• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂಗಳಲ್ಲಿಯೇ ಭಯ ಹುಟ್ಟಿಸುತ್ತಾ ಬಿಜೆಪಿಯನ್ನು ದಡ ಸೇರಿಸಿಬಿಟ್ಟ ಓವೈಸಿ!!

Hanumantha Kamath Posted On March 17, 2022


  • Share On Facebook
  • Tweet It

ಉತ್ತರ ಪ್ರದೇಶದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದಿರಬಹುದು. ಆದರೆ ಎಲ್ಲೆಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆಯೋ ಅಲ್ಲೆಲ್ಲ ಬಿಜೆಪಿ ಸೋತಿದೆ. ಮುಸ್ಲಿಮರ ಸಂಖ್ಯೆ ಹಿಂದೂಗಳ ಸಂಖ್ಯೆಯ ಸಮಬಲ ಇದ್ದ ಕ್ಷೇತ್ರಗಳಲ್ಲಿಯೂ ಬಿಜೆಪಿ ಆರಾಮವಾಗಿ ಸೋಲುತ್ತದೆ. ಅದನ್ನು ನೋಡಲು ನೀವು ಯುಪಿ ತನಕ ಹೋಗಬೇಕಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಅಥವಾ ಈಗಿನ ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ತೆಗೆದುಕೊಂಡರೂ ಸಾಕು. ಅಲ್ಲಿ ಕೂಡ ಹಿಂದೂ, ಮುಸ್ಲಿಮರ ಜನಸಂಖ್ಯೆ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಒಂದು ಮುಷ್ಟಿ ಹಿಂದೂಗಳ ಸಂಖ್ಯೆ ಹೆಚ್ಚಿರಬಹುದು. ಆದರೂ ಅದು ಬಿಜೆಪಿಗೆ ಇಲ್ಲಿಯ ತನಕ ಒಂದು ಬಾರಿ ಬಿಟ್ಟು ಪ್ರತಿ ಬಾರಿ ಕಾಂಗ್ರೆಸ್ಸಿಗೆ ವಿಜಯವನ್ನು ತಂದುಕೊಟ್ಟಿದೆ. ಅದು ಹೇಗೆ? ಸಿಂಪಲ್, ಹಿಂದೂಗಳ ಮತಗಳು ಡಿವೈಡ್ ಆಗುತ್ತವೆ. ಮುಸ್ಲಿಮರ ವೋಟುಗಳು ಸಾರಾಸಗಟಾಗಿ ಕಾಂಗ್ರೆಸ್ಸಿಗೆ ಅಥವಾ ಬಿಜೆಪಿ ವಿರೋಧಿ ಪಕ್ಷಕ್ಕೆ ಬೀಳುತ್ತದೆ. ಹಿಂದೂಗಳಲ್ಲಿ ಒಗ್ಗಟ್ಟಿಲ್ಲ. ಅವರು ತಮ್ಮ ಮದುವೆಗೋ, ಉಪನಯನಕ್ಕೋ, ಸತ್ಯನಾರಾಯಣ ಪೂಜೆಗೋ, ಮಗುವಿನ ಹುಟ್ಟಿದ ಹಬ್ಬ, ಗೃಹಪ್ರವೇಶಕ್ಕೆ ಬರುತ್ತಾರೆ ಎನ್ನುವ ಕಾರಣಕ್ಕೆ ಯುಟಿ ಖಾದರ್ ಅವರಿಗೆ ವೋಟ್ ಹಾಕುತ್ತಾರೆ. ಅದೇ ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಮುಸ್ಲಿಮರ ಮನೆಯ ಮುಸುರೆ ತೊಳೆದರೂ ಅವರು ಬಿಜೆಪಿಗೆ ವೋಟ್ ಹಾಕಲ್ಲ. ಆ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಸ್ಟ್ಯಾಂಡ್ ಪಕ್ಕಾ. ಅಲ್ಲಿ ಕಾಂಪ್ರೋಮೈಸ್ ಇಲ್ಲ. ಅದೇ ಗುರಿ ಇಟ್ಟು ಬೆರಳೆಣಿಕೆಯ ಸೀಟುಗಳನ್ನು ಹೊಡೆದುಬಿಡೋಣ ಎಂದು ಓವೈಸಿ ಎನ್ನುವ ಪಕ್ಕಾ ಬ್ಯಾರಿ ಉತ್ತರ ಪ್ರದೇಶದಲ್ಲಿ ಝಂಡಾ ಉರಿಬಿಟ್ಟಿದ್ದ. ಅಲ್ಲಿ ಹೋದವನು ಹೇಳಿದ್ದು ಒಂದೇ ಮಾತು- ಇನ್ನು ಸ್ವಲ್ಪ ಕಾಲದ ನಂತರ ಯೋಗಿ ತಮ್ಮ ಮಠಕ್ಕೆ ಹಿಂತಿರುಗುತ್ತಾರೆ, ಮೋದಿ ಹಿಮಾಲಯಕ್ಕೆ ತಪಸ್ಸಿಗೆ ಹೋಗುತ್ತಾರೆ. ಮತ್ತೆ ಹಿಂದೂಗಳಿಗೆ ಯಾರಿದ್ದಾರೆ. ಅವನಿಗೆ ಗ್ಯಾರಂಟಿ ಇತ್ತು. ಮುಸ್ಲಿಮರು ತಮಗೆ ಮತ ಹಾಕುತ್ತಾರೆ. ಯಾಕೆಂದರೆ ತಾನು ಅವರ ರಕ್ಷಕ, ಒಂದಿಷ್ಟು ಹಿಂದೂಗಳ ಮತಗಳು ಕೂಡ ಬಿದ್ದರೆ ಏನಾದರೂ ಆಗಬಹುದು ಎನ್ನುವ ಲೆಕ್ಕಾಚಾರ ಅವನಿಗೆ ಇತ್ತು. ಇದು ಬಹಳ ಡೇಂಜರಸ್ ಟ್ರೆಂಡ್. ಓವೈಸಿ ಎಷ್ಟೇ ಪ್ರಚಾರ ಮಾಡಿದರೂ ಆತನ ಪಕ್ಷಕ್ಕೆ ಒಂದೇ ಒಂದು ಸೀಟು ಗೆಲ್ಲಲಾಗಲಿಲ್ಲ. ಹಾಗಂತ ಅವನು ಗೆಲ್ಲುತ್ತಿರುವ ಹೈದ್ರಾಬಾದ್ ಲೋಕಸಭಾ ಕ್ಷೇತ್ರ ಓವೈಸಿ ಪಾಲಿಗೆ ಸೇಫ್ ಬೆಟ್. ಯಾಕೆಂದರೆ ಅಲ್ಲಿ ಸ್ಪರ್ಧಿಸುವ ಯಾವುದೇ ಪಾರ್ಟಿಗಿಂತ ಅಲ್ಲಿನ ಮುಸ್ಲಿಮರು ತಮ್ಮ ಧರ್ಮದ ಮೇಲೆ ಆಧಾರಿತವಾಗಿರುವ ಪಕ್ಷವನ್ನು ನಂಬುತ್ತಾರೆ. ಅದರಿಂದ ಓವೈಸಿ ಗೆಲ್ಲುತ್ತಾ ಹೋಗುತ್ತಾನೆ. ಆದರೆ ಹಿಂದೂಗಳಲ್ಲಿ ಹಾಗಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ಜನಿವಾರ, ಧೋತಿ, ಪಂಚೆ, ಶಾಲು ಧರಿಸಿ ದೇವಸ್ಥಾನಗಳಿಗೆ ಎಡತಾಗುವ ರಾಹುಲ್ ಮತ್ತು ಹಣೆಗೆ ಮೂರು ನಾಮ ಅಡ್ಡ ಹಾಕಿ ಸೀರೆ ಉಟ್ಟು ಬರುವ ಪ್ರಿಯಾಂಕಾ ಕೆಲವರಿಗೆ ಸಾಕ್ಷಾತ್ ದೇವರಂತೆ ಕಾಣಿಸುತ್ತಾರೆ. ಈ ಸಲ ಯುಪಿಯಲ್ಲಿ ಒಂದೆರಡು ಸೀಟುಗಳನ್ನು ಮಾತ್ರ ಕಾಂಗ್ರೆಸ್ ಗೆದ್ದಿರಬಹುದು. ಆದರೆ ಅವರು ಚುನಾವಣೆಯಲ್ಲಿ ಇಂತಹ ನಾಟಕಗಳನ್ನು ಮಾಡುವುದರಿಂದ ಅವರನ್ನು ನಂಬುವವರು ಇದ್ದಾರೆ. ಒಂದು ವೇಳೆ ಅವರ ಮೇಲೆ ವಿಶ್ವಾಸ ಕಳೆದುಹೋಗಿದ್ದರೆ ಪ್ರಾದೇಶಿಕ ಪಕ್ಷಗಳಿಗೆ ವೋಟ್ ಹಾಕುವವರು ಇದ್ದಾರೆ. ಇದರಿಂದ ಹಿಂದೂಗಳ ವೋಟ್ ಹರಿದು ಹಂಚಿಹೋಗುತ್ತದೆ.

ಆದರೆ ಈ ಹೊತ್ತಿನಲ್ಲಿ ಓವೈಸಿ ಯಶಸ್ವಿಯಾಗದೇ ಇರಬಹುದು. ಆದರೆ ಆತ ಒಂದಷ್ಟರ ಮಟ್ಟಿಗೆ ಸ್ಪರ್ಧಿಸಿದ್ದ ಕಾರಣ ಬಿಜೆಪಿಗೆ ಕನಿಷ್ಟ 65-70 ಸೀಟುಗಳಲ್ಲಿ ಲಾಭ ಮಾಡಿಕೊಟ್ಟಿದ್ದಾನೆ. 7 ಸೀಟುಗಳಲ್ಲಿ ಬಿಜೆಪಿ 200 ಮತಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದಿದೆ. ಇನ್ನು 23 ಸೀಟುಗಳಲ್ಲಿ 500 ಗಿಂತಲೂ ಕಡಿಮೆ ಮತ, 49 ಸೀಟುಗಳಲ್ಲಿ ಸಾವಿರಕ್ಕಿಂತಲೂ ಕಡಿಮೆ ಮತ, ಇನ್ನು 86 ಸೀಟುಗಳಲ್ಲಿ 2000 ಗಿಂತಲೂ ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದಿದೆ. ಇಲ್ಲೆಲ್ಲ ಬಿಜೆಪಿ ಎದುರು ಸೋತದ್ದು ಸಮಾಜವಾದಿ ಪಕ್ಷ. ಬಿಜೆಪಿಯನ್ನು ದಡ ಸೇರಿಸಿದ್ದು ಓವೈಸಿ. ಆದ್ದರಿಂದ ಇಂತವರು ಇರಬೇಕು ಎನ್ನುವ ಬಿಜೆಪಿ ರಾಜಕೀಯ ಪಂಡಿತರು ಇದ್ದಾರೆ. ಹಾಗಾದರೆ ಯೋಗಿ ಕಳೆದ ಬಾರಿಗಿಂತ ಈ ಬಾರಿ 50 ರಷ್ಟು ಕಡಿಮೆ ಸೀಟುಗಳನ್ನು ಪಡೆದಿದ್ದಾರಲ್ಲ ಹೇಗೆ ಎಂದು ನೋಡಿದರೆ ಪಕ್ಕಾ ಮುಸ್ಲಿಂ ಕ್ಷೇತ್ರಗಳಲ್ಲಿ ಸಮಾಜವಾದಿ ಓವೈಸಿಯನ್ನು ನುಸುಳಲು ಬಿಟ್ಟಿಲ್ಲ. ಎಲ್ಲಿ ನಮ್ಮ ಮತದಿಂದ ಸಮಾಜವಾದಿ ಪಾರ್ಟಿ ಸೋತು ಬಿಜೆಪಿ ಗೆಲ್ಲುತ್ತದೆ ಎಂದು ಅಂದಾಜು ಇರುವ ಮುಸ್ಲಿಂ ಬಾಹುಳ್ಯ ಕ್ಷೇತ್ರಗಳ ಜನ ತಪ್ಪಿಯೂ ಓವೈಸಿಗೆ ಮತ ನೀಡಿಲ್ಲ. ಹಾಗಂತ ಓವೈಸಿಯಿಂದಲೇ ಇದೆಲ್ಲ ಬಿಜೆಪಿಗೆ ಸುಲಭವಾಯಿತು ಎಂದಲ್ಲ. ಎಷ್ಟೋ ಕಡೆ ಬಿಜೆಪಿ ಕೂಡ ಇಷ್ಟೇ ಸಣ್ಣ ಅಂತರದಿಂದ ಹಲವಾರು ಕಡೆ ಸೋತಿದೆ. ಅಲ್ಲಿ ಮತದಾರರು ತಮ್ಮ ಮತವನ್ನು ಬಿಜೆಪಿ, ಬಹುಜನಸಮಾಜ ಪಾರ್ಟಿ, ಕಾಂಗ್ರೆಸ್, ಸಮಾಜವಾದಿ ಪಕ್ಷದ ನಡುವೆ ಹಂಚಿಹಾಕಿದ್ದು. ಆದರೆ ಮುಸ್ಲಿಮರು ಎಲ್ಲಿಯೂ ಆಚೆ ಈಚೆ ನೋಡದೆ ಅಲ್ಲಿ ಎಸ್ ಪಿಗೆ ಮತಗಳನ್ನು ಕ್ಲೀನಾಗಿ ಧಾರೆ ಎರೆದಿದ್ದು ಕೂಡ ಇದೆ. ಮುಸ್ಲಿಮರು ಯಾವತ್ತೂ ತಮಗೆ ವಿರೋಧವಾಗಿರುವ ಬಿಜೆಪಿಯ ವಿರುದ್ಧ ಯಾವ ಪಕ್ಷ ನಿಂತಿದೆಯೋ ಅದಕ್ಕೆ ಮತ ನೀಡುತ್ತಾರೆ. ಆದರೆ ಹಿಂದುಗಳು ತಮ್ಮ ಜಾತಿಯವನಾ ಎಂದು ನೋಡುತ್ತಾರೆ ಮತ್ತು ಮತ ಚಲಾಯಿಸುತ್ತಾರೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search