ಇದು ತನಿಖೆ ಆಗಲ್ಲ ಎನ್ನುವ ಭರವಸೆ ಕೆಲವರಿಗಿದೆ!
ಕೇವಲ ಮುಸ್ಲಿಂ ಯುವಕರೇ ತಮ್ಮ ಮತದ (ಇಸ್ಲಾಂ ಧರ್ಮ ಅಲ್ಲ ಮತ) ವಿಷಯದಲ್ಲಿ ಬ್ರೇನ್ ವಾಶ್ ಗೆ ಒಳಗಾಗುತ್ತಾರೆ ಎನ್ನುವ ಅಭಿಪ್ರಾಯ ಒಂದು ಕಾಲದಲ್ಲಿ ಇತ್ತು. ಆದರೆ ಕಾಲಾಂತರದಲ್ಲಿ ಎಲ್ಲವನ್ನು ಬಾಂಬ್, ಯುದ್ಧದಿಂದಲೇ ಗೆಲ್ಲಲು ಆಗುವುದಿಲ್ಲ ಎನ್ನುವುದು ಅವರಿಗೂ ಗೊತ್ತಾಯಿತು. ಅನೇಕ ರೀತಿಯ ಜಿಹಾದ್ ಗಳ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸಬಹುದು ಎಂಬ ಯೋಜನೆ ಜಾರಿಗೆ ಬಂದ ನಂತರ ತಮ್ಮದೇ ಸಮುದಾಯದ ಹೆಣ್ಣುಮಕ್ಕಳನ್ನು ಕೂಡ ಈ ಜಿಹಾದ್ ಗಳಿಗೆ ಬಳಸುವ ಸಂಚು ತಯಾರಾಯಿತು. ಯಾಕೆಂದರೆ ಲವ್ ಜಿಹಾದ್ ವಿಷಯ ಬಂದಾಗ ಎಲ್ಲವನ್ನು ಮತಾಂಧ ಪುರುಷರೇ ಮಾಡಲು ಆಗುವುದಿಲ್ಲ. ಯಾಕೆಂದರೆ ಹಿಂದೂ ಹೆಣ್ಣುಮಕ್ಕಳು ಕೂಡ ಒಂದಿಷ್ಟು ಜಾಗೃತಗೊಂಡಿದ್ದಾರೆ. ಅವರನ್ನು ಅಷ್ಟು ಸುಲಭವಾಗಿ ಬಲೆಗೆ ಬೀಳಿಸಲು ಆಗುವುದಿಲ್ಲ. ಅದಕ್ಕಾಗಿ ಮೂಲಭೂತವಾದಿಗಳು ಹೊಸ ಷಡ್ಯಂತ್ರವನ್ನು ರಚಿಸಿದ್ದಾರೆ. ಅದರ ಭಾಗವೇ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಯುವತಿಯರ ವಿಡಿಯೋ ತೆಗೆಯುವುದು ಮತ್ತು ಅದನ್ನು ವೈರಲ್ ಮಾಡುವುದು.
ಯಾವುದೇ ಒಂದು ಮಹಿಳಾ ಶೌಚಾಲಯದಲ್ಲಿ ಕ್ಯಾಮೆರಾ ಇಡಲು ಯುವಕರು ಹೋದರೆ ಅಲ್ಲಿ ಅವರು ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಾಗುತ್ತದೆ. ಅದಕ್ಕೆ ಯುವತಿಯರನ್ನು ಬಳಸುವುದೇ ಸುಲಭದ ದಾರಿ ಎಂದು ಅಂದುಕೊಂಡಿರುವ ದುರುಳರು ಅದಕ್ಕಾಗಿ ತಮ್ಮದೇ ಸಮಾಜದ ಯುವತಿಯರನ್ನು ಬಳಸಿದ್ದಾರೆ. ಹಾಗೆ ಮುಸ್ಲಿಂ ಯುವತಿಯರು ಕ್ಯಾಮೆರಾ ಇಟ್ಟು ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪಡೆದುಕೊಂಡು ಅದನ್ನು ಉಚ್ಚಿಲದ ಯುವಕನೊಬ್ಬನಿಗೆ ಕಳುಹಿಸಿ ಆತ ಅದನ್ನು ವೈರಲ್ ಮಾಡುತ್ತಿದ್ದ. ಬೆಕ್ಕು ಕಣ್ಣು ಮುಚ್ಚಿ ಕ್ಯಾಮೆರಾ ಇಟ್ಟರೂ ಅದು ಒಂದಲ್ಲ ಒಂದು ದಿನ ಗೊತ್ತಾಗದೇ ಇರುವುದಿಲ್ಲ ಎನ್ನುವಂತೆ ಉಡುಪಿಯ ಖಾಸಗಿ ನೇತ್ರ ಚಿಕಿತ್ಸಾಲಯ ಮತ್ತು ನರ್ಸಿಂಗ್ ಹೋಂನ ಮಹಿಳಾ ಶೌಚಾಲಯದಲ್ಲಿ ಇಟ್ಟ ಕ್ಯಾಮೆರಾ ಪತ್ತೆಯಾಗಿದೆ. ಅದನ್ನು ಯಾರು ಇಟ್ಟಿದ್ದರು ಮತ್ತು ಅವರು ಯಾರಿಗೆ ಕೊಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ಆ ಮುಸ್ಲಿಂ ಯುವತಿಯರನ್ನು ಕರೆಸಿ ಮುಚ್ಚಳಿಕೆ ಬರೆದು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಹಾಗಾದರೆ ಮುಂದೇನು? ಇಷ್ಟು ದಿನ ಹಿಂದೂ ಯುವತಿಯರ ಖಾಸಗಿ ವಿಡಿಯೋಗಳು ಲೀಕ್ ಆದವಲ್ಲ, ಅದಕ್ಕೆ ಯಾರು ಕಾರಣ ಎನ್ನುವುದು ತನಿಖೆ ಆಗುವುದು ಬೇಡವೇ?
ಜಾಡು ಹಿಡಿದು ಹೋಗುವ ಅವಶ್ಯಕತೆ ಇದೆ!
ಯಾಕೆಂದರೆ ಇದು ಒಂದು ಕಾಲೇಜು ಅಥವಾ ನರ್ಸಿಂಗ್ ಹೋಮ್ ಇದಕ್ಕೆ ಸಂಬಂಧಪಟ್ಟ ವಿಷಯ ಅಲ್ಲ. ಇದು ಎಷ್ಟೋ ಹಿಂದೂ ವಿದ್ಯಾರ್ಥಿನಿಯರ ಭವಿಷ್ಯದ ಪ್ರಶ್ನೆ. ಅವರ ಬದುಕಿನ ಪ್ರಶ್ನೆ. ಯಾವುದೋ ಯುವತಿ ಗುಟ್ಟಾಗಿ ಕ್ಯಾಮೆರಾ ಇಟ್ಟು ಹೋದ್ಳು ಎನ್ನುವುದು ಚಿಕ್ಕ ವಿಷಯ ಆಗುವುದಿಲ್ಲ. ಈಗ ಕಾಲೇಜಿನಿಂದ ಅಮಾನತಾಗಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹೀಗೆ ಮಾಡಲು ಯಾರು ಹೇಳಿದ್ರು. ಅವರಿಗೆ ಕ್ಯಾಮೆರಾ ಯಾರು ಕೊಟ್ರು. ಯಾವ ವ್ಯಕ್ತಿಗೆ ಅವರು ವಿಡಿಯೋ ಕೊಡುತ್ತಿದ್ದರು. ಆತ ಯಾಕೆ ಹಾಗೆ ಮಾಡುತ್ತಿದ್ದ. ಇದರಿಂದ ಎಷ್ಟು ಹಿಂದೂ ಹೆಣ್ಣುಮಕ್ಕಳಿಗೆ ಇಲ್ಲಿಯ ತನಕ ಮಾನಸಿಕ ಆಘಾತ ಉಂಟಾಗಿದೆ? ಅವರು ಅದನ್ನು ಯಾರಿಗೂ ಹೇಳಲಾಗದೇ ಮನಸ್ಸಿನ ಒಳಗೊಳಗೆ ಕೊರಗುತ್ತಿದ್ದಾರಾ? ಅದರಿಂದ ಅವರ ಸಾಧನೆಗೆ ಇದು ಅಡ್ಡಿಯಾಗಿದೆಯಾ? ಎಲ್ಲವೂ ತನಿಖೆಯಾಗಲೇಬೇಕು. ಆಗ ಇದರ ಹಿಂದಿರುವ ಮತೀಯ ಶಕ್ತಿಗಳು ಯಾರೆಂದು ಗೊತ್ತಾಗುತ್ತದೆ. ಇದು ಹಿಂದೂ ಯುವತಿಯರನ್ನು ಟ್ರಾಪ್ ಮಾಡಲು ಬಳಸಿರುವ ತಂತ್ರವೇ ಎಂದು ಕೂಡ ನೋಡಬೇಕು. ಇದರಿಂದಲೇ ಯಾವುದಾದರೂ ಹೆಣ್ಣುಮಗಳು ಆತ್ಮಹತ್ಯೆಗೆ ಮುಂದಾಗಿದ್ದಾಳಾ ಎಂದು ಕೂಡ ನೋಡಬೇಕು.
ಇದು ತನಿಖೆ ಆಗಲ್ಲ ಎನ್ನುವ ಭರವಸೆ ಕೆಲವರಿಗಿದೆ!
ಈ ಬಗ್ಗೆ ಸೂಕ್ತ ತನಿಖೆ ನಡೆದು ಆರೋಪಿಗಳಿಗೆ ಶಿಕ್ಷೆ ಆದರೆ ಮಾತ್ರ ಇಂತಹ ಕೃತ್ಯಗಳು ನಿಲ್ಲುವ ಸಾಧ್ಯತೆ ಇದೆ. ಯಾಕೆಂದರೆ ಮಂಗಳೂರು ವಿವಿಯಲ್ಲಿ ಕೂಡ ಇಂತಹ ಕೃತ್ಯ ನಡೆದಿತ್ತು. ವಿದ್ಯಾರ್ಥಿ ಸಮುದಾಯದ ಪ್ರತಿಭಟನೆಗೆ ಇಳಿದ ಬಳಿಕ ಆರೋಪಿಯನ್ನು ಕಾಲೇಜಿನಿಂದ ಅಮಾನತು, ಅದು, ಇದು ಎಂದು ಕೇವಲ ಬಿಟ್ಟರೆ ಸಾಕಾಗುವುದಿಲ್ಲ.
ಇಂತಹ ಪ್ರಕರಣಗಳಿಂದ ಮತ್ತೆ ಹಿಂದೂ, ಮುಸ್ಲಿಮರ ನಡುವಿನ ಕಂದಕ ಜಾಸ್ತಿಯಾಗುವ ಸಾಧ್ಯತೆ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಎರಡೂ ಸಮುದಾಯದ ಮೇಲೆ ಕೋಪ, ದ್ವೇಷ ಹೆಚ್ಚಾಗಬಹುದು. ಮುಸ್ಲಿಂ ಯುವತಿಯರ ಮೇಲೆ ಹಿಂದೂ ವಿದ್ಯಾರ್ಥಿನಿಯರಿಗೆ ಅಪನಂಬಿಕೆ ಉಂಟಾಗಬಹುದು. ಇದು ಗಲಾಟೆಗೆ ಕಾರಣವಾಗಬಹುದು. ಇದರಿಂದ ಶಿಕ್ಷಣ ಸಂಸ್ಥೆಗಳು ಘರ್ಷಣೆಯ ಕೇಂದ್ರಗಳಾಗಬಹುದು. ಈ ಬಗ್ಗೆ ತನಿಖೆ ಆದಷ್ಟು ತಮಗೆ ಕಿರಿಕಿರಿ, ತಮ್ಮ ಸಂಸ್ಥೆಯ ಹೆಸರು, ಇಮೇಜ್ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಅಂತಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಎಷ್ಟು ಮುಚ್ಚಲು ಸಾಧ್ಯವಾಗುತ್ತದೆಯೋ ಅಷ್ಟು ಮುಚ್ಚಿಬಿಡುತ್ತಾರೆ. ಯಾರಿಗೂ ಇದು ದೊಡ್ಡದಾಗುವದು ಬೇಕಿಲ್ಲ. ಆದರೆ ಅಮಾಯಕ ಯುವತಿಯರು ದೇಹಭಾದೆ ತೀರಿಸಲು ಹೋದಾಗ ತಮ್ಮ ವಿಡಿಯೋ ದಾಖಲಾಗುತ್ತಿದೆ ಎಂದು ಪಾಪ ಅರಿವಿಲ್ಲದೇ ಹೋಗಿರುತ್ತಾರೆ. ಅದರಲ್ಲಿ ಒಬ್ಬಳು ಯಾರದ್ದೋ ಮನೆ ಮಗಳಾಗಿರಬಹುದು, ಸಹೋದರಿಯಾಗಿರಬಹುದು. ಅವಳಿಗೆ ನ್ಯಾಯ ಸಿಗುವುದು ಬೇಡವೇ?
Leave A Reply