ಡಿಸೆಂಬರ್‍ನಿಂದ ಎಲ್ಲ ಕಾಲೇಜುಗಳಲ್ಲಿ ಶುಲ್ಕ ಪಾವತಿ ಕ್ಯಾಷ್‍ಲೆಸ್
>> ಕಾಲೇಜು ಕ್ಯಾಂಪಸ್‍ನಲ್ಲಿ ನಗದು ವಹಿವಾಟು ಬಂದ್, ಭೀಮ್ ಅಪ್ಲಿಕೇಷನ್‍ನಿಂದ ಕ್ಯಾಂಟೀನ್ ಬಿಲ್ ಪಾವತಿ
>> ಎಲ್ಲ ಡಿಜಿಟಲ್, ಎಲ್ಲ ಲೆಕ್ಕಪಕ್ಕಾ, ಪಾರದರ್ಶಕತೆಗೆ ಆದ್ಯತೆ
>> ಶಿಕ್ಷಣ ಸಂಸ್ಥೆಗಳಲ್ಲಿ ಕೃಷ್ಣನ ಲೆಕ್ಕಕ್ಕೆ ಬ್ರೇಕ್
>> ವಿದ್ಯೆ ಹೆಸರಲ್ಲಿ ವ್ಯಾಪಾರ ನಡೆಸುತ್ತಿರುವ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಿಗೂ ತಟ್ಟಲಿದೆ ಕ್ಯಾಷ್‍ಲೆಸ್ ಬಿಸಿ
ದೆಹಲಿ : ಕೇಂದ್ರೀಯ ವಿಶ್ವವಿದ್ಯಾಲಯಗಳು , ರಾಜ್ಯ ವಿಶ್ವವಿದ್ಯಾಲಯಗಳು, ಅವುಗಳ ಅಧೀನ ಕಾಲೇಜುಗಳು, ಐಐಟಿ, ಐಐಎಂ, ಬ್ಯುಸಿನೆಸ್ ಸ್ಕೂಲ್‍ಗಳು ಸೇರಿದಂತೆ ದೇಶದ ಶಿಕ್ಷಣ ಸ್ತಂಭಗಳಲ್ಲಿ ಡಿಸೆಂಬರ್‍ನಿಂದ ನಗದು ವಹಿವಾಟಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಲಂಚ, ಡೊನೇಷನ್ ಮತ್ತು ಶಿಕ್ಷಣ ಸಂಸ್ಥೆಗಳ ಕೃಷ್ಣಬ ಲೆಕ್ಕಕ್ಕೆ ಸಾಧ್ಯವಾದಷ್ಟು ಬ್ರೇಕ್ ಹಾಕುವ ಉಪಾಯವನ್ನು ಸರ್ಕಾರ ಮಾಡಿದೆ.
ಈ ಕುರಿತು ಶೀಘ್ರದಲ್ಲಿಯೇ ಮಾನವ ಸಂಪನ್ಮೂಲಕ ಸಚಿವಾಲಯ ವಿಶ್ವವಿದ್ಯಾಲಯ ಧನಸಹಾಯ ಮಂಡಳಿ (ಯುಜಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ ಅಧಿಸೂಚನೆ ನೀಡಲಿದೆ.
ಅಡ್ಮೀಷನ್, ಪರೀಕ್ಷೆ, ಫಲಿತಾಂಶವೂ ಡಿಜಿಟಲ್
ಏಕೀಕೃತ ಮಾಹಿತಿ ತಂತ್ರಜ್ಞಾನ ವೇದಿಕೆ ಅಡಿಯಲ್ಲಿ ದೇಶದ ಎಲ್ಲ ಉನ್ನತ ಶಿಕ್ಷಣ ಕಾಲೇಜುಗಳ ವ್ಯವಸ್ಥೆಗಳನ್ನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕಾಲೇಜಿನಲ್ಲಿ ಒಂದು ಕೋರ್ಸ್‍ಗೆ ಸೇರ್ಪಡೆಯಿಂದ ಆರಂಭಗೊಂಡು, ಪಠ್ಯಕ್ರಮದಂತೆ ತರಗತಿಗಳು, ಲ್ಯಾಬ್‍ಗಳು, ಇಂಟರ್ನಲ್ಸ್, ಸಾಂಸ್ಖøತಿಕ ಚಟುವಟಿಕೆ, ಪರೀಕ್ಷೆಗಳು ಮತ್ತು ಫಲಿತಾಂಶದ ಜತೆಗೆ ಪ್ರಮಾಣ ಪತ್ರ ವಿತರಣೆಗಳನ್ನು ಒಂದು ವೇದಿಕೆ ಅಡಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ದೇಶಾದ್ಯಂತ ಒಟ್ಟಿಗೆ ಸಾಗುವಂತೆ ಮಾಡಲು ಪ್ರಯತ್ನ ಜಾರಿಯಲ್ಲಿದೆ.
Leave A Reply