2.1 ಲಕ್ಷ ಬೇನಾಮಿ ಕಂಪನಿಗಳು ಪತ್ತೆ, ಬ್ಯಾಂಕ್ ಖಾತೆ ಮುಟ್ಟುಗೋಲು
Posted On September 6, 2017
0
ದೇಶದೊಳಗಿನ ಕಾಳಧನಿಕರ ವಿರುದ್ಧ ಮತ್ತೆ ಮೋದಿ ಮಾಸ್ಟರ್ ಸ್ಟ್ರೋಕ್

ದೆಹಲಿ: ನೋಟು ಅಮಾನ್ಯ ನಂತರ ಕಾಳಧನಿಕರ ಜಾಡು ಕೈಬಿಟ್ಟು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಚುನಾವಣೆ ತಯಾರಿಯಲ್ಲಿ ಮುಳುಗಿದೆ ಎಂದು ಬೊಬ್ಬೆ ಇಡುವ ವಿರೋಧ ಪಕ್ಷಗಳಿಗೆ ಮಂಗಳವಾರ ಮೋದಿ ಹೊಸ ಶಾಕ್ ಕೊಟ್ಟಿದ್ದಾರೆ. ಸ್ವಾಮಿ ನಾವು ಸುಮ್ಮನಿಲ್ಲ ದೇಶಾದ್ಯಂತ ಸುಮಾರು 2.1 ಲಕ್ಷ ಬೇನಾಮಿ ಕಂಪೆನಿಗಳ ಬ್ಯಾಂಕ್‍ಗಳನ್ನು ಶೋಧಿಸಿ ವಹಿವಾಟು ಸ್ಥಗಿತಗೊಳಿಸಿದ್ದೇವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದರಿಂದ ತಮ್ಮ ತೆರಿಗೆ ವಂಚನೆ ಎಲ್ಲಿ ಬಟಾಬಯಲಾಗುವುದೋ ಎಂದು ಹೆದರಿ ವಿರೋಧಿ ಪಕ್ಷಗಳು ಒಂದೇ ದಿನದಲ್ಲಿ ತೆಪ್ಪಗಾಗಿವೆ.
” ನಿಮ್ಮ ಹಸ್ತಾಕ್ಷರವು ದೇಶದ ಪ್ರಧಾನಿ ಹಸ್ತಾಕ್ಷರಕ್ಕಿಂತ ಪ್ರಭಾವಿ. ಹಾಗಾಗಿಯೇ ನೀವು ಸಹಿಹಾಕಿರುವ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ನಮಗೆ ಅತ್ಯಂತ ವಿಶ್ವಾಸವಿದೆ “.
– ಪ್ರಧಾನಿ ಮೋದಿ ( ಜು.1ಕ್ಕೆ ಚಾರ್ಟರ್ಡ್ ಅಕೌಂಟೆಂಟ್‍ಗಳ ಸಮಾವೇಶದಲ್ಲಿ ಕಾಳಧನಿಕರಿಗೆ ಸಹಾಯ ಬೇಡ ಎಂದು ನೀಡಿದ್ದ ಪರೋಕ್ಷ ಎಚ್ಚರಿಕೆ)
ಕಾಳಧನಿಕರ ಬೇಟೆಯ ಮುಂದಿನ ಯೋಜನೆ ಏನು?
* ತೆರಿಗೆ ವಂಚನೆಗೆಂದೆ ಹುಟ್ಟುಹಾಕಲಾಗುವ ಬೇನಾಮಿ/ಬೋಗಸ್ ಕಂಪನಿಗಳು ಐಟಿ ರಿಟನ್ರ್ಸ್ ಸಲ್ಲಿಸುವುದಿಲ್ಲ. ಒಂದು ವೇಳೆ ಸಲ್ಲಿಸಿದ್ದರೂ ಅದು ಕೃಷ್ಣ ಲೆಕ್ಕವಾಗಿರುತ್ತದೆ.
* ಇಂಥ ಕಂಪನಿಗಳು ಹೊಂದಿರಬಹುದಾದ ಬ್ಯಾಂಕ್ ಖಾತೆಗಳನ್ನು ಪತ್ತೆಮಾಡಲಾಗಿದೆ. ಬಹುಪಾಲು ಖಾಸಗಿ ಬ್ಯಾಂಕ್‍ಗಳೇ ಇಂಥವರಿಗೆ ಅಡಗುತಾಣ.
* 2, 09, 032 ಬೋಗಸ್ ಕಂಪನಿಗಳನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ. ಅವುಗಳ ವಹಿವಾಟು ಸ್ಥಗಿತಗೊಳಿಸಿ, ಖಾತೆಯಲ್ಲಿನ ಹಣವನ್ನು ಮುಟುಗೋಲು ಹಾಕಿಕೊಳ್ಳಲಾಗಿದೆ.
* ಕೇಂದ್ರ ಸರಕಾರ ಕಾರ್ಪೊರೇಟ್ ಸಚಿವಾಲಯದಲ್ಲಿ ನೋಂದಣಿಗೊಂಡು ಕೂಡ ಹಲವು ಕಂಪನಿಗಳು ಬೋಗಸ್ ಆಗಿರುವುದು ತಿಳಿದುಬಂದಿದೆ. ಇಂಥ ಕಂಪನಿಗಳ ಬೆನ್ನುಬಿಡದಂತೆ ಬ್ಯಾಂಕ್‍ಗಳಿಗೆ ಸೂಚಿಸಲಾಗಿದೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









