ಭೈರಪ್ಪ ಅಕ್ರಮಕ್ಕೆ ಬೆಂಗಾವಲಾಗಿ ನಿಂತ 3ನೇ ಅವಧಿಯ ಸಿಂಡಿಕೇಟ್ ಸದಸ್ಯ!
Mangaluru;
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಬ್ಬ ವ್ಯಕ್ತಿ ಎಷ್ಟು ಸಲ ಸಿಂಡಿಕೇಟ್ ಸದಸ್ಯನಾಗಬಹುದು? ಈ ಪ್ರಶ್ನೆಯನ್ನು ನೀವು ವಿವಿಯ ಯಾರಿಗಾದರೂ ಕೇಳಿದರೆ ಒಂದು ಸಲ ಎನ್ನುವ ಉತ್ತರ ಬರುತ್ತದೆ. ಒಬ್ಬ ವ್ಯಕ್ತಿ ಎರಡು ಸಲ ವಿವಿ ಸಿಂಡಿಕೇಟ್ ಸದಸ್ಯನಾದರೆ ಅದು ಯಾರದ್ದಾದರೂ ಕೃಪಾಕಟಾಕ್ಷ ಇದೆ ಎಂದು ಅಂದುಕೊಳ್ಳಬಹುದು. ಅದೇ ಒಬ್ಬ ವ್ಯಕ್ತಿ ಮೂರನೇ ಸಲವೂ ವಿವಿ ಸಿಂಡಿಕೇಟ್ ಸದಸ್ಯನಾದರೆ ದಾಲ್ ಮೆ ಕುಚ್ ಕಾಲಾ ಹೇ ಅನ್ನುವುದಕ್ಕಿಂತ ದಾಲ್ ಸಬ್ ಕಾಲಾ ಎಂದೇ ಹೇಳಬೇಕಾಗುತ್ತದೆ. ಹಾಗೆ ವಿವಿಯಲ್ಲಿ ಮೂರನೇಯ ಅವಧಿಗೆ ಸಿಂಡಿಕೇಟ್ ಸದಸ್ಯನಾಗಿ ವ್ಯಕ್ತಿಯೊಬ್ಬರು ನೇಮಕಗೊಂಡ ಕಾರಣ ಬೇರೆ ಅರ್ಹರಿಗೆ ಅವಕಾಶ ಹರಿದಂತೆ ಆಗಿರುವುದರಲ್ಲಿ ಯಾವ ಸಂಶಯವೂ ಇಲ್ಲ.
ಅಷ್ಟಕ್ಕೂ ವಿವಿಯಲ್ಲಿ ಒಬ್ಬನೇ ವ್ಯಕ್ತಿಯನ್ನು ಮೂರನೇ ಬಾರಿ ಸಿಂಡಿಕೇಟ್ ಸದಸ್ಯ ಮಾಡುವುದಕ್ಕೆ ಕಾರಣ ಆ ವ್ಯಕ್ತಿ ಮತ್ತು ವಿವಿ ಕುಲಪತಿ ಭೈರಪ್ಪನವರಿಗೆ ಇರುವ ಅವಿನಾಭಾವ ಸಂಬಂಧ. ಭೈರಪ್ಪನವರು ತಮ್ಮ ಅಷ್ಟೂ ಶಿಫಾರಸ್ಸನ್ನು ಬಳಸಿ ಸಂಘ ಪರಿವಾರದ ವ್ಯಕ್ತಿಯೊಬ್ಬರನ್ನು ಮೂರನೇ ಅವಧಿಗೆ ಸಿಂಡಿಕೇಟ್ ಮೆಂಬರ್ ಮಾಡಿರುವ ಕ್ರಮದ ಹಿಂದೆ ಅವರಿಗೆ ಏನಾದರೂ ಲಾಭ ಇದೆಯಾ? ಖಂಡಿತ ಇದೆ. ಪಕ್ಕಾ ಕಾಂಗ್ರೆಸ್ಸಿಗರಾಗಿರುವ ಭೈರಪ್ಪನವರು ತಮ್ಮ ಎಲ್ಲಾ ಗೋಲ್ ಮಾಲ್ ಗಳನ್ನು ಅಖಿಲ ಭಾರತೀಯ Vidhyarthi ಪರಿಷತ್ ನವರು ವಿರೋಧಿಸಿ ಪ್ರತಿಭಟನೆಗೆ ಇಳಿಯುವಾಗ ಎದುರಿಸಲು ಗುರಾಣಿಯಂತೆ ಬಳಸಲು ಒಬ್ಬ ವ್ಯಕ್ತಿಯನ್ನು ಹುಡುಕುತ್ತಿದ್ದರು. ಅದಕ್ಕೆ ಅವರಿಗೆ ಸಂಘದ್ದೇ ಮನುಷ್ಯ ಬೇಕಾಗಿತ್ತು. ಅದು ಅವರಿಗೆ ಸಿಕ್ಕಿತ್ತು. ಆದ್ದರಿಂದ ನಿಯಮ ಮುಗಿದರೂ ಮೂರನೇ ಅವಧಿಗೆ ಉಳಿಸಿಕೊಳ್ಳಲಾಗಿದೆ. ಇದರಿಂದ ಕಿರಿಕಿರಿ ಅನುಭವಿಸುತ್ತಿರುವ ಎಬಿವಿಪಿ ಆ ವ್ಯಕ್ತಿಯನ್ನು ಒಮ್ಮೆ ಆ ಪದದಿಂದ ಇಳಿಸಿ ಎಂದು ಅನೇಕ ಕಡೆ ಪರಿವಾರದ ಒಳಗೆ ಆಕ್ರೋಶ ವ್ಯಕ್ತಪಡಿಸಿದೆ.
ಮನಸ್ಸು ಮಾಡಿದರೆ ಕರ್ನಾಟಕದದ ಘನವೆತ್ತ ರಾಜ್ಯಪಾಲರು ಮಂಗಳೂರು ವಿವಿಯಲ್ಲಿ ನಡೆಯುತ್ತಿರುವ ಅಷ್ಟೂ ಗೋಲ್ ಮಾಲ್ ಗಳನ್ನು ತನಿಖೆಗೆ ಆದೇಶಿಸಬಹುದು. ಆದರೆ ಅವರಿಂದ ಏನೂ ತೊಂದರೆಯಾಗದಂತೆ ಭೈರಪ್ಪನವರು ಒಬ್ಬ ವ್ಯಕ್ತಿಯನ್ನು ಸೇಫ್ಟಿಗೆ ಇಟ್ಟುಕೊಂಡಿರುವುದರಿಂದ ಅದು ಆಗುತ್ತಿಲ್ಲ. ಭೈರಪ್ಪನವರಿಗೆ ಗೊತ್ತಿದೆ, ಒಂದು ವೇಳೆ ತಾವು ಮಾಡುತ್ತಿರುವ ಕಾರ್ಯಗಳನ್ನು ಯಾರಾದರೂ ರಾಜ್ಯಪಾಲರ ಗಮನಕ್ಕೆ ತಂದರೆ ಅದರಿಂದ ಅವರು ತನಿಖೆಗೆ ಆದೇಶ ಕೊಟ್ಟರೆ ತಾವು ಗಳಿಸಿರುವ ವರ್ಷಸ್ಸು ಉಳಿಯುವುದು ಕಷ್ಟ. ಆದ್ದರಿಂದ ಈಗ ಉಳಿದಿರುವ ಒಂದು ವರ್ಷದ ಅವಧಿಯನ್ನು ಮುಗಿಸಿ ನಂತರ ಆ ವ್ಯಕ್ತಿಯನ್ನು ಕೈಬಿಡುವ ಎಂದು ನಿರ್ಧರಿಸಿದಂತೆ ಕಾಣುತ್ತದೆ.
ಆದರೆ ಇಂತಹ ವಿಷಯದಲ್ಲಿ ಹುಶಾಗಿರುವ ಆ ಮನುಷ್ಯ ಕೋಟ್ಯಾಂತರ ರೂಪಾಯಿ ವ್ಯವಹಾರವಿರುವ Purchase ಕಮಿಟಿಗೆ ತಮ್ಮನ್ನು ನೇಮಿಸುವಂತೆ ಭೈರಪ್ಪನವರನ್ನು ಕೋರಿದ್ದಾರೆ. Purchase ಕಮಿಟಿ ಎಂದರೆ ಒಂದಕ್ಕೆ ನಾಲ್ಕು ಪಟ್ಟು ಲೂಟಿ ಮಾಡುವ ಹೆದ್ದಾರಿ. Personatage ಹಂಚಿಕೊಂಡು ವಸ್ತುಗಳನ್ನು ಖರೀದಿಸಲು ಅದಕ್ಕಿಂತ ಪ್ರಸಕ್ತ ವೇದಿಕೆ ಇಲ್ಲ.
ಆದ್ದರಿಂದ ವಿವಿಯ ಬಗ್ಗೆ ನೈಜ ಕಾಳಜಿ ಇರುವವರು ಹೇಳುವ ಪ್ರಕಾರ ಆ Personatage ಕಮಿಟಿಯ ಖರೀದಿಯ ಬಗ್ಗೆ ತನಿಖೆ ಆಗಬೇಕು. ಒಂದು ವೇಳೆ ಏನೂ ಅವ್ಯವಹಾರ ಇಲ್ಲದಿದ್ದರೆ ಯಾರೂ ಕೂಡ ಹೆದರುವ ಅಗತ್ಯ ಇಲ್ಲ.
ಇನ್ನೊಂದು ತನಿಖೆ ಆಗಬೇಕಾಗಿರುವುದು ಪರೀಕ್ಷಾ ವಿಭಾಗದಲ್ಲಿ. ಅಲ್ಲಿ ಆಗಿರುವ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ಸಿಂಡಿಕೇಟ್ ಸದಸ್ಯರೊಬ್ಬರು ಬೆಂಬಲವಾಗಿ ನಿಂತಿದ್ದಾರೆ ಎನ್ನುವುದು ಸುದ್ದಿ. ಯಾಕೆಂದರೆ ಆ ಸಿಂಡಿಕೇಟ್ ಸದಸ್ಯರ ಪದವಿ ಅಂಕಪಟ್ಟಿ ಸಮಸ್ಯೆಯನ್ನು ಪರೀಕ್ಷಾಂಗ ಕುಲಸಚಿವರು ಸರಿಮಾಡಿಕೊಟ್ಟ ನಂತರ ಪರೀಕ್ಷಾ ವಿಭಾಗದ ಯಾವುದೇ ಗುಟ್ಟು ಹೊರಗೆ ಬರದಂತೆ ಅವರು ನೋಡಿಕೊಂಡು ಬರುತ್ತಿದ್ದಾರೆ. ಇನ್ನೂ ಕಳೆದ ನವೆಂಬರ್ 8 ರಂದು ನೋಟ್ ಬ್ಯಾನ್ ಆಗುವಾಗ ಭೈರಪ್ಪನವರ ಕೋಟ್ಯಾಂತರ ರೂಪಾಯಿ ಹಣವನ್ನು ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕಿನ ಮೂಲಕ ವೈಟ್ ಮಾಡಲಾಗಿದೆ ಎಂದು ಕೂಡ ಗೊತ್ತಾಗಿದೆ. ಇದನ್ನು ಕೂಡ ತನಿಖೆ ಮಾಡಬೇಕು. ವಿವಿ ಸಿಂಡಿಕೇಟ್ ಸದಸ್ಯರಲ್ಲಿ ಯಾರಿಗೆ ಸಹಕಾರ ಬ್ಯಾಂಕುಗಳೊಂದಿಗೆ ಚೆನ್ನಾಗಿದೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಹೀಗೆ ಹಲವು ವಿಷಯಗಳಿವೆ. ರಾಜ್ಯಪಾಲರು ಯಾವಾಗ ಮನಸ್ಸು ಮಾಡಿ ಇದನ್ನೆಲ್ಲ ತನಿಖೆ ಮಾಡುತ್ತಾರೆ ಎಂದು ವಿವಿ ಕಾಯುತ್ತಿದೆ. ಮುಂದಿನ ದಿನಗಳಲ್ಲಿ ಆ ಸಿಂಡಿಕೇಟ್ ಸದಸ್ಯರ ಇನ್ನಷ್ಟು ವಿವರಗಳನ್ನು ಹೇಳುತ್ತೇವೆ.
Leave A Reply