ಮಂಜುನಾಥನ ದರ್ಶನದಲ್ಲೂ ಸಿಎಂಗೆ ಮಾದರಿಯಾದ ಮೋದಿ…
ಮೀನು ತಿಂದು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದು ಭಕ್ತರ ನಂಬಿಕೆಗೆ ಗಾಸಿ ಉಂಟು ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿ ಮಾದರಿಯಾಗಿದ್ದಾರೆ. ಈ ಮೂಲಕ ಪ್ರಧಾನಿ ಮತ್ತೊಮ್ಮೆ ಜನರ ಮನಸ್ಸು ಗೆದ್ದಿದ್ದಾರೆ. ‘ಬೇಡರ ಕಣ್ಣಪ್ಪನು ಮಾಂಸಹಾರಿಯಲ್ಲವೇ?’ ಎಂದು ಉಡಾಫೆಯ ಉತ್ತರ ನೀಡಿ, ತಮ್ಮ ಕೊಳಕು ಮನಸ್ಥಿತಿಯನ್ನು ಹೊರಹಾಕಿದ್ದ ಸಿಎಂ ಸಿದ್ದರಾಮಯ್ಯ. ತಪ್ಪನ್ನು ಒಪ್ಪಿಕೊಳ್ಳುವ ಪ್ರಯತ್ನವನ್ನು ಮಾಡದೇ ತಾನ್ನೊಬ್ಬ ಹುಸಿ ಜಾತ್ಯಾತೀತವಾಗಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳದ ಭೇಟಿ ವೇಳೆ ಉಪವಾಸವಿದ್ದು, ಖುರ್ತಾ ಕಳಚಿ, ಶಾಲು ಹೊದ್ದು ಮಂಜುನಾಥನ ಸನ್ನಿದ್ಧಿಯಲ್ಲಿ ಶತರುದ್ರಾಭಿಷೇಕ ಮಾಡಿಸಿದ್ದಾರೆ. ನಮ್ಮದೇ ರಾಜ್ಯದ ಮುಖ್ಯಮಂತ್ರಿ ಕೋಟ್ಯಂತರ ಭಕ್ತರ ನಂಬಿಕೆಗಳ ವಿರುದ್ಧ ನಡೆದುಕೊಂಡಿದಲ್ಲದೇ, ಮಾಂಸ ಸೇವಿಸಿ ದರ್ಶನ ಪಡೆದಿದಲ್ಲದೇ, ದೇವಸ್ಥಾನ ನಿಯಮದಂತೆ ಅಂಗಿ ಕಳಚದೆ ನಿಯಮ ಮೀರಿ ವರ್ತಿಸಿದ್ದಾರೆ. ಆದರೆ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ತಾವೇಷ್ಟು ಅಧಮರು, ನಮ್ಮ ಭಕ್ತಿ ಕಾಟಾಚಾರದ್ದು ಎಂಬುದು ಪದೇ ಪದೆ ತೋರಿಸಿಕೊಡುತ್ತಿದ್ದಾರೆ.
ಹುಸಿ ಭಕ್ತ ಸಿಎಂ ಅವರಿಗೆ ಒಂದಿಷ್ಟು ಪ್ರಶ್ನೆಗಳು
- ಭಕ್ತಿಯಿಂದ ದರ್ಶನಕ್ಕೆ ಹೋದವರಿಗೆ ಮಂಜುನಾಥನ ಸನ್ನಿಧಿಯಲ್ಲಿನ ನಿಯಮ ಪಾಲಿಸಬೇಕೆಂಬ ಅರಿವಿರಲಿಲ್ಲವೇ?
- ಮೀನು ತಿಂದು ಭಕ್ತರ ನಂಬಿಕೆಗೆ ಗಾಸಿ ಮಾಡಿದಲ್ಲದೇ, ಅದನ್ನು ಸಮರ್ಥಿಸಿಕೊಂಡಿದ್ದು ಎಷ್ಟು ಸರಿ?
- ನಾಸ್ತಿಕರಾದ ನೀವು ಕಣ್ಣಪ್ಪನ ಕಥೆ ಹೇಳುತ್ತೀರಿ. ಆದರೆ ಅಂತಹ ನಿಷ್ಕಲ್ಮಶ ಭಕ್ತಿ ನಿಮ್ಮಲ್ಲಿದೆಯೇ?
- ದೇವಸ್ಥಾನ ಭೇಟಿಯ ಹಿಂದಿರುವ ಉದ್ದೇಶ ಶುದ್ಧಿ ಇರಬೇಕಲ್ಲವೇ?
- ವೈಯಕ್ತಿಕ ವಿಚಾರವೆಂದು ಸುಮ್ಮನಿರಬಹುದು, ಆದರೆ ನೀವು 6 ಕೋಟಿ ಜನರ ಪ್ರತಿನಿಧಿ. ನಿಮ್ಮ ನಡೆ ಜನರ ನಂಬಿಕೆಗೆ ಗಾಸಿ ಮಾಡದಂತಿರಬಾರದಂತಿರಬೇಕಲ್ಲವೇ?
- ಸಮರ್ಥಿಸಿಕೊಳ್ಳುವ ಭರದಲ್ಲಿ ತಾವೇಷ್ಟು ಸ್ವಚ್ಛ ಎಂಬುದನ್ನು ಅರಿತುಕೊಳ್ಳುವುದು ಒಳಿತು.
Leave A Reply