ಪಾಕಿಸ್ತಾನ ಬೆಂಬಲಿಸುವ ಭರದಲ್ಲಿ ಢಾಳಾದ ಚೀನಾ
ಬೀಜಿಂಗ್: ಪಾಕಿಸ್ತಾನಕ್ಕೆ ಯಾರೇ ಟಾಂಗ್ ನೀಡಿದರೂ ಚೀನಾ ಕರಳು ಚುರುಕ್ ಎನ್ನುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಟಾಂಗ್ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು, ಸುಷ್ಮಾ ಹೇಳಿಕೆ ಸೊಕ್ಕಿನಿಂದ ಕೂಡಿದೆ ಎಂದಿದೆ.
ಇನ್ನು ಭಯೋತ್ಪಾದನೆ ವಿರುದ್ಧ ಚೀನಾ ಹೋರಾಡುತ್ತದೆ ಹಾಗೂ ತಾವು ಪಾಕಿಸ್ತಾನದ ಪರ ಇಲ್ಲ ಎಂಬುದನ್ನು ತೋರಿಸಲು ಹೊರಟ ಚೀನಾ ಮಾಧ್ಯಮಗಳು ವಾಸ್ತವದಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ಎಂದು ವರದಿ ಮಾಡುವ ಮೂಲಕ ತನ್ನ ಮುಖವಾಡ ಕಳಚಿಕೊಂಡಿದೆ.
ಪಾಕಿಸ್ತಾನದ ಸಾರ್ವಕಾಲಿಕ ಮಿತ್ರನೇ ಆಗಿರುವ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ, “ಪಾಕಿಸ್ತಾನದಲ್ಲಿ ವಾಸ್ತವವಾಗಿ ಭಯೋತ್ಪಾದನೆ ಅಡಗಿದೆ ನಿಜ. ಆದರೆ ಪಾಕಿಸ್ತಾನ ಅದನ್ನೇ ರಾಷ್ಟ್ರೀಯ ನೀತಿಯನ್ನಾಗಿ ಪಾಲಿಸುತ್ತಿದೆಯೇ? ಭಯೋತ್ಪಾದನೆ ಉತ್ಪಾದಿಸಿದರೆ ಪಾಕಿಸ್ತಾನಕ್ಕೆ ಆಗುವ ಲಾಭವೇನು? ಎಂದು ಸಂಪಾದಕೀಯ ಪುಟದಲ್ಲಿ ಭಾರತವನ್ನು ಪ್ರಶ್ನಿಸಿದೆ.
ಪಾಕಿಸ್ತಾನ ಇತ್ತೀಚೆಗೆ ಮೆಲ್ಲಗೆ ಆರ್ಥಿಕ ಏಳಿಗೆ ಸಾಧಿಸುತ್ತಿದೆ. ವಿದೇಶಗಳ ಜತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿದೆ. ಹೀಗಿರುವಾಗ ಭಾರತ ಮಾತ್ರ ಪಾಕಿಸ್ತಾನದತ್ತ ಯಾವಾಗಲೂ ಬೆರಳು ತೋರಿಸುತ್ತದೆ ಎಂದು ದೂರಿದೆ.
ಆದರೆ ಚೀನಾವೇ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ಎಂದು ಒಪ್ಪಿಕೊಂಡ ಮೇಲೆ, ಭಯೋತ್ಪಾದನೆಯಿಂದ ಪಾಕಿಸ್ತಾನ ಏನು ಗಳಿಸಿದೆ ಎಂಬುದು ಎಲ್ಲರಿಗೂ ಗೊತ್ತು. ಹೌದು, ಪಾಕಿಸ್ತಾನ ಭಾರತದೊಂದಿಗೆ ಸಂಬಂಧ ವೃದ್ಧಿಸುವ ಮಾತನಾಡುತ್ತದೆ ನಿಜ. ಆದರೆ ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಛೂ ಬಿಟ್ಟು ದಾಳಿ ಮಾಡಿಸುತ್ತದಲ್ಲ? ಅದಕ್ಕೇನು ಮಾಡಬೇಕು? ಇದನ್ನು ಚೀನಾ ಪ್ರಶ್ನಿಸುತ್ತದೆಯೇ?
ಚೀನಾಗೆ ಪಾಕಿಸ್ತಾನ ಉತ್ತಮ ಮಾರುಕಟ್ಟೆ, ಕೈಬೊಂಬೆ ಎಂಬ ಕಾರಣಕ್ಕಾಗಿಯೇ ಚೀನಾ ಅದನ್ನು ಬೆಂಬಲಿಸುತ್ತದೆ. ಬೆಂಬಲಿಸಿದಾಗಲೆಲ್ಲ ಹೀಗೆ ಢಾಳಾಗುತ್ತದೆ.
Leave A Reply