ಶಶಿಕಲಾಗೆ 5 ದಿನಗಳ ಪೆರೋಲ್, ತಮಿಳುನಾಡು ರಾಜಕೀಯದಲ್ಲಿ ತಲ್ಲಣ!
>> ರೂ. 1 ಸಾವಿರ ಶ್ಯೂರಿಟಿ, ರಾಜ್ಯಸಭಾ ಸದಸ್ಯ ನವನೀತ್ ಕೃಷ್ಣನ್ ಹೆಗಲಿಗೆ ಶಶಿಕಲಾ ಜವಾಬ್ದಾರಿ
>> ಮನೆ, ಆಸ್ಪತ್ರೆ ಭೇಟಿಗೆ ಮಾತ್ರ ಅವಕಾಶ. ಪಕ್ಷದ ಸಭೆ, ಕಾರ್ಯಕರ್ತರ ಭೇಟಿ ಇಲ್ಲ. ಪತ್ರಿಕಾಗೋಷ್ಠಿ ನಡೆಸುವಂತಿಲ್ಲ.
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಯಾಗಿ ಪರಪ್ಪನ ಅಗ್ರಹಾರzಲ್ಲಿ ಬಂಧಿಯಾಗಿದ್ದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪರಮಾಪ್ತೆ ಮತ್ತು ಎಐಎಡಿಎಂಕೆ ಸೂತ್ರಧಾರಿ ವಿ.ಕೆ.ಶಶಿಕಲಾಗೆ ಜೈಲಧಿಕಾರಿಗಳು 5 ದಿನಗಳ ಪೆರೋಲ್ ನೀಡಿದ್ದಾರೆ. ಶಶಿಕಲಾ ಪತಿ ನಟರಾಜನ್‍ಗೆ ಕರುಳು ಮತ್ತು ಮೂತ್ರಪಿಂಠ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರನ್ನು ನೋಡಲು ಪೆರೋಲ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ 5 ದಿನಗಳಲ್ಲಿ ತಮಿಳುನಾಡು ರಾಜಕೀಯದ ಚಿತ್ರಣವನ್ನೇ ಶಶಿಕಲಾ ಬದಲಿಸಿದರೂ ಆಶ್ಚರ್ಯವಿಲ್ಲ ಎಂದು ವಿಶ್ಲೇಷಿಸಲಾಗಿದೆ. ಅಣ್ಣನ ಮಗ ಟಿಟಿವಿ ದಿನಕರನ್‍ಗೆ ಸೆಡ್ಡು ಹೊಡೆದು ಸೆಲ್ವಂ-ಪಳನಿಸ್ವಾಮಿ ಕೈಜೋಡಿಸಿ ಸರ್ಕಾರ ನಡೆಸುತ್ತಿರುವುದು ಶಶಿಕಲಾ ಅವರಿಗೆ ಭಾರಿ ಅಸಮಾಧಾನ ತರಿಸಿದೆ ಎಂದು ಹೇಳಲಾಗಿದೆ. ತಮ್ಮ ಬೆಂಬಲಿಗರು ಹಾಗೂ ಹಣಧ ಬಲದಿಂದ ಯಾವ ಷಡ್ಯಂತ್ರ ಹೆಣೆದು ರಾಜ್ಯ ಸರ್ಕಾರ ಅಸ್ಥಿರವಾಗಿಸಲು ಶಶಿಕಲಾ ಂಯತ್ನಿಸುತ್ತಾರೋ ಎಂದು ರಾಜಕೀಯ ವಲಯ ಎದುರು ನೋಡುತ್ತಿದೆ. ಮೂಕ ಪ್ರೇಕ್ಷಕರಾಗಿ ತಮಿಳುನಾಡು ಜನತೆ ಎಐಎಡಿಎಂಕೆಯಲ್ಲಿ ಜಯಾ ಸಾವಿನ ಬಳಿಕ ನಡೆಯುತ್ತಿರುವ ಸಿನಿಮೀಯ ಪ್ರಹಸನಗಳಿಗೆ ಸಾಕ್ಷಿಯಾಗುತ್ತಿದ್ದಾರೆ ಅಷ್ಟೇ.
Leave A Reply