• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸ್ವಂತಕ್ಕಾಗಿ ಏನೂ ಮಾಡದಿದ್ದರೂ ಸಂತೋಷ್ ಅಷ್ಟು ಬೆಳೆದಿರುವುದು ಹೇಗೆ?

Hanumantha Kamath Posted On April 26, 2023
0


0
Shares
  • Share On Facebook
  • Tweet It

ನನ್ನ ಟಿಕೆಟ್ ತಪ್ಪಿಸಿದ್ದು ಬಿ.ಎಲ್. ಸಂತೋಷ್ ಎಂದಿರುವುದು ಜಗದೀಶ್ ಶೆಟ್ಟರ್. ಈ ಮಾತನ್ನು ಅವರು ಹೇಳಿದ್ದು ಕಾಂಗ್ರೆಸ್ ಅಂಗಳದಲ್ಲಿ. ಹೀಗೆ ಶೆಟ್ಟರ್ ಹೇಳಿಕೆ ನೀಡುವಾಗ ಅವರು ಆರು ಬಾರಿ ಶಾಸಕ, ಸ್ಪೀಕರ್, ಪಕ್ಷದ ರಾಜ್ಯಾಧ್ಯಕ್ಷ, ಮಂತ್ರಿ, ಮುಖ್ಯಮಂತ್ರಿ ಎಲ್ಲಾ ಆಗಿದ್ರು. ಆಗಿರಲಿಲ್ಲ ಎಂದರೆ ಪ್ರಧಾನ ಮಂತ್ರಿ ಮಾತ್ರ. ಇಂತಹ ಶೆಟ್ಟರ್ ಯಾರ ವಿರುದ್ಧ ಹೇಳಿಕೆ ನೀಡಿದ್ರು ಎಂದರೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಮನಸ್ಸು ಮಾಡಿದ್ರೆ ಯಾವುದಾದರೂ ಮಲ್ಟಿ ನ್ಯಾಶನಲ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿ, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸಿ, ಮದುವೆಯಾಗಿ ಹೆಂಡತಿ, ಮಕ್ಕಳೊಡನೆ ವಿದೇಶ ಪ್ರವಾಸ ಮಾಡುತ್ತಾ ಇರಬಹುದಾಗಿದ್ದರೂ ಅವರೆಲ್ಲರಿಗಿಂತ ಭಿನ್ನವಾದ ಹಾದಿ ತುಳಿದ ಬಿ.ಎಲ್.ಸಂತೋಷ್ ಬಗ್ಗೆ ಶೆಟ್ಟರ್ ಕೋಪ ಹೊರಹಾಕಿದ್ದಾರೆ. ಮತ ಹಾಕಲು ಕೂಡ ಪುರುಸೊತ್ತು ಇಲ್ಲದ ಯುವಜನಾಂಗದ ನಡುವೆ ಸಂತೋಷ್ ರಾಷ್ಟ್ರ ನಿರ್ಮಾಣ ಕಾಯಕಕ್ಕೆ ನಿಂತ ರಾಜಕೀಯ ಸಂತನಂತೆ ಕಾಣುತ್ತಾರೆ. ಉಡುಪಿಯ ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದ ಸಂತೋಷ್ ಅವರು ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವ, ಸಿದ್ಧಾಂತಕ್ಕೆ ಮನಸೋತು ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಸೇವೆಗೆ ನಿಲ್ಲುತ್ತಾರೆ. ಪ್ಯಾಂಟ್, ಶರ್ಟ್, ಟೈ ಹಾಕಿ ಗತ್ತಿನಲ್ಲಿ ಮೆರೆಯುವವರ ಮುಂದೆ ಇಂದಿಗೂ ಸಂತೋಷ್ ಅವರು ಧರಿಸುವುದು ಸಾಮಾನ್ಯ ಪಂಚೆ ಮತ್ತು ನಿಲುವಂಗಿ. ಸಂಘದ ಪ್ರಚಾರಕರಾಗಿ 1993 ರಲ್ಲಿ ರಾಷ್ಟ್ರಸೇವೆಗೆ ನಿಂತ ಸಂತೋಷ್ ಅವರು ಮದುವೆ, ಸಂಸಾರ ಎನ್ನುವ ಗೋಜಿಗೆ ಯಾವತ್ತೂ ಹೋಗಲಿಲ್ಲ. ಅವರು ತಮ್ಮ ಹುಟ್ಟಿದ ಮನೆಗೆ ಬರುವುದೇ ಅಪರೂಪದಲ್ಲಿ ಅಪರೂಪ. 2006 ರಲ್ಲಿ ಅವರನ್ನು ಸಂಘ ಭಾರತೀಯ ಜನತಾ ಪಾರ್ಟಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕಳುಹಿಸಿಕೊಟ್ಟಿತು. ಈ ಜವಾಬ್ದಾರಿ ವಹಿಸಿಕೊಳ್ಳುವವರ ಕೆಲಸವೇ ಬಿಜೆಪಿಯಲ್ಲಿ ಹುಟ್ಟಿದ, ಹುಟ್ಟಲಿರುವ ಗೊಂದಲವನ್ನು ಸರಿಮಾಡುವುದು. ಮೂಲತ: ಇಂಜಿನಿಯರಿಂಗ್ ಪದವಿಧರರಾದ ಸಂತೋಷ್ ಅವರು ಆವತ್ತಿನಿಂದ ಇವತ್ತಿನ ತನಕ ಕಂಡದ್ದು ಭವಿಷ್ಯದ ಭಾರತದ ಉದಯದಲ್ಲಿ ಬಿಜೆಪಿ ಹೇಗೆ ಕೊಡುಗೆಯನ್ನು ಕೊಡಬಹುದು ಎನ್ನುವುದನ್ನು ಮಾತ್ರ. ಅವರು ಈ ಕನಸು ಕಾಣುತ್ತಲೇ ಕರ್ನಾಟಕದ ಬಿಜೆಪಿಗೆ ಹೊಸ ದಿಕ್ಕು ನೀಡಲು ಆರಂಭಿಸಿದರು. ಅದರ ಪರಿಣಾಮವಾಗಿ 2008 ರಿಂದ 2013 ರ ತನಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲು ಸಾಧ್ಯವಾಯಿತು. ಆವತ್ತು ಉಂಟಾದ ಕೆಲವು ಗೊಂದಲಗಳನ್ನು ಸಂತೋಷ್ ನಿವಾರಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಒಂದು ಸಂಘಟನೆ ಅಥವಾ ಪಕ್ಷ ಬೆಳೆಯಬೇಕಾದರೆ ಅಲ್ಲಿ ದೊಡ್ಡ ಕಾರ್ಯಕರ್ತರ ಪಡೆ ರಚನೆಯಾಗಬೇಕು. ಆ ಕಾರ್ಯಕರ್ತರ ಪಡೆ ರಚನೆಯಾಗಬೇಕಾದರೆ ಪಕ್ಷದಲ್ಲಿ ಅಂತವರಿಗೆ ಸೇವೆ ಸಲ್ಲಿಸುವ, ಪಕ್ಷ ಕಟ್ಟಿ ಬೆಳೆಸಲು ಅವಕಾಶ ನೀಡಬೇಕು. ಯಾವಾಗ ಪಕ್ಷ ಬೆಳೆಯುತ್ತದೆಯೋ ಅದು ಅಧಿಕಾರವನ್ನು ಕೂಡ ಹಿಡಿಯುತ್ತದೆ. ಆಗ ಪಕ್ಷ ಅಧಿಕಾರಕ್ಕೆ ತಂದವರನ್ನು ಗುರುತಿಸಿ ಅವರಿಗೆ ಆಡಳಿತ ಮಾಡಲು ಶಾಸಕ, ಸಂಸದರನ್ನಾಗಿ ಮಾಡಬೇಕು. ಅದರಲ್ಲಿಯೇ ಕೆಲವರು ಸಚಿವರು, ಮುಖ್ಯಮಂತ್ರಿ ಆಗುವುದು ಮುಂದಿನ ಹಂತ.
ಹೀಗೆ ಪಕ್ಷ ಯಾರನ್ನಾದರೂ ಶಾಸಕರನ್ನಾಗಿ ಮಾಡಿದಾಗ ಅಂತವರು ಉತ್ತಮ ಅಭಿವೃದ್ಧಿ ಕಾರ್ಯಗಳ ಮೂಲಕ ಸರಕಾರ ಮತ್ತೆ ಅಧಿಕಾರಕ್ಕೆ ಬರಲು ಕೊಡುಗೆಯನ್ನು ನೀಡಬೇಕಾಗುತ್ತದೆ. ಒಂದು ವೇಳೆ ಅಂತವರು ಶಾಸಕರಾಗಿಯೋ, ಸಚಿವರಾಗಿಯೋ ವಿಫಲವಾದರೆ ಲಕ್ಷಾಂತರ ಕಾರ್ಯಕರ್ತರಿರುವ ಪಕ್ಷದಲ್ಲಿ ಸಹಜವಾಗಿ ಬೇರೆಯವರಿಗೆ ಅವಕಾಶ ನೀಡಲಾಗುತ್ತದೆ. ಅದರೊಂದಿಗೆ ಒಂದು ಶಾಸಕತ್ವದ ಅವಧಿ ಐದು ವರ್ಷ ಗರಿಷ್ಟ ಇರುವುದರಿಂದ ಮೂರು ಅವಧಿಯ ನಂತರವೂ ಆ ಶಾಸಕ ತಾನೇ ಮುಂದುವರೆಯುತ್ತೇನೆ ಎಂದು ಹಟ ಮಾಡದೇ ಬೇರೆ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಬೇಕು. ಆಗ ಇನ್ನೊಂದು ತಲೆಮಾರು ಕೂಡ ಅಧಿಕಾರವನ್ನು ಕಾಣಲು ಸಾಧ್ಯ. ಆದರೆ ನಾನೇ ಸಾಯುವ ತನಕ ಶಾಸಕನಾಗುತ್ತೇನೆ ಎಂದು ಯಾರಾದರೂ ಹೊರಟರೆ ಅವರು ಪಕ್ಷಕ್ಕೆ ಡೇಂಜರಸ್. ಅಂತಹ ಸಂದರ್ಭದಲ್ಲಿ ಭವಿಷ್ಯದ ಪಕ್ಷವನ್ನು ಕಟ್ಟಲು ಒಂದು ದೂರದೃಷ್ಟಿಯ ಯೋಜನೆಯನ್ನು ಹಾಕಿಕೊಳ್ಳಬೇಕಾಗುತ್ತದೆ. ಅದು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುವ ಪಾಲಿಸಿ. ಈಗ ಬಿಜೆಪಿ ಹೈಕಮಾಂಡ್ ಎಷ್ಟು ಸ್ಟ್ರಾಂಗ್ ಆಗಿದೆ ಎಂದರೆ ಮೋದಿ ಒಂದು ಸಲ ಒಂದು ನಿಯಮ, ಷರತ್ತು ರೂಪಿಸಿದರು ಎಂದರೆ ಮುಗಿಯಿತು ನಂತರ ಅದರಿಂದ ಹಿಂದೆ ಸರಿಯಲ್ಲ. ಒಬ್ಬ ವ್ಯಕ್ತಿ ಮೂರ್ನಾಕು ಸಲ ಶಾಸಕರಾದರು ಎಂದರೆ ಅದರ ನಂತರ ಮುಂದಿನ ಅವಧಿಗೆ ಬೇರೆಯವರಿಗೆ ಅವಕಾಶ ನೀಡುವುದಕ್ಕೆ ಆಗಲೇ ಮಾನಸಿಕ ಸಿದ್ಧನಾಗಬೇಕು. ಒಂದೇ ಸಮನೆ ಎಲ್ಲರನ್ನು ಈ ಚೌಕಟ್ಟಿನಲ್ಲಿ ತರಲು ಆಗುವುದಿಲ್ಲ. ಹಂತಹಂತವಾಗಿ ನಾಲ್ಕನೇ ಒಂದರಷ್ಟು ಜನರನ್ನು ಸೂತ್ರದ ಅಡಿಯಲ್ಲಿ ತರಲು ಪಕ್ಷ ಸಿದ್ಧತೆ ಮಾಡಿದೆ. ಹೀಗೆ ಮಾಡಿದರೆ ಮುಂದೊಂದು ದಿನ ಪಕ್ಷ ಹೊಸ ರೂಪದಲ್ಲಿ ಕಂಗೊಳಿಸುವುದು ಸಹಜ. ಅದರ ಭಾಗವಾಗಿ ಕೆಲವರಿಗೆ ಈ ಬಾರಿ ಟಿಕೆಟ್ ನೀಡಲಾಗಿಲ್ಲ. ಇದರಲ್ಲಿ ಸಂತೋಷ್ ಅವರ ತಪ್ಪು ಏನೂ ಇಲ್ಲ ಎನ್ನುವುದು ಶೆಟ್ಟರ್ ಅವರಿಗೆ ಗೊತ್ತಿರಬೇಕಿತ್ತು. ಸಂತೋಷ್ ಅವರು ಸಂಘದ ಪ್ರಚಾರಕ್ಕಾಗಿ ಮೊದಲ ಬಾರಿಗೆ ಜವಾಬ್ದಾರಿ ತೆಗೆದುಕೊಂಡು 30 ವರ್ಷ ಪೂರ್ಣಗೊಳ್ಳುತ್ತಿದೆ. ಇಲ್ಲಿಯ ತನಕ ಅವರು ಪಕ್ಷದ ಜವಾಬ್ದಾರಿ ವಹಿಸಿಕೊಂಡ ಬಳಿಕ ದೇಶಾದ್ಯಂತ ಎಷ್ಟೋ ಯುವಕರನ್ನು ನಾಯಕರನ್ನಾಗಿ ಮಾಡಿದ್ದಾರೆ. ಎಷ್ಟೋ ಯುವಕರು ಶಾಸಕ, ಸಂಸದರಾಗಿ ರೂಪುಗೊಳ್ಳಲು ಸಂತೋಷ್ ಅವರ ಮಾರ್ಗದರ್ಶನ ಕೂಡ ಕಾರಣ. ಅದರಲ್ಲಿ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಸೇರಿ ಎಲ್ಲಾ ಜಾತಿಯವರು ಇದ್ದಾರೆ. ಆದರೆ ಮೋದಿಯವರ ಪಕ್ಕದಲ್ಲಿ ಇದ್ದರೂ ಸಂತೋಷ್ ಯಾವತ್ತೂ ಅದರ ಲಾಭ ಸ್ವಾರ್ಥಕ್ಕಾಗಿ ಪಡೆದುಕೊಂಡಿಲ್ಲ. ಸಂತೋಷ್ ಮನಸ್ಸು ಮಾಡಿದರೆ ಏನಾದರೂ ಆಗಬಹುದಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಸ್ವಂತಕ್ಕಾಗಿ ಆನೂ ಆಗದೇ, ಮೌನದಲ್ಲಿಯೇ ಇದ್ದು, ಕೇವಲ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಾ, ಯುವಕರನ್ನು ಬೆಳೆಸುತ್ತಾ, ಭಾರತ ವಿಶ್ವಗುರು ಆಗುವುದನ್ನು ನೋಡುತ್ತಾ ಸಂತೋಷ್ ಇರುವುದರಿಂದ ಅವರನ್ನು ಗೌರವಿಸುವ ದೊಡ್ಡ ವರ್ಗ ಬಿಜೆಪಿಯಲ್ಲಿ ಇದೆ!
0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Hanumantha Kamath July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Hanumantha Kamath July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search