ರಕ್ತವನ್ನು ಚೆಲ್ಲದೆ ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ ಹಾಗೇನೇ ಬೆವರನ್ನು ಚೆಲ್ಲದೆ ಬದುಕನ್ನು ಗೆಲ್ಲಲು ಸಾಧ್ಯವಿಲ್ಲ-ಅನಂತ್ ಕುಮಾರ್ ಹೆಗ್ಡೆ
ಮಂಗಳೂರಿನ: ಪುರಭವನದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ “ಪ್ರಧಾನಮಂತ್ರಿ ಮುದ್ರಾ ” MUDRA(Micro Unit Devolopment Refinancial Agency) ಯೋಜನೆಯ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗ್ಡೆ ಮಾತನಾಡಿದ ಅವರು, ಸಾಲ ಮೇಳ ಹೊಸತೇನಲ್ಲ ಮುಂಚೆಯೂ ಬ್ಯಾಂಕುಗಳು ಸಾಲ ನೀಡುತಿತ್ತು ಮುಂದೆಯೂ ನೀಡುತ್ತಾ ಇರುತ್ತವೆ, ಆದರೆ ಈ ಹಿಂದಿನ ಸಾಲ ಮೇಳಕ್ಕೂ ಈಗಿನ ಸಾಲ ಮೇಳಕ್ಕೂ ವ್ಯತಾಸಗಳಿವೆ, ಈಗಿನ ಪ್ರಧಾನ ಮಂತ್ರಿಯ ಮುದ್ರಾಯೋಜನೆಯು ಜನರಲ್ಲಿ ಆರ್ಥಿಕ ಚಟುವಟಿಕೆ, ಉದ್ದಿಮೆ ಶೀಲತೆ ಹೆಚ್ಚಾಗಬೇಕು, ನಾವೇ ಉದ್ಯೋಗ ಸೃಷ್ಟಿ ಮಾಡುವಂತಾಗಬೇಕು ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಸಂಕಲ್ಪದೊಂದಿಗೆ ಮುದ್ರಾ ಯೋಜನೆ ಪ್ರಾರಂಭ ಮಾಡಲಾಗಿದೆ, ರಕ್ತವನ್ನು ಚೆಲ್ಲದೆ ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ ಹಾಗೇನೇ ಬೆವರನ್ನು ಚೆಲ್ಲದೆ ಬದುಕನ್ನು ಗೆಲ್ಲಲು ಸಾಧ್ಯವಿಲ್ಲ, ಕೌಶಲ್ಯ ಇಲ್ಲದೇನೆ ಬದುಕು ಸುಂದರವಾಗಲು ಸಾಧ್ಯವಿಲ್ಲ, ಯಶಸ್ಸಿನ ಹೆಜ್ಜೆಯನ್ನಿಡಬೇಕಾದರೆ ಕೌಶಲ್ಯ ಬೇಕು, ಹಾಗಾಗಿ ಭಾರತ ಸರ್ಕಾರ ಕೌಶಲ್ಯ ಅಭಿವೃದ್ದಿ ತರಬೇತಿಗೆ ಎಲ್ಲ ರೀತಿಯ ಸಹಕಾರ ನೀಡಲು ಬಯಸುತ್ತದೆ. ಈ ದೇಶ ಕಟ್ಟಬೇಕಾದರೆ ಸಣ್ಣ ಸಣ್ಣ ಉದ್ಯಮಗಳೇ ಜಾಸ್ತಿಯಾಗಬೇಕು, ಯಾರಿಗೆ ಶ್ರಮದ ಕಲ್ಪನೆ ಇರೋದಿಲ್ಲ ಅಂತಹ ಬದುಕಿಗೆ ಅರ್ಥ ಇರೋದಿಲ್ಲ, ಶ್ರಮವಿಲ್ಲದೆ ಬದುಕು ಅರ್ಥವಾಗಲು ಸಾಧ್ಯವಿಲ್ಲ, ಒಂದು ಗೆಲುವಿನ ಹಿಂದೆ ಶ್ರಮವಿರುತ್ತದೆ ಈ ನಿಟ್ಟಿನಲ್ಲಿ ಮುದ್ರಾ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಿದ್ದರು ಮತ್ತು ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ್ ಮುಖ್ಯ ಅಭ್ಯಾಗತರಾಗಿದ್ದರು, ಕಾರ್ಯಕ್ರಮದಲ್ಲಿ ಮುದ್ರಾ ಹಾಗು ಸ್ಟಾಂಡ್ ಅಪ್ ಇಂಡಿಯಾ ಯೋಜನೆಗಳ ಫಲಾನುಭವಿಗಳಿಗೆ ಆಯಾಯ ಬ್ಯಾಂಕ್ ಮುಖೇನ ಚೆಕ್ಗಳನ್ನು ವಿತರಿಸಲಾಯಿತು.
Leave A Reply