ನೋಟ್ಯಂತರ ವಿಫಲ ಅನ್ನೋರು ಈ ಸುದ್ದಿ ಓದಿ
ಚೆನ್ನೈ: ಒಂದೇ ಸಮನೆ ಬೊಬ್ಬೆೆ. ನೋಟ್ಯಂತರ ವಿಫಲ ಆಯ್ತು, ಕಪ್ಪು ಹಣ ಮೂಲದಲ್ಲೇ ಉಳಿಯಿತು, ಮೋದಿ ಸುಮ್ಮನೇ ಜನರನ್ನು ಬ್ಯಾಾಂಕ್ ಎದುರು ಕ್ಯೂ ನಿಲ್ಲುವಂತೆ ಮಾಡಿದರು, ಪ್ರಚಾರಕ್ಕಾಗಿ ಕೇಂದ್ರ ಸರಕಾರ ಗಿಮಿಕ್ ಮಾಡಿತು…
ನ.8, 2016ರ ಬಳಿಕ ಇಂಥಾದ್ದೇ ಮಾತುಗಳು…
ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ನೋಟ್ಯಂತರ ಪರಿಣಾಮ ಗೊತ್ತಾಾಗುತ್ತಿದೆ. ಈಗ ಇಂಥದ್ದೇ ಪರಿಣಾಮದ ರೂಪದಲ್ಲಿತಮಿಳುನಾಡಿನಲ್ಲಿ ನೋಟ್ಯಂತರದ ವೇಳೆ ಒಂದೇ ಬಾರಿಗೆ, ಬ್ಯಾಾಂಕ್‌ಗೆ ಬರೋಬ್ಬರಿ 246 ಕೋಟಿ ರುಪಾಯಿ ಠೇವಣಿಯಾಗಿರುವುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆೆಹಚ್ಚಿದ್ದಾಾರೆ.
ರಾಜ್ಯದಲ್ಲಿ ನೋಟ್ಯಂತರದ ವೇಳೆ ಬ್ಯಾಾಂಕ್‌ಗಳಿಗೆ ಜಮೆಯಾದ ಲಕ್ಷಾಾಂತರ ಖಾತೆ ಪರಿಶೀಲನೆ ವೇಳೆ ಈ ಅಂಶ ಬೆಳಕಿಗೆ ಬಂದಿದ್ದು, ಇಷ್ಟೂ ಹಣ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಆದಾಗ್ಯೂ, ಹಣ ವರ್ಗಾವಣೆ ಕುರಿತು ಸಂಶಯದ ಹಿನ್ನೆೆಲೆಯಲ್ಲಿ 27,739 ಖಾತೆದಾರರಿಗೆ ವಿವರಣೆ ಕೇಳಿ ಐಟಿ ನೋಟಿಸ್ ನೀಡಿದೆ. ಅಲ್ಲದೆ ನೋಟ್ಯಂತರದಿಂದ ಲಕ್ಷಾಾಂತರ ತೆರಿಗೆದಾರರು ಸೃಷ್ಟಿಯಾಗಿದ್ದಾರೆ, ಲಕ್ಷಾಾಂತರ ನಕಲಿ ಕಂಪನಿಗಳ ನೋಂದಣಿ ರದ್ದಾಗಿವೆ. ಹೇಳಿ ನೋಟ್ಯಂತರ ವಿಫಲವಾದರೆ ಇಷ್ಟೆೆಲ್ಲ ಸಾಧ್ಯವಾಗುತ್ತಿತ್ತಾ? ಇನ್ನಾದರೂ ಬೊಬ್ಬೇ ಹಾಕೋದು ಬಿಡಿ.
ಯಾರು ಆ ರಾಜಕಾರಣಿ?
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಎಲ್ಲ ಹಣ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಈ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.
Leave A Reply