ಈ ಹಿಂದೂಗಳ ಬಗ್ಗೆ ಯಾರೂ ಮಾತಾಡಲಿಲ್ಲ, ಆದರೂ ಅವರಿಗೆ ಸಿಕ್ಕಿತು ಭಾರತದ ನಾಗರಿಕತ್ವ
ನಮ್ಮ ದೇಶವನ್ನ ಜಾತ್ಯತೀತ, ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ಎಂದು ನಾವು ಎಷ್ಟೇ ಹೇಳಿದರೂ, ಇಬ್ಬಂದಿತನ, ತಾರತಮ್ಯ, ಓಲೈಸುವಿಕೆಯಿಂದ ಮಾತ್ರ ನಾವು ಬಿಡುಗಡೆ ಹೊಂದಿಲ್ಲ ಹಾಗೂ ಹೊಂದುವ ಲಕ್ಷಣಗಳೂ ಇಲ್ಲ.
ಯೋಚಿಸಿ ನೋಡಿ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳುವ ಮುಸ್ಲಿಮರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಕಿ ಸಲಹುವ ಜತೆಗೆ ಅವರಿಗೆ ದೇಶದ ಮತದಾನದ ಹಕ್ಕು, ಐಡಿ, ಆಧಾರ್ ಕಾರ್ಡ್ ನೀಡುತ್ತಾರೆ. ಅವರೇ ಕೋಮುಗಲಭೆಗೆ, ಹಿಂದೂ ವಿರೋಧಿ ಕೃತ್ಯಗಳಲ್ಲಿ ತೊಡಗುತ್ತಾರೆ ಎಂಬುದು ಗೊತ್ತಿದ್ದರೂ ಮಮತಾ ಹೀಗೆ ಮಾಡುತ್ತಾರೆ. ಇನ್ನು ಮ್ಯಾನ್ಮಾರಿನಿಂದ ಗಡಿಪಾರಾಗಿ ಬರುವ ರೋಹಿಂಗ್ಯಾ ಮುಸ್ಲಿಮರು ಮಗ್ಗಲು ಮುಳ್ಳು ಎಂದು ಗೊತ್ತಿದ್ದರೂ ರಾಹುಲ್ ಗಾಂಧಿ, ಅಸಾದುದ್ದೀನ್ ಓವೈಸಿಯಂಥವರು ಅವರನ್ನು ಸಾಕಬೇಕು ಎಂದು ಬೊಬ್ಬೆ ಹಾಕುತ್ತಾರೆ.
ಆದರೆ, ಕಾಶ್ಮೀರದ ನಿರಾಶ್ರಿತ ಹಿಂದೂ ಪಂಡಿತರು, ಹಿಂದೂಗಳ ರಕ್ಷಣೆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇಷ್ಟಾದರೂ ಹಿಂದೂಗಳನ್ನು ರಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಕೊನೆಗೂ ಮಾಡಿತಲ್ಲ ಎಂಬುದೇ ಸಮಾಧಾನಕರ.
ಹೌದು, ಹಲವು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಹಿಂಸೆ ಅನುಭವಿಸಿ ಭಾರತಕ್ಕೆ ಬಂದು ನೆಲೆಸಿದ್ದ 51 ಹಿಂದೂ ಕುಟುಂಬಗಳಿಗೆ ಕೇಂದ್ರ ಸರ್ಕಾರ ದೇಶದ ನಾಗರಿಕತ್ವ ನೀಡಿ ಮಾನವೀಯತೆ ಮೆರೆದಿದೆ.
ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಆಸಕ್ತಿ ವಹಿಸಿ ಹಿಂದೂ ಕುಟುಂಬಗಳಿಗೆ ದೇಶದ ನಾಗರಿಕತ್ವ ನೀಡಿದ್ದು, ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.
ಹಿಂದೂ ಕುಟುಂಬಗಳಿಗೆ ದೇಶದ ನಾಗರಿಕತ್ವ ನೀಡುವ ಮೂಲಕ, ಕೇಂದ್ರ ಸರ್ಕರದ ನೆರವಿನೊಂದಿಗೆ ಛತ್ತೀಸ್ ಗಡ ವಲಸಿಗರಿಗೆ ಭಾರತದ ನಾಗರಿಕತ್ವ ನೀಡಿದ ಮೊದಲ ರಾಜ್ಯ ಎಂಬ ಖ್ಯಾತಿಗೂ ಭಾಜನವಾಗಿದೆ ಎಂದು ಆಹಿರ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಹಿಂಸೆ ತಾಳಲಾರದೆ ಹಲವು ವರ್ಷಗಳ ಹಿಂದೆ ಸುಮಾರು 51 ಹಿಂದೂ ಕುಟುಂಬಗಳು ಛತ್ತೀಸ್ ಗಡದಲ್ಲಿ ನೆಲೆಸಿದ್ದವು. ಇದನ್ನು ಮನಗಂಡ ಸರ್ಕಾರ ನಾಗರಿಕತ್ವ ನೀಡಿದೆ. ಆದಾಗ್ಯೂ, ಈ ಹಿಂದೂ ಕುಟುಂಬಗಳ ರಕ್ಷಣೆ ಬಗ್ಗೆ ಯಾರೂ ಮಾತನಾಡದಿದ್ದರೂ, ಮಾಧ್ಯಮಗಳು ವರದಿ ಮಾಡದಿದ್ದರೂ ಹಿಂದೂಗಳ ರಕ್ಷಣೆಗೆ ಮುಂದಾಗಿದ್ದು ಕೇಂದ್ರ ಸರ್ಕಾರದ ಹೆಗ್ಗಳಿಕೆಯೇ ಸರಿ.
Leave A Reply