಕೊಟ್ಟಿದ್ದರು. ಎಲ್ಲಾ ಸರಿಯಾಯಿತು ಎಂದ ಕೂಡಲೇ ಕೃಷ್ಣಭವನದ ಮಾಲೀಕರು ಬೇರೆಯದ್ದೇ ರಾಗ ತೆಗೆದರು. ಇವರು ಹಾಡಿದ ರಾಗಕ್ಕೆ ಶ್ರುತಿಯೂ ಇಲ್ಲ, ತಾಳವೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಮಂಡಿಸಿರುವ ವಾದಕ್ಕೆ ತಳಬುಡವಿಲ್ಲ. ಯಾಕೋ ಅವರು ಹುತ್ತ ಬಡಿಯಲು ಹೋಗಿ ಮೈಮೇಲೆ ಇರುವೆ ಬಿಟ್ಟುಕೊಟ್ಟಂತಹ ಸ್ಥಿತಿಗೆ ಮುಟ್ಟಿದ್ದಾರೆ.

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search