ಮಾಜಿ ಕಾನ್ಸಟೇಬಲ್ ಮನೆ ಮೇಲೆ ದಾಳಿ: ಎಂಟು ಕೋಟಿ ಮೌಲ್ಯದ ವಸ್ತು ವಶ!
ಪ್ರಾದೇಶಿಕ ಸಾರಿಗೆ ಇಲಾಖೆ ( ಆರ್ ಟಿಒ) ಇದರ ಮಾಜಿ ಕಾನ್ಸಟೇಬಲ್ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳಿಗೆ ಅಲ್ಲಿ ಅಗೆದಷ್ಟು ನಗದು ಸಿಕ್ಕಿದ್ದು ನೋಡಿ ಶಾಕ್ ಆಗಿದೆ. ಆರೋಪಿಯ ಮನೆ, ಸಂಬಂಧಿಕರ ಮನೆ, ಆಪ್ತರ ನಿವಾಸಗಳಲ್ಲಿ ಸೇರಿ ಮೂರು ಕೋಟಿ ರೂಪಾಯಿ ನಗದು ಹಣ ಮತ್ತು ಅಂದಾಜು ಐದು ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಆಸ್ತಿಪತ್ರಗಳು ದೊರಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಮಾಜಿ ಆರ್ ಟಿಒ ಕಾನ್ಸಟೇಬಲ್. ಹೆಸರು ಸೌರವ್ ಶುಕ್ಲಾ. ಈತ ಮಧ್ಯಪ್ರದೇಶದವನು. ಮಾಹಿತಿಯ ಪ್ರಕಾರ ಇವನ ಬಳಿಯಿಂದ ಎರಡು ಡೈರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಡೈರಿ ಕೆಂಪು ಬಣ್ಣದಾಗಿದ್ದು, ಇನ್ನೊಂದು ನೀಲಿ ಬಣ್ಣದ ಕವರ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಪ್ರಭಾವಿ ವ್ಯಕ್ತಿಗಳ ಹೆಸರು ಉಲ್ಲೇಖವಿರುವ ಶಂಕೆ ಇದ್ದು, ಇವನಿಂದ ಉಪಕೃತರಾದವರ ಪಟ್ಟಿ ಅದರಲ್ಲಿ ಇರುವ ಅನುಮಾನ ಲೋಕಾಯುಕ್ತರದ್ದು. ಒಂದು ವೇಳೆ ಅದು ನಿಜವಾಗಿದ್ದರೆ, ಇನ್ನಷ್ಟು ಪ್ರಭಾವಿಗಳ ಹೆಸರು ಇಲ್ಲಿ ಬಹಿರಂಗಗೊಳ್ಳಲಿದೆ.
ಶರ್ಮನಿಗೆ ಇವನ ತಂದೆ 2015 ರಲ್ಲಿ ಸೇವೆಯಲ್ಲಿ ಇರುವಾಗಲೇ ಮೃತಪಟ್ಟ ಕಾರಣ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡಲಾಗಿತ್ತು. ಇವನ ತಂದೆ ರಾಜ್ಯ ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿದ್ದರೂ ಇವನಿಗೆ ಸಾರಿಗೆ ಇಲಾಖೆಯಲ್ಲಿ ಕಾನ್ಸಟೇಬಲ್ ಹುದ್ದೆಗೆ ನೇಮಕ ಮಾಡಲಾಗಿತ್ತು. ಇವನು ಸರಕಾರಿ ಹುದ್ದೆಯಿಂದ 2023 ರಲ್ಲಿ ಸ್ವಯಂ ಪ್ರೇರಿತನಾಗಿ ನಿವೃತ್ತಿ ತೆಗೆದುಕೊಂಡಿದ್ದ. ಇವನು ಭ್ರಷ್ಟಾಚಾರದ ಮೂಲಗಳಿಂದ ಸಂಗ್ರಹಿಸಿದ ಹಣವನ್ನು ತನ್ನ ತಾಯಿ, ಹೆಂಡತಿ, ನಾದಿನಿ ಮತ್ತು ಆಪ್ತರಾದ ಚೇತನ್ ಸಿಂಗ್ ಗೌಡ್ ಹಾಗೂ ಶರದ್ ಜೈಸವಾಲ್ ಎಂಬುವವರ ಹೆಸರಿನಲ್ಲಿಯೂ ಸಾಕಷ್ಟು ಆಸ್ತಿಪಾಸ್ತಿ ಮಾಡಿಟ್ಟಿದ್ದಾನೆ,
Leave A Reply