ಕಾಶ್ಮೀರ ಸಮಸ್ಯೆೆಗೆ ಮಾತುಕತೆಯೇ ಪರಿಹಾರ, ಕೊನೆಗೂ ಬುದ್ಧಿ ಕಲಿತ ಪಾಕಿಸ್ತಾನ
ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಉಪಟಳ ಆರಂಭಿಸಿಯೋ, ಉಗ್ರರನ್ನು ಛೂ ಬಿಟ್ಟು ನರಿ ಬುದ್ಧಿಯನ್ನೋ ಇಲ್ಲವೇ ಯಾವುದೋ ಉದ್ಧಟತನದ ಹೇಳಿಕೆ ನೀಡುತ್ತಿದ್ದ ಪಾಕಿಸ್ತಾನ, ಕಾಶ್ಮೀರದಲ್ಲಿ ಉಗ್ರರ ಬೇಟೆ ಹಿನ್ನೆೆಲೆಯಲ್ಲಿ ಮೆತ್ತಗಾದಂತೆ ಕಂಡು ಬಂದಿದ್ದು, ‘ಸಮಸ್ಯೆೆ ನಿವಾರಣೆಗೆ ಮಾತುಕತೆಯೇ ಸೂಕ್ತ’ ಎಂದಿದೆ.
ಜಮ್ಮು ಕಾಶ್ಮೀರ ವಿವಾದವನ್ನು ರಾಜತಾಂತ್ರಿಕ ಮತ್ತು ರಾಜಕೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪಾಕ್ ಸೇನೆ ವಕ್ತಾರ ಜನರಲ್ ಖಮರ್ ಜಾವೇದ್ ಬಜ್ವಾ ಹೇಳಿದ್ದಾಾರೆ.
ವಾರ್ಷಿಕ ರಕ್ಷಣಾ ದಿನದ ಭಾಷಣದಲ್ಲಿ, ಉಭಯ ದೇಶಗಳ ಜನರು ನೆಮ್ಮದಿಯಿಂದ ಬದುಕಲು ಭಾರತ ಪಾಕಿಸ್ತಾನ ಕಾಯಂ ಶಾಂತಿಸ್ಥಾಪನೆಗೆ ಮುಂದಾಗಬೇಕು. ಭಾರತ ಸಹ ಪಾಕಿಸ್ತಾನದತ್ತ ಬೆರಳು ಮಾಡುವುದು ಬಿಟ್ಟು ರಾಜತಾಂತ್ರಿಕ ನಿಯಮ ಅನುಸರಿಸಿ ವಿವಾದ ಬಗೆಹರಿಸಿಕೊಳ್ಳಲು ಮನಸ್ಸು ಮಾಡಬೇಕು ಎಂದು ಹೇಳಿದ್ದಾರೆ.
ಲಷ್ಕರೆ ತಯ್ಯಬಾ ಮತ್ತು ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನದಲ್ಲೇ ಆಶ್ರಯ ಪಡೆದಿವೆ ಎಂದು ವಿದೇಶಾಂಗ ಸಚಿವ ಖ್ವಾಜಾ ಮುಹಮ್ಮದ್ ಆಸೀಫ್ ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಸೇನಾ ಮುಖ್ಯಸ್ಥರೇ ಮಾತುಕತೆ ಕುರಿತು ಉಲ್ಲೇಖಿಸಿದ್ದು ಪಾಕಿಸ್ತಾನದ ಸಡಿಲ ನಿಲುವಿಗೆ ನಿದರ್ಶನವಾಗಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಸ್ತಿತ್ವಕ್ಕೆೆ ಬಂದಮೇಲೆ ಜಮ್ಮು-ಕಾಶ್ಮೀರದಲ್ಲಿ ಪಾಕ್ ಉಗ್ರರ ಬೆನ್ನೆೆಲುಬು ಮುರಿಯಲಾಗಿರುವುದು ಪಾಕಿಸ್ತಾನದ ಈ ಸಡಿಲ ನಿಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
Leave A Reply