7 ತಿಂಗಳ ಗರ್ಭೀಣಿಗೆ ಒಲಿಂಪಿಕ್ಸ್ ಗೆಲುವು!
ಈಜಿಪ್ಟ್ ರಾಷ್ಟ್ರದ ನಡಾ ಹಫೀಜ್ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಯುಎಸ್ ಎ ಒಕ್ಕೂಟದ ಎಲಿಜಬೆತ್ ಟಾರ್ಟಾಕೊವಸ್ಕಿ ಅವರನ್ನು ಮಹಿಳಾ ಕತ್ತಿವರಸೆ ವಿಭಾಗದಲ್ಲಿ ಸೋಲಿಸಿದ ಸುದ್ದಿ ಪ್ರಸಾರಗೊಂಡಾಗ ಅದರಲ್ಲಿ ಏನು ವಿಶೇಷತೆ ಇದೆ ಎಂದು ನಿಮಗೆ ಅನಿಸಬಹುದು. ಆದರೆ ಪಂದ್ಯ ಮುಗಿದ ಬಳಿಕ ವಿಜೇತೆ ನಡಾ ಹಫೀಜ್ ತನ್ನ ಇನ್ಟಾಗ್ರಾಂನಲ್ಲಿ ಹೇಳಿದ್ಳು ಓದಿದ ನಂತರ ಜಗತ್ತೆ ಒಮ್ಮೆ ಬೆಚ್ಚಿಬಿದ್ದಿತ್ತು. ” ಈ ಪಂದ್ಯ ಆಡುವಾಗ ನಾನು ಗರ್ಭದಲ್ಲಿ ಪುಟ್ಟ ಒಲಿಂಪಿಯನ್ ಹೊತ್ತುಕೊಂಡು ಆಡಿದೆ” ಎಂದು ಆಕೆ ಹೇಳಿದ್ದು ಕೇಳಿ ಎಲ್ಲರೂ ಮೂಕವಿಸ್ಮಿತರಾದರು.
ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಕೆ ಈಗ ಏಳು ತಿಂಗಳ ಗರ್ಭೀಣಿ. ನಡಾ ಹಫೀಜ್ ಅವರಿಗೆ ಈಗ 26 ವರ್ಷ ವಯಸ್ಸು. ನಾನು ಆಟದ ಅಂಗಣದಲ್ಲಿ ಸ್ಪರ್ಧಿಸುವಾಗ ನನ್ನ ಜೊತೆ ಒಟ್ಟು ಮೂರು ಜನ ಇದ್ದರು. ಒಬ್ಬಳು ನಾನು, ಇನ್ನೊಬ್ಬಳು ಸ್ಪರ್ಧಿ, ಮತ್ತೊಂದು ಜೀವ ಹೊಟ್ಟೆಯಲ್ಲಿತ್ತು ಎಂದು ಅವಳು ಬರೆದಿದ್ದಾಳೆ.
” ನನ್ನ ಮಗು ಮತ್ತು ನನಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸುವಾಗ ಸಮಾನವಾದ ಸವಾಲುಗಳು ಇದ್ದವು. ಅದು ದೈಹಿಕ ಮತ್ತು ಭಾವನಾತ್ಮಕ ಏರಡೂ ಆಗಿದ್ದಿರಬಹುದು. ಆದರೆ ಬದುಕಿನ ಸಮಾನತೆಯನ್ನು ಮತ್ತು ಕ್ರೀಡೆಯ ಉತ್ಸಾಹವನ್ನು ಕಾಪಾಡಿಕೊಳ್ಳಲು ಶ್ರಮ ಅಗತ್ಯ ಇತ್ತು” ಎಂದು ಅವರು ಬರೆದಿದ್ದಾರೆ. ” ಮೊದಲ ಪಂದ್ಯ ಗೆದ್ದಾಗ ಬಹಳ ಹೆಮ್ಮೆ ಅನಿಸ್ತು. ಯಾಕೆಂದರೆ ನಾನು ಅಂತಿಮ 16 ರಲ್ಲಿದ್ದೆ” ಎಂದು ನಡಾ ಹೇಳಿದ್ದಾರೆ.
ಹಫೀಜ್ ಮುಂದುವರೆದು ಬರೆಯುತ್ತಾ ” ನಾನು ಬಹಳ ಅದೃಷ್ಟವಂತೆ. ಗಂಡ, ಕುಟುಂಬದ ಪ್ರೀತಿ ಸಿಕ್ಕಿದೆ. ಈ ಬಾರಿಯ ಒಲಿಂಪಿಕ್ಸ್ ತುಂಬಾ ವಿಭಿನ್ನವಾಗಿತ್ತು. ಈ ಬಾರಿ ಒಲಿಂಪಿಯನ್ ಹೊಟ್ಟೆಯಲ್ಲಿಯೂ ಇದ್ದ ಕಾರಣ ಆ ಖುಷಿಯೇ ಬೇರೆ”
ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಗ್ರಾಮದಲ್ಲಿ ಆಯೋಜಕರು ನರ್ಸರಿಯೊಂದನ್ನು ನಡೆಸಿಕೊಂಡು ಬರುತ್ತಿದ್ದು, ಅಲ್ಲಿ ತಾಯಂದಿರು ನಮ್ಮ ಮಕ್ಕಳನ್ನು ಬಿಟ್ಟು ನಿಶ್ಚಿಂತೆಯಾಗಿ ಮೈದಾನಕ್ಕೆ ತೆರಳಬಹುದು. ಈ ಮೂಲಕ ಸ್ಪರ್ಧೆಯಲ್ಲಿ ಸಮಯ ಕಳೆಯುವಿಕೆ ಮತ್ತು ಮಕ್ಕಳೊಂದಿಗೆ ಉಳಿದ ಸಮಯ ವಿನಿಯೋಗಿಸುವಿಕೆ ಬಹಳ ಉತ್ತಮವಾಗಿರುತ್ತದೆ. ಮುಂದಿನ ಬಾರಿ ಹಫೀಜಾ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವಾಗ ಅವಳ ಮಗು ನಾಲ್ಕು ವರ್ಷ ಆಗಲಿದ್ದು, ಒಲಿಂಪಿಕ್ಸ್ ನರ್ಸರಿಯಲ್ಲಿ ಬಿಡಬಹುದು.
Leave A Reply