ನಿಮ್ಮ ಮನೆಯ ಆಸುಪಾಸು ವಲಸೆ ಕಾರ್ಮಿಕರಿದ್ದರೆ ಮುಂಜಾಗ್ರತೆ ವಹಿಸಿ!

ಕರ್ನಾಟಕದಲ್ಲಿ ಬಿಹಾರ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಒಡಿಶಾ ಸಹಿತ ಉತ್ತರ ಭಾರತದ ಅನೇಕ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ಕಾರ್ಮಿಕರ ಸಂಖ್ಯೆ ದೊಡ್ಡದಿದೆ. ಅವರಲ್ಲಿ ಹೆಚ್ಚಿನವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಇಲ್ಲಿ ಒಂದೆರಡು ವರ್ಷ ನೆಲೆಸಿ ನಂತರ ಊರಿಗೆ ಮರಳುತ್ತಾರೆ. ನಂತರ ಮತ್ತೆ ಇಲ್ಲಿ ಕೆಲಸ ಇದೆ ಎಂದು ಗುತ್ತಿಗೆದಾರರು ಕರೆದರೆ ಮತ್ತೆ ಬರುತ್ತಾರೆ. ವಲಸೆ ಕಾರ್ಮಿಕರಲ್ಲಿ ಬಹುತೇಕರು ಪತ್ನಿಯನ್ನು ತಮ್ಮ ಊರಿನಲ್ಲಿಯೇ ಬಿಟ್ಟು ವರ್ಷಗಟ್ಟಲೆ ದೂರ ಇರುತ್ತಾರೆ. ಇಲ್ಲಿ ಬಂದು ಸ್ಲಂಗಳಲ್ಲಿ ವಾಸ ಮಾಡುತ್ತಾ, ಕೆಲವರು ನಿರ್ಮಾಣ ಹಂತದ ಜಾಗದ ಆಸುಪಾಸಿನಲ್ಲಿ ವಾಸಿಸುತ್ತಾ ಇರುತ್ತಾರೆ. ಇವರಲ್ಲಿ ಕೆಲವರಿಗೆ ಹಲವು ಕಾಲ ಪತ್ನಿ ಹತ್ತಿರ ಇರದೇ ತಮ್ಮ ಕಾಮಾಂಛೆಯನ್ನು ತಣಿಸಲು ಏನಾದರೂ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ಇಂತವರ ಕೈಯಲ್ಲಿ ಪುಟ್ಟ ಮಕ್ಕಳು ಸಿಕ್ಕಿದರೆ ಆಗ ಅವರ ಮೇಲೆ ಎರಗುವ ಇವರಿಂದ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಯೇ ಜೀವಂತ ಸಾಕ್ಷಿ.
ಇನ್ನು ಕೆಲವರು ಶಾಲೆ, ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳನ್ನು, ಉದ್ಯೋಗಕ್ಕಾಗಿ ಹೋಗಿ ರಾತ್ರಿ ಹಿಂದಿರುಗುವ ಮಹಿಳೆಯರ ಮೇಲೆ ಕಣ್ಣಾಕುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಡ್ರಗ್ಸ್ ಅಮಲಿನಲ್ಲಿರುವ ಇವರಿಗೆ ಕ್ರೈಂ ಎನ್ನುವುದು ದೊಡ್ಡ ವಿಷಯವೇ ಅಲ್ಲ. ಪೊಲೀಸರ ಬಗ್ಗೆ ಹೆದರಿಕೆ ಇಲ್ಲದಿರುವುದು, ಗಾಂಜಾ ನಶೆಯಲ್ಲಿರುವುದು, ಲೈಂಗಿಕ ತೃಪ್ತಿಗಾಗಿ ಹಾತೊರೆಯುತ್ತಾ ಅಪರಾಧದಲ್ಲಿ ಸಲೀಸಾಗಿ ತೊಡಗುವ ಇವರುಗಳ ಬಗ್ಗೆ ಮುಂಜಾಗ್ರತೆಯನ್ನು ವಹಿಸಬೇಕಾಗಿರುವ ಅಗತ್ಯ ಸಭ್ಯ ಸಮಾಜಕ್ಕೆ ಇದೆ.
ಕೇಂದ್ರ ಸರಕಾರದ ಕಾರ್ಮಿಕರಿಗಾಗಿಯೇ ಇರುವ ಪೋರ್ಟಲ್ ನಲ್ಲಿ ನೋಂದಾವಣೆಯಾಗಿರುವ ಪ್ರಕಾರ ಕರ್ನಾಟಕದಲ್ಲಿ ವಲಸೆ ಮತ್ತು ಅಸಂಘಟಿತ ವಲಯದ ಗಿಗ್ ಕಾರ್ಮಿಕರು ಸೇರಿದರೆ 1,07,4,479 ಕಾರ್ಮಿಕರು ಕರ್ನಾಟಕದಲ್ಲಿದ್ದಾರೆ. ಇನ್ನು ಇದನ್ನು ಬಿಟ್ಟು ನೋಂದಾವಣೆ ಮಾಡಿಕೊಳ್ಳದ ಅದೆಷ್ಟೋ ವಲಸೆ ಕಾರ್ಮಿಕರು ನಮ್ಮ ರಾಜ್ಯದಲ್ಲಿದ್ದಾರೆ.
ವಲಸೆ ಹೋಗುವ ಮುನ್ನ ಅಥವಾ ರಾಜ್ಯ ತೊರೆಯುವ ಮುನ್ನ ಹೋಗುವ ರಾಜ್ಯ ಮತ್ತು ತಮ್ಮ ರಾಜ್ಯದಲ್ಲಿ ಕಡ್ಡಾಯವಾಗಿ ಹೆಸರು ನೊಂದಾಯಿಸಿಕೊಳ್ಳಬೇಕು. ಆದರೆ ಈ ನಿಯಮ ಪಾಲನೆಯಾಗುತ್ತಿಲ್ಲ. ಗುತ್ತಿಗೆದಾರರು ಕಾನೂನುಬಾಹಿರವಾಗಿ ವಲಸೆ ಕಾರ್ಮಿಕರನ್ನು ಕರೆ ತಂದು ತಮ್ಮ ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆ, ಪ್ಲಾಂಟೇಶನ್, ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ವಲಸೆ ಕಾರ್ಮಿಕರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಪ್ರತ್ಯೇಕ ಮಾಹಿತಿ ಇಲ್ಲಿಯವರೆಗೆ ಇಲ್ಲ. ಆದರೆ ಕೊಲೆ, ಹಲ್ಲೆ, ದರೋಡೆ, ಅತ್ಯಾಚಾರದಂತಹ ಪ್ರಕರಣಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಾಗಿ ಭಾಗಿಯಾಗಿರುವುದು ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 696 ಜನ ಕಾರ್ಮಿಕರು ನೊಂದಾವಣಿ ಮಾಡಿದ್ದರೆ, ಉಡುಪಿಯಲ್ಲಿ 1626 ಜನ ನೊಂದಾವಣೆ ಮಾಡಿದ್ದಾರೆ. ಇನ್ನು ನೊಂದಾವಣೆ ಮಾಡದ ವಲಸೆ ಕಾರ್ಮಿಕರ ಲೆಕ್ಕ ಇಲ್ಲ.
Leave A Reply