ಏನು ಕಾನೂನು ಪೊಲೀಸ್ ಅಧಿಕಾರಿಗಳೇ?
ಅಲಿಮತುಲ್ Shaifa, ಶಾಬಾನಾಝ್ ಮತ್ತು ಆಲಿಯಾ ಮತ್ತು ಉಡುಪಿಯ ನೇತ್ರ ಕಾಲೇಜಿನ ವಿರುದ್ಧ ಎಫ್ ಐ ಆರ್ (ಪ್ರಥಮ ಮಾಹಿತಿ ವರದಿ) ದಾಖಲಾಗಿದೆ. ಈ ಪ್ರಕರಣವನ್ನು ಕೊನೆಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚೀಂದ್ರ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಈ ಬಗ್ಗೆ ಮಾಧ್ಯಮದವರು ಪೊಲೀಸ್ ವರಿಷ್ಟಾಧಿಕಾರಿಯವರನ್ನು ಸಂಪರ್ಕಿಸಿದಾಗ ಹಿಡನ್ ಕ್ಯಾಮೆರಾ ಅಥವಾ ಅಂತಹ ಯಾವುದೇ ಸಾಧನ ಬಳಸಿದ ಯಾವುದೇ ಕುರುಹು ಕಂಡುಬಂದಿಲ್ಲ. ಇಂತಹ ಫೋಟೋ, ವಿಡಿಯೋ ಬಳಸಿ ಯಾವುದೇ ಬ್ಲಾಕ್ ಮೇಲ್ ಮಾಡಿರುವ ಮಾಹಿತಿ ಸಿಕ್ಕಿಲ್ಲ ಎಂದು ಹೇಳುತ್ತಾ ಬರುತ್ತಿದ್ದರು.
ಆದರೆ ಸಾವರ್ಜನಿಕ ವಲಯದಿಂದ ಬಹಳ ಒತ್ತಡ ಬಂದ ಬಳಿಕ ಅನಿವಾರ್ಯವಾಗಿ ಪ್ರಕರಣ ದಾಖಲಿಸಲಾಗಿದೆ. ಯಾಕೆಂದರೆ ಜನಸಾಮಾನ್ಯರು ಎಸ್ ಪಿಯವರಿಗೆ ನಾಲ್ಕೈದು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದರು. ಒಂದನೇಯದಾಗಿ ಎಫ್ ಐಆರ್ ಅಥವಾ ಸುಮೋಟೋ ಕೇಸು ದಾಖಲಿಸದೇ ಮೊಬೈಲ್ ನಲ್ಲಿರುವ ಡಾಟಾಗಳನ್ನು ಯಾವ ಆಧಾರದಲ್ಲಿ ತೆಗೆದಿದ್ದೀರಿ? ಕೇಸು ದಾಖಲಿಸದೇ ಡಾಟಾಗಳನ್ನು ತೆಗೆಯುವುದು ತಪ್ಪು. ಯಾಕೆಂದರೆ ಇದರಿಂದ ಸಾಕ್ಷಿ ನಾಶವಾಗುತ್ತದೆ. ಇನ್ನು ಪೊಲೀಸರು ತಮ್ಮಲ್ಲಿ ಇರಿಸಿಕೊಂಡಿರುವ ಮೊಬೈಲ್ ನಲ್ಲಿ ವಿಡಿಯೋಗಳು ಇಲ್ಲ ಎಂದು ಹೇಳುವುದಾದರೆ ಫೋನ್ ಎಕ್ಸಚೆಂಜ್ ಆಯಿತಾ, ಸಾಕ್ಷಿ ನಾಶ ಮಾಡಲು ಪ್ರಯತ್ನ ನಡೆಸಲಾಯಿತಾ? ಅಥವಾ ವಿಡಿಯೋ ತಮಗೆ ಬೇಕಾದವರಿಗೆ ಕಳುಹಿಸಿ ಡಿಲೀಟ್ ಮಾಡಲಾಯಿತಾ? ಎಂದು ತನಿಖೆ ಆಗಬೇಡವೇ?
ಏನು ಕಾನೂನು ಪೊಲೀಸ್ ಅಧಿಕಾರಿಗಳೇ?
ಇನ್ನು ಅಲ್ಲಿ ಚಿತ್ರೀಕರಣವಾದ ಯಾವುದೇ ವಿಡಿಯೋ ಇಲ್ಲಿಯ ತನಕ ಶೇರ್ ಆಗಿಲ್ಲ ಎಂದು ಹೇಳಿದ ತಕ್ಷಣ ಪ್ರಕರಣ ಮುಗಿಯುವುದಿಲ್ಲ. ಕೊಲ್ಲಲು ಚೂರಿ ಹಾಕಿದ್ದು, ಆದರೆ ಯಾರೂ ಸತ್ತಿಲ್ಲ. ಆದ್ದರಿಂದ ಶಿಕ್ಷೆ, ವಿಚಾರಣೆ, ತನಿಖೆ ಯಾವುದೂ ಇಲ್ಲ ಎನ್ನುವುದು ಭಾರತದ ಹೊಸ ಕಾನೂನಾ ಪೊಲೀಸ್ ವರಿಷ್ಠಾಧಿಕಾರಿಯವರೇ? ಇನ್ನು ಈಗ ಶೇರ್ ಆಗದೇ ಇರಬಹುದು. ಭವಿಷ್ಯದಲ್ಲಿ ಒಳ್ಳೆಯ ಸಮಯ ನೋಡಿ ವಿದೇಶದಲ್ಲಿ ಕುಳಿತು ಪೋಸ್ಟ್ ಮಾಡಿದರೆ ಆಗ ಏನು ಮಾಡುವುದು? ಇಂದಿನ ಸೈಬರ್ ಯುಗ ಇಷ್ಟು ಮುಂದುವರೆದಿರುವಾಗ ಪೊಲೀಸರು ಇಷ್ಟೆಲ್ಲಾ ಯೋಚಿಸುವುದಿಲ್ಲವೇ?
ಇನ್ನು ವಿಡಿಯೋ ಕ್ಯಾಮೆರಾ ಇಟ್ಟಿದ್ದು ಫನ್ ಗಾಗಿ ಎಂದು ಹೇಳಿ ತಿಪ್ಪೆ ಸಾರಿಸಲು ಪ್ರಯತ್ನ ನಡೆಸಲಾಗಿದೆ. ಟಾಯ್ಲೆಟ್ ನಲ್ಲಿ ವಿಡಿಯೋ ಕ್ಯಾಮೆರಾ ಇಟ್ಟು ಫನ್ ಅನುಭವಿಸಲು ಮುಂದಾಗಿರುವ ಯುವತಿಯರು ಈ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಎಷ್ಟು ಗಂಭೀರವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಯುತ್ತದೆ. ಇವರು ಮುಂದೆ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ ಕೆಲಸಕ್ಕೆ ಸೇರಿದರೆ ಎಷ್ಟರಮಟ್ಟಿಗೆ ಬದ್ಧತೆ ತೋರಿಸುತ್ತಾರೆ ಎಂದು ಗೊತ್ತಾಗುತ್ತದೆ. ಇನ್ನು ಪೊಲೀಸರು ಕೂಡ ಈ ವಿಷಯದಲ್ಲಿ ಒಟ್ಟು ನಡೆದಕೊಂಡ ರೀತಿಯ ಬಗ್ಗೆ ಅನುಮಾನಗಳಿವೆ. ಕ್ಯಾಮೆರಾ ಇಟ್ಟ ಯುವತಿಯರ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳದೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಟ್ವಿಟ್ಟರ್ ನಲ್ಲಿ ಆಗ್ರಹಿಸಿದ ರಶ್ಮಿ ಸಾವಂತ್ ಎನ್ನುವ ವಿದ್ಯಾರ್ಥಿ ಮುಖಂಡೆಯ ಮಣಿಪಾಲದ ಮನೆಗೆ ಹೋಗಿ ಏನ್ರೀ ಬರೆದದ್ದು ಎಂದು ಆವಾಜ್ ಹಾಕಿ ಬಂದಿದ್ದಾರೆ. ಇದರ ಅರ್ಥ ಏನು? ತನಿಖೆ ಮಾಡಲ್ವಾ ಎಂದು ಕೇಳುವುದು ಟಾಯ್ಲೆಟ್ಟಿನಲ್ಲಿ ಕ್ಯಾಮೆರಾ ಇಡುವುದಕ್ಕಿಂತ ಹೆಚ್ಚು ಅಪರಾಧ ಎಂದು ಉಡುಪಿ ಪೊಲೀಸರು ತೀರ್ಮಾನಿಸಿದ್ದಾರೆ.
ಒತ್ತಡ ಬಂದರೆ ಏನಾದರೂ ಮಾಡೋಣ ಎಂದುಕೊಂಡ್ರಾ?
ಇನ್ನು ವಿಪಕ್ಷ ಭಾರತೀಯ ಜನತಾ ಪಾರ್ಟಿಯ ಶಾಸಕರು ಬಹಿರಂಗವಾಗಿ ಹೇಳಿಕೆ ಕೊಟ್ಟ ನಂತರ, ಪಶ್ಚಿಮ ವಲಯದ ಡಿಐಜಿಯವರಿಗೆ ಬಜರಂಗದಳ, ವಿಶ್ವಹಿಂದೂ ಪರಿಷತ್ ನವರು ಮನವಿ ಮಾಡಿದ ನಂತರ, ವಿದ್ಯಾರ್ಥಿ ಸಂಘಟನೆಯವರು ಪ್ರತಿಭಟನೆಗೆ ದಿನಾಂಕ ನಿಗದಿಪಡಿಸಿದ ನಂತರ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಜಾಗೃತಗೊಂಡಿದ್ದಾರೆ. ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಸುಮೋಟೋ ಎಂದರೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವುದು. ಇಲ್ಲಿಯ ತನಕ ಸಾಕ್ಷಿ ಇಲ್ಲದೇ ಪ್ರಕರಣ ಹೇಗೆ ದಾಖಲಿಸುವುದು ಎಂದು ಪೊಲೀಸ್ ಇಲಾಖೆ ಹಿಂದೆ ಮುಂದೆ ನೋಡುತ್ತಿತ್ತು. ಯಾಕೆಂದರೆ ಕ್ಯಾಮೆರಾದಲ್ಲಿ ಸೆರೆಯಾಗಿರುವ ಹೆಣ್ಣುಮಕ್ಕಳು ದೂರು ಕೊಡಬೇಕು ಎಂದು ನಿರೀಕ್ಷೆ ಮಾಡುತ್ತಾ ಇದ್ದರೋ ಏನೋ? ಯಾಕೆಂದರೆ ಹಾಗೆ ಯಾರೂ ಕೂಡ ದೂರು ಕೊಡುವ ಸಾಧ್ಯತೆಯೇ ಇರುವುದಿಲ್ಲ. ಇದು ಪ್ರತಿ ಹೆಣ್ಣುಮಗಳ ಭವಿಷ್ಯದ ಪ್ರಶ್ನೆ. ಯಾರೂ ದೂರು ಕೊಡಲು ಮುಂದೆ ಬರುವುದಿಲ್ಲ. ಒಟ್ಟಿನಲ್ಲಿ ಸದ್ಯ ತನಿಖೆ ಸರಿಯಾದ ದಿಕ್ಕಿನಲ್ಲಿ ಆರಂಭವಾಗುವ ಕ್ಷೀಣವಾದ ಸಾಧ್ಯತೆ ಕಾಣುತ್ತಿದೆ. ಕಾಲೇಜಿನ ವಿರುದ್ಧವೂ ಸಾಕ್ಷಿಯನ್ನು ಮುಚ್ಚಿಟ್ಟ ಅಥವಾ ಮರೆಮಾಚಲು ಪ್ರಯತ್ನ ಮಾಡಿರುವ ಕೇಸುಗಳು ದಾಖಲಾಗಿವೆ. ಸೆಕ್ಷನ್ 509, 204, 175, 34 ಮತ್ತು 66 (ಈ) ಐಟಿ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮ ನಿರೀಕ್ಷೆ ಏನೆಂದರೆ ತಪ್ಪು ಮಾಡಿದವರಿಗೆ ಬುದ್ಧಿ ಬರುವಂತಹ ಶಿಕ್ಷೆ ಆಗಬೇಕು. ಹೆಣ್ಣು ಮಕ್ಕಳು ಯಾವುದೇ ಸಮುದಾಯದವರಾಗಲಿ ಟಾಯ್ಲೆಟಿನಲ್ಲಿ ಇದ್ದಾಗ ವಿಡಿಯೋ ಮಾಡುವುದು ತಪ್ಪು. ಹಾಗೆ ತಮಗೆ ಗೊತ್ತಿಲ್ಲದೆ ಇಂತಹ ಷಡ್ಯಂತ್ರಕ್ಕೆ ಬಲಿಯಾಗಿರಬಹುದಾದ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಲಿ. ಸತ್ಯ ಗೆಲ್ಲಲಿ!!
Leave A Reply