ಪಟ್ನಾದಲ್ಲಿ ಹೂತು ಹೋಗಿದ್ದ ಐದು ಶತಮಾನದ ಹಿಂದಿನ ಶಿವ ದೇವಾಲಯ ಪತ್ತೆ!

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮತ್ತೊಂದು ಪವಾಡ ಸಂಭವಿಸಿದೆ. ಪಟ್ನಾದ ವಾರ್ಡ್ ನಂಬರ್ 54 ರಲ್ಲಿ ಐನೂರು ವರ್ಷ ಹಳೆಯದಾಗಿರುವ ಶಿವಾಲಯ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಕೌತುಕಕ್ಕೆ ಕಾರಣವಾಗಿದೆ. ಶಿವಾಲಯ ಪತ್ತೆಯಾಗಿರುವ ಜಾಗ ತ್ಯಾಜ್ಯ ಶೇಖರಣಾ ಪ್ರದೇಶವಾಗಿದ್ದ ಕಾರಣ ಇಲ್ಲಿಯ ತನಕ ಯಾರಿಗೂ ಈ ಬಗ್ಗೆ ಯಾವ ಸುಳಿವೂ ಸಿಕ್ಕಿರಲಿಲ್ಲ. ಅಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದ್ದ ಕಾರಣ ಆ ಸ್ಥಳದ ಕೆಳಗಿನ ಪ್ರದೇಶದಲ್ಲಿ ಹೀಗೊಂದು ದೇವಾಲಯ ಇರುವ ಸಾಧ್ಯತೆಯ ಬಗ್ಗೆ ಯಾರಿಗೂ ಸಣ್ಣ ಅನುಮಾನವೂ ಬಂದಿರಲಿಲ್ಲ. ಈಗ ಶಿವಾಲಯ ಪತ್ತೆಯಾಗಿರುವ ಪ್ರದೇಶ ಪ್ರಾಚೀನ ಕಾಲದಲ್ಲಿ ಸಂತರ ಪರಂಪರೆಯ ಮಠದ ಅಧೀನದಲ್ಲಿತ್ತು ಎನ್ನುವ ಈಗ ವಿಷಯ ತಿಳಿದುಬಂದಿದೆ. ಇದರಿಂದ ಆ ಪ್ರದೇಶಕ್ಕೆ ಈಗ ಮತ್ತೆ ದೈವಿಕಲೆ ಬಂದಂತೆ ಆಗಿದೆ.
ಈ ವಿಷಯ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಂದು ಅವರು ಅಲ್ಲಿ ಬರುವಷ್ಟರಲ್ಲಿ ನಾಗರಿಕರು ಆ ಸ್ಥಳವನ್ನು ಇನ್ನಷ್ಟು ಅಗೆದು ದೇವಾಲಯ ಸರಿಯಾಗಿ ಕಾಣುವ ಹಾಗೆ ವ್ಯವಸ್ಥೆ ಮಾಡಿದ್ದರು. ಅಲ್ಲಿ ಸುತ್ತಮುತ್ತಲಿದ್ದ ತ್ಯಾಜ್ಯಗಳನ್ನು ಅಲ್ಲಿಂದ ಬೇರೆಡೆ ಸಾಗಿಸಿ, ಅಲ್ಲಿನ ಪರಿಸರವನ್ನು ಸ್ವಚ್ಚ ಮಾಡಿ ಅಲ್ಲಿ ದೇವಾಲಯಕ್ಕೆ ಪೂಜೆ ಕೂಡ ಮಾಡಲಾಗಿದೆ. ಆ ಶಿವಾಲಯದಲ್ಲಿ ಒಂದು ಶಿವಲಿಂಗ ಮತ್ತು ಒಂದು ಜೋಡಿ ಪಾದದ ಗುರುತುಗಳು ಕೂಡ ಕಂಡುಬಂದಿದೆ.
ಸ್ಥಳೀಯರ ಪ್ರಕಾರ ದೇವಾಲಯವನ್ನು ಯಾವುದೋ ಅಪರೂಪದ ಲೋಹದಿಂದ ತಯಾರಿಸಲಾಗಿದ್ದು, ದೇವಾಲಯದ ಒಳಗೆ ಸೋರಿಕೆ ಕೂಡ ಕಂಡು ಬಂದಿದ್ದು, ಅದನ್ನು ಭಕ್ತರು ಸ್ವಚ್ಚಗೊಳಿಸಿದ್ದರು.
ದೇವಾಲಯ ನುಣುಪಾದ ಕರಿಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು, ಅದರ ರಚನೆಯೇ ಅದ್ಭುತವಾಗಿ ಕಾಣುತ್ತಿದೆ. ಭಕ್ತರು ಈ ಪ್ರದೇಶವನ್ನು ಶುದ್ಧೀಕರಿಸಿ, ದೇವಾಲಯವನ್ನು ಅಲಂಕಾರ ಮಾಡುತ್ತಿದ್ದಂತೆ ಜನರ ಘೋಷವಾಕ್ಯ, ಭಜನೆ, ಸಡಗರದಿಂದ ಇಡೀ ಪ್ರದೇಶ ದೈವಿಕವಾಗಿ ಮಾರ್ಪಟ್ಟಿತ್ತು.
ಆದಿತ್ಯವಾರ ಆ ಪ್ರದೇಶದಲ್ಲಿ ಒಂದು ರೀತಿಯಲ್ಲಿ ಭೂಕಂಪನದಂತಹ ವಾತಾವರಣ ನಿರ್ಮಾಣವಾಗಿತ್ತು. ಭೂಮಿ ಯಾಕೆ ಆ ಪ್ರದೇಶದಲ್ಲಿ ಕಂಪಿಸುತ್ತಿದೆ ಎಂದು ಜನರು ಅಲ್ಲಿ ಹತ್ತಿರ ಸಮೀಪಿಸಿ ನೋಡುತ್ತಿದ್ದರು. ಯಾವುದೋ ವಸ್ತು ಭೂಮಿಯ ಅಡಿಯಿಂದ ಅಲ್ಲಾಡಿದಂತೆ ಭಾಸವಾಗಿತ್ತು. ಆದ್ದರಿಂದ ತಕ್ಷಣ ಈ ಬಗ್ಗೆ ಏನಾದರೂ ಮಾಡಬೇಕೆಂದು ಎಂದು ನಿರ್ಧರಿಸಿದ ಜನ ಕಂಪಿಸಿದ ಜಾಗದಲ್ಲಿ ಅಗೆಯಲು ಶುರು ಮಾಡಿದರು. ನಂತರ ನಡೆದದ್ದು ಇತಿಹಾಸ.!