• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೋದಿ ಲಸಿಕೆ ತೆಗೆದುಕೊಂಡ ಯಾರಾದರೂ ಹಿಂದೂ ಆದ್ರಾ?

Hanumantha Kamath Posted On May 13, 2021


  • Share On Facebook
  • Tweet It

ಅದು ಮೋದಿ ಲಸಿಕೆ, ನಾವು ತೆಗೆದುಕೊಳ್ಳಲ್ಲ, ನಮಗೆ ರಾಹುಲ್ ಗಾಂಧಿ ಹೇಳಬೇಕು ಎಂದದ್ದು ಹಲವು ಮಂದಿ. ಇಡೀ ದೇಶದಲ್ಲಿ ಅಂತವರ ಸಂಖ್ಯೆ ಕಡಿಮೆ ಇರಬಹುದು. ಆದರೆ ದೇಶ ಒಂದು ರೀತಿಯಲ್ಲಿ ಮಾನಸಿಕ ಸನ್ನಿಗೆ ಒಳಗಾಗಿತ್ತು. ಲಸಿಕೆ ತೆಗೆದುಕೊಂಡರೆ ಮಕ್ಕಳಾಗಲ್ಲವಂತೆ ಎನ್ನುವುದರಿಂದ ಹಿಡಿದು ಅದನ್ನು ತೆಗೆದುಕೊಂಡವರೊಬ್ಬರು ಮರುದಿನ ಸತ್ತರಂತೆ ಎನ್ನುವ ತನಕ ವಿಷಯ ಹರಡಿದ್ದೇ ಹರಡಿದ್ದು. ಈ ಲಸಿಕೆಯಲ್ಲಿಯೂ ಕೆಲವು ಮೂಲಭೂತವಾದಿಗಳು ಹಿಂದೂತ್ವವನ್ನು ನೋಡಿದ ಕಾರಣ ಒಂದು ವರ್ಗವೇ ಈ ಲಸಿಕೆಯಿಂದ ದೂರ ಉಳಿಯಿತು. ಯಾರು ಕೂಡ ಮೋದಿ ಲಸಿಕೆ ಎಂದರೆ ಏನು ಎನ್ನುವ ಲಾಜಿಕ್ ಯೋಚಿಸಲೇ ಇಲ್ಲ. ಹಿಂದೂ ಒಬ್ಬರ ರಕ್ತವನ್ನು ಮುಸ್ಲಿಮನೊಬ್ಬನಿಗೆ ಕೊಟ್ಟರೆ ಮುಸ್ಲಿಂ ಹೇಗೆ ಹಿಂದು ಆಗಲ್ಲವೋ ಹಾಗೆ ದೇಶದ ಪ್ರಧಾನಿ ಹಿಂದೂ ಆಗಿದ್ದರೆ ಆ ದೇಶದಲ್ಲಿ ಉತ್ಪತ್ತಿಯಾಗುವ ಲಸಿಕೆ ತೆಗೆದುಕೊಂಡವರು ಹಿಂದೂ ಆಗುವುದಿಲ್ಲ ಎನ್ನುವ ಬೇಸಿಕ್ ಸತ್ಯ ಯಾಕೆ ಅಂತವರಿಗೆ ಹೊಳೆಯಲಿಲ್ಲ ಎನ್ನುವುದು ಆಶ್ಚರ್ಯಕರ ವಿಷಯ. ಅಷ್ಟಕ್ಕೂ ಮೋದಿಯವರು ಶಿವಲಿಂಗಕ್ಕೆ ಅಭಿಷೇಕ ಮಾಡಿದ ನೀರನ್ನು ಹೋಗಿ ಲಸಿಕೆ ಕಂಪೆನಿಯ ಯಂತ್ರಗಳ ಒಳಗೆ ಸುರಿಯಲ್ಲವಲ್ಲ. ಆದರೂ ಹಲವರು ತೆಗೆದುಕೊಳ್ಳಲಿಲ್ಲ. ಇನ್ನೊಂದು ವಿಷಯ ಏನೆಂದರೆ ಲಸಿಕೆ ಎಂದರೆ ಅದು ಬಿಸಿ ಅಡುಗೆಯಂತೆ. ತಾಯಿ ರಜಾದಿನಗಳಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಮಕ್ಕಳು ಊಟ ಮಾಡಲಿ ಎಂದು ಬಿಸಿ ಬಿಸಿ ಅಡುಗೆ ತಯಾರಿ ಮಾಡಿ ಇಟ್ಟು ಹೊರಗೆ ಆಡುತ್ತಿದ್ದ ಮಕ್ಕಳನ್ನು ಬನ್ರೋ, ಊಟ ಮಾಡಿ ಎಂದು ಒತ್ತಾಯ ಮಾಡಿದಾಗ ಆಟದಲ್ಲಿ ಬ್ಯುಸಿ ಇರುವ ಮಕ್ಕಳು ಆಟ ಮುಗಿಸದೇ ಬರಲ್ಲವಲ್ಲ. ಹಾಗೆ ಒಂದು ಗಂಟೆಗೆ ಬರದೇ ಮೂರು ಗಂಟೆಗೆ ಬಂದರೆ ಏನಾಗುತ್ತೆ? ಅಡುಗೆ ತಣ್ಣಗಾಗಿರುತ್ತೆ. ಮತ್ತೆ ಬಿಸಿ ಮಾಡಬೇಕು. ಇನ್ನು ಈ ಕೋವಿಡ್ ಲಸಿಕೆಯ ವಿಷಯ ಏನೆಂದರೆ ಇದು ಉತ್ಪಾದನೆಯಾದ ಇಂತಿಷ್ಟು ಸಮಯದ ಒಳಗೆ ತೆಗೆದುಕೊಳ್ಳಬೇಕು. ನಿಗದಿತ ಸಮಯದ ಒಳಗೆ ಬಳಸದಿದ್ದರೆ ಅದನ್ನು ಸಮುದ್ರಕ್ಕೆ ಬಿಸಾಡಬೇಕು. ಯಾವಾಗ ತನ್ನ ದೇಶದ ಜನರಿಗಾಗಿ ಉತ್ಪಾದಿಸಿದ ಕೋಟ್ಯಾಂತರ ಡೋಸ್ ಬಳಕೆಯಾಗದೇ ಹಾಗೆ ಉಳಿಯುತ್ತಿದ್ದರೆ ಬುದ್ಧಿವಂತ ಚಕ್ರವರ್ತಿ ಎನು ಮಾಡುತ್ತಾನೆ, ಅದನ್ನು ಪಕ್ಕದ ಸಾಮಂತ ರಾಜರಿಗೆ ಹಂಚುತ್ತಾನೆ. ಮೋದಿ ಮಾಡಿದ್ದು ಅದನ್ನೇ. ಬೇರೆ ಬೇರೆ ದೇಶಗಳಿಗೆ ರಪ್ತು ಮಾಡಿದ್ದಾರೆ. ಅದರಲ್ಲಿ ಮೂರು ರೀತಿಯ ಉದ್ದೇಶ ಇತ್ತು. ಒಂದು ಉಚಿತವಾಗಿ ನಾವು ಲಸಿಕೆ ನೀಡಿದ ರಾಷ್ಟ್ರಗಳು ಅಗತ್ಯ ಬಿದ್ದಾಗ ನಮಗೆ ಬೇರೆ ರೀತಿಯಲ್ಲಿ ಸಹಾಯ ಮಾಡಬೇಕು. ಎರಡನೇಯ ಉದ್ದೇಶ ಏನೆಂದರೆ ನಾವು ಲಸಿಕೆ ಮಾರಿದ ರಾಷ್ಟ್ರಗಳಿಂದ ನಮ್ಮ ದೇಶಕ್ಕೆ ಆದಾಯ ಬಂದಿದೆ. ಮೂರನೇಯದಾಗಿ ಅಂತರಾಷ್ಟ್ರೀಯವಾಗಿ ನಾವು ವಿಶ್ವಗುರುವಾಗುವತ್ತ ಇನ್ನೊಂದು ಬಲಯುತವಾದ ಹೆಜ್ಜೆ ಇಟ್ಟಿದ್ದೇವೆ. ಮೂರನೇ ಉದ್ದೇಶದಿಂದ ಮೋದಿ ಇಮೇಜು ವೃದ್ಧಿಸಿರಬಹುದು. ಆದರೆ ಮೊದಲ ಎರಡು ಉದ್ದೇಶಗಳಿಂದ ಭಾರತಕ್ಕೆ ಲಾಭವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವ್ಯರ್ಥವಾಗುತ್ತಿದ್ದ ಕೋಟ್ಯಾಂತರ ಡೋಸ್ ಲಸಿಕೆ ಸದುಪಯೋಗವಾಗಿದೆ. ಅದು ಮೋದಿಯ ತಲೆ ಮತ್ತು ನೆನಪಿರಲಿ ಅವರು ಗುಜರಾತಿ.
ಈಗ ಮೊದಲ ಉದ್ದೇಶಕ್ಕೆ ಬರೋಣ. ನಾವು ಆವತ್ತು ವ್ಯರ್ಥವಾಗುತ್ತಿದ್ದ ಲಸಿಕೆಯನ್ನು ಬೆಹರೇನ್ ನಂತಹ ಅನೇಕ ರಾಷ್ಟ್ರಗಳಿಗೆ ಉಚಿತವಾಗಿ ಕೊಟ್ಟ ಕಾರಣ ನಮಗೆ ಅಗತ್ಯ ಬಿದ್ದಾಗ ಅವರು ಯಥೇಚ್ಚವಾಗಿ ಆಮ್ಲಜನಕ ಪೂರೈಸಿದ್ದಾರೆ. ಅದನ್ನೇ ಮೊನ್ನೆ ನಮ್ಮ ಜನಪ್ರತಿನಿಧಿಗಳು ಸ್ವಾಗತ ಮಾಡಿ ಮೋದಿಗೆ ಧನ್ಯವಾದ ಹೇಳಿದ್ದು ಮತ್ತು ಏನೂ ಗೊತ್ತಿಲ್ಲದ ಕೆಲವು ಪೆದ್ದುಗಳು ಮೋದಿಗೆ ಯಾಕೆ ಥ್ಯಾಂಕ್ಸ್ ಎಂದು ಕೇಳಿದ್ದು. ಆವತ್ತು ಲಸಿಕೆ ಕೊಟ್ಟದ್ದು ಇವತ್ತು ಆಮ್ಲಜನಕ ಬರಲು ಕಾರಣ. ಇನ್ನು ಕುವೈಟ್ ನಂತಹ ರಾಷ್ಟ್ರಗಳಿಗೆ ನಾವು ಲಸಿಕೆ ಮಾರಿದ್ದೇವೆ. ಅದರ ಬದಲು ಆ ಮೊತ್ತಕ್ಕೆ ಅವರು ನಮಗೆ ಅದಕ್ಕೆ ಸರಿಯಾಗುವಷ್ಟು ಮೆಡಿಕಲ್ ಆಕ್ಸಿಜನ್ ಅನ್ನು ಕಳುಹಿಸಿಕೊಟ್ಟಿದ್ದಾರೆ. ಅದು ಕೂಡ ನಮಗೆ ಉಪಯೋಗವಾಗಿದೆ. ಹೀಗೆ ಪಕ್ಕಾ ಗುಜರಾತಿ ಮನಸ್ಸಿನ, ತಾಯಿ ಹೃದಯದ ವ್ಯಕ್ತಿ ದೇಶದ ಚುಕ್ಕಾಣಿ ಹಿಡಿದಾಗ ಮೋಸ ಆಗಲು ಸಾಧ್ಯವಿಲ್ಲ. ಆದರೂ ಲೆಕ್ಕವಿಲ್ಲದಷ್ಟು ಮೌಲ್ಯದ ಲಸಿಕೆಗಳು ಯಾರೂ ತೆಗೆದುಕೊಳ್ಳುವವರು ಇಲ್ಲದೆ ಹಾಳಾಗಿವೆ. ಅದರಿಂದ ದೇಶದ ಬೊಕ್ಕಸಕ್ಕೆ ನಷ್ಟವೂ ಆಗಿದೆ. ಆದರೆ ಲಸಿಕೆ ಬಗ್ಗೆ ಯಾವಾಗ ಜಾಗೃತಿ ಮೂಡಿತೋ, ಲಸಿಕೆ ಒಂದೇ ಜೀವ ಉಳಿಯುತ್ತೆ ಎಂದು ಜನ ಅಂದುಕೊಂಡರೋ ಜನರು ಲಸಿಕೆ ತೆಗೆದುಕೊಳ್ಳಲು ಕ್ಯೂ ನಿಂತರು. ಲಸಿಕೆ ಕಂಪೆನಿಗಳಿಗೆ ಒಮ್ಮೆಲ್ಲೆ ಲಕ್ಷ ಉತ್ಪಾದಿಸಿ ಎಂದು ಆರ್ಡರ್ ಬರುತ್ತಿದ್ದ ಕಡೆ ಕೋಟಿ ಉತ್ಪಾದಿಸಿ ಎಂದರೆ ರಾತ್ರಿ ಬೆಳಗಾಗುವುದರೊಳಗೆ ಅದು ಸಾಧ್ಯವೂ ಇಲ್ಲ. ಯಾಕೆಂದರೆ ವ್ಯಾಕ್ಸಿನ್ ಉತ್ಪಾದನೆ ಮ್ಯಾಜಿಕ್ ಅಲ್ಲ. ಮಂಗಳೂರಿನ ತಾಜಮಹಾಲ್ ಹೋಟೇಲಿಗೆ ಹೋಗಿ ಒಮ್ಮೆಲ್ಲೆ ನೂರೈವತ್ತು ಕಾಫಿ ಬೇಕು ಎಂದರೆ ಈ ಲಾಕ್ ಡೌನ್ ಅವಧಿಯಲ್ಲಿ ಅವರೇ ದಂಗಾಗುತ್ತಾರೆ. ಹಾಗಿರುವಾಗ ಜನರ ಜೀವದ ಪ್ರಶ್ನೆಯಾಗಿರುವ ವ್ಯಾಕ್ಸಿನ್ ಹೇರಳ ಪ್ರಮಾಣದಲ್ಲಿ ಉತ್ಪಾದನೆಯಾಗಲು ಸ್ವಲ್ಪ ಕಾಲ ಹಿಡಿಯುತ್ತದೆ. ಇದು ಜನರು ಅರ್ಥ ಮಾಡಿಕೊಳ್ಳಬೇಕು. ಆದರೆ ಆಶ್ಚರ್ಯ ಎಂದರೆ ಇಂತಹ ಸಿಂಪಲ್ ಲಾಜಿಕ್ ಅನ್ನು ಕೋರ್ಟ್ ಗಳೇ ಅರ್ಥ ಮಾಡಿಕೊಂಡಿಲ್ಲ. ದಿನಬೆಳಗಾದರೆ ಯಾವುದಾದರೂ ಒಂದು ಹೈಕೋರ್ಟ್ ನಮ್ಮ ರಾಜ್ಯಕ್ಕೆ ಇಷ್ಟು ಕೊಡಿ, ಅಷ್ಟು ಕೊಡಿ ಎಂದು ಆದೇಶ ಕೊಡುತ್ತಲೇ ಇರುತ್ತದೆ. ಒಂದು ಸಾಮಾನ್ಯ ಕೇಸ್ ಒಂದು ಕೋರ್ಟಿನಲ್ಲಿ ತೀರ್ಪು ಕಾಣಲು ವರ್ಷಗಟ್ಟಲೆ ಹಿಡಿಯುತ್ತದೆ. ಅದನ್ನು ಇಂತಿಷ್ಟೇ ಕಾಲಮಾನದೊಳಗೆ ಮುಗಿಸಲು ಕೋರ್ಟುಗಳಿಗೆ ಇನ್ನು ಸಾಧ್ಯವಾಗಿಲ್ಲ. ಹಾಗಿರುವಾಗ ಲಸಿಕೆ ಉತ್ಪಾದನೆ ಎನ್ನುವುದು ಮಕ್ಕಳಾಟವೇ!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search