ಕಟೀಲ್ ಬಂಧನ: ಈ ಕಾಂಗ್ರೆೆಸ್ಸಿಗರಿಗೆ ನೈತಿಕತೆ ಇದೆಯೇ?
ರಾಜ್ಯದಲ್ಲಿ ಕಾಂಗ್ರೆೆಸ್ ಆಡಳಿತಕ್ಕೆೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಾದಿಯಾಗಿ ಯಾರಿಗಾದರೂ ನೈತಿಕತೆ ಇದೆ ಎನಿಸುತ್ತದೆಯೇ?
ಹೌದು, ಹೀಗೊಂದು ಪ್ರಶ್ನೆೆ ಕೇಳಲೇಬೇಕಾಗಿದೆ.
ಮೊದಮೊದಲು ತಮ್ಮದು ಜಾತ್ಯತೀತ ಸರಕಾರ ಎಂದ ಸಿದ್ದರಾಮಯ್ಯ ಅವರು ಶಾದಿಭಾಗ್ಯ ತಂದು ಒಡಕು ಮೂಡಿಸಲು ಯತ್ನಿಸಿದರು. ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲೂ ಜಾತಿ ಹುಡುಕಿದರು. ರೈತರು ಬರದಿಂದ ಬಳಲುತ್ತಿದ್ದರೆ, ಅವರ ಸಾಲ ಮನ್ನಾಾ ಮಾಡದೇ ಕೇಂದ್ರದತ್ತ ಬೆರಳು ತೋರಿಸಿದರು. ಹೀಗೆ ಹೇಳುತ್ತ ಹೋದರೆ ನೂರು ಅಂಶಗಳು ಸಿಗುತ್ತವೆ.
ಇಷ್ಟೆೆಲ್ಲ ಆದಮೇಲೂ, ಸುಮ್ಮನಿರದ ಕಾಂಗ್ರೆೆಸ್ ಈಗ ಬಿಜೆಪಿಯವರ ಮಂಗಳೂರು ರ್ಯಾಲಿಗೆ ವಿರೋಧ ವ್ಯಕ್ತಪಡಿಸಿದೆ. ಇದು ಪ್ರಜಾಪ್ರಭುತ್ವ, ಇಲ್ಲಿ ಹೋರಾಟ, ರ್ಯಾಾಲಿ ಅಂಗಗಳು ಎಂಬುದನ್ನು ಮರೆತ ಸರಕಾರ, ಬಳ್ಳಾಾರಿವರೆಗೆ ಪಾದಯಾತ್ರೆೆ ಮಾಡಿದ್ದ ಸಿದ್ದರಾಮಯ್ಯ ಪೊಲೀಸರನ್ನು ಬಿಟ್ಟು ಹೋರಾಟ ಹತ್ತಿಕ್ಕಲು ಮುಂದಾದರು.
ಇವರದ್ದು ಎಂಥಾ ಇಬ್ಬಂದಿತನ, ಎಂಥಾ ನೈತಿಕ ಅಧಃಪತನ ನೋಡಿ…
ಇದೇ ಕಾಂಗ್ರೆೆಸ್ ಸರಕಾರದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಅವರನ್ನು ಬಂಧಿಸಿದಾಗ ಮಂಗಳೂರಿನಲ್ಲಿ ಕಾಂಗ್ರೆೆಸ್ ಕಾರ್ಪೋರೇಟರ್ ಎ.ಸಿ. ವಿನಯ್ ರಾಜ್ ಐಟಿ ಕಚೇರಿ ಮೇಲೆ ಕಲ್ಲೆೆಸಿದಿದ್ದಕ್ಕೆೆ ಪ್ರಕರಣ ದಾಖಲಾಯಿತು. ಆದರೂ ಅವರನ್ನು ಬಂಧಿಸಲಿಲ್ಲ.
ಇತ್ತ ಬಿಜೆಪಿ ವತಿಯಿಂದ ಮಂಗಳೂರು ರ್ಯಾಲಿ ಏರ್ಪಡಿಸಿ, ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು ಎಂದು ಸಾರಲು ಹೊರಟ ಸಂಸದ ನಳಿನ್ ಕುಮಾರ್ ಕಟೀಲ್‌ರನ್ನು ಬಂಧಿಸಿ ಉದ್ಧಟತನ ಮೆರೆದಿದೆ.
ಇದು ಹೀಗೆಯೇ ಮುಂದುವರಿದರೆ ಕಾಂಗ್ರೆೆಸ್ ಮುಕ್ತ ಕರ್ನಾಟಕವಾಗುವುದರಲ್ಲಿ ಸಂಶಯವೇ ಇಲ್ಲ. ಹಾಗನಿಸುತ್ತದೆ.
Leave A Reply