ರಾಹುಲ್ ಗಾಂಧಿ ಕ್ರೈಸ್ತ, ಜನಪಥದಲ್ಲಿ ಚರ್ಚ್ ಇದೆ : ಸ್ವಾಮಿ
Posted On September 29, 2017

ನ್ಯೂಡೆಲ್ಲಿ : ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಕಾಂಗ್ರೆಸ್ ಗೆಲ್ಲಿಸಲು ಪಣತೊಟ್ಟು ಇರೋಬರೋ ದೇವಸ್ಥಾನಗಳಿಗೆಲ್ಲ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಕೊಟ್ಟು ಪೋಸ್ ಕೊಡುತ್ತಿದ್ದರೆ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ” ರಾಹುಲ್ ಕ್ರಿಶ್ಚಿಯನ್ ಇರಬೇಕು ಎಂದು ಅನುಮಾನವಿದೆ, ಅವನ ಮನೆಯಲ್ಲಿ ಚರ್ಚ್ ಇದೆ ” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ರಾಹುಲ್ ತಾನು ಹಿಂದು ಎಂದು ಮೊದಲು ಘೋಷಿಸಿಕೊಳ್ಳಬೇಕು. ನಂತರ ಮಾತ್ರ ಆತನ ದೇವಾಲಯ ಭೇಟಿಗಳನ್ನು ಜನ ವಿಶ್ವಾಸದಿಂದ ಕಾಣಬಹುದು. ಇಲ್ಲವಾದರೆ ಇದು ಕೇವಲ ಬೂಟಾಟಿಕೆ ಎಂದು ಸ್ವಾಮಿ ಸವಾಲು ಹಾಕಿದ್ದಾರೆ.
ರಾಹುಲ್ ಕುಟುಂಬ ವಾಸಿಸುವ ದೆಹಲಯ ನಂ, 10, ಜನಪಥ ನಿವಾಸದಲ್ಲಿ ಚರ್ಚ್ ಇದೆ. ವರ್ಷಗಳಿಂದ ಅವರು ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡುತ್ತಿದ್ದಾರೆ. ಮತ್ತೇಕೆ ಹಿಂದು ಓಲೈಕೆಯಲ್ಲಿ ತೊಡಗಿದ್ದಾರೆ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.
- Advertisement -
10capitalchristianchurchcongressdelhigandhigujrathinduindiajanpathmodindanewdelhirahulsoniasubramanianswamytempletemplesupa
Trending Now
ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್!
April 19, 2025
Leave A Reply