ಮತ್ತೆ ಉದ್ಧಟತನ ಮೆರೆದ ದರೂಲ್ ಉಲೂಮ್: ರಾಮನ ಆರಾಧಿಸಿದ್ದಕ್ಕೆ ಸಲ್ಮಾನ್ ಖುರ್ಷಿದ್ ಇಸ್ಲಾಮಿನಿಂದಲೇ ಉಚ್ಚಾಟನೆ
ಲಖನೌ: ದಿನೇದಿನೆ ಉತ್ತರ ಪ್ರದೇಶದ ದರೂಲ್ ಉಲೂಮ್ ದಿಯೋಬಂದ್ ಸಂಸ್ಥೆಯ ಉದ್ಧಟತನ, ಉಪಟಳ ಜಾಸ್ತಿಯಾಗುತ್ತಿದೆ. ಇತ್ತೀಚೆಗಷ್ಟೇ ಮುಸ್ಲಿಂ ಮಹಿಳೆಯರು ಹುಬ್ಬು ಟ್ರಿಮ್ ಮಾಡಿಸಿದ್ದಕ್ಕೆ, ದೀಪಾವಳಿ ಆರತಿ ಬೆಳಗಿದ್ದಕ್ಕೆ ಫತ್ವಾ ಹೊರಡಿಸಿದ್ದ, ಮುಸ್ಲಿಮ್ ಮಹಿಳೆಯರು ಹಾಗೂ ಪುರುಷರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡುವುದು ಇಸ್ಲಾಮಿಗೆ ವಿರುದ್ಧ ಎಂದು ಆದೇಶ ಹೊರಡಿಸಿದ್ದ ಸಂಸ್ಥೆ ಈಗ ಮತ್ತೊಂದು ಉದ್ಧಟತನ ಮೆರೆದಿದೆ.
ಸಂಬಲ್ ಪ್ರದೇಶದಲ್ಲಿ ಇತ್ತೀಚೆಗೆ ಕಲ್ಕಿ ಹಬ್ಬದ ಹಿನ್ನೆಲೆಯಲ್ಲಿ ರಾಮನಿಗೆ ಆರತಿ ಪೂಜೆ ಏರ್ಪಡಿಸಲಾಗಿದ್ದು, ಅದರಲ್ಲಿ ರಾಮನಿಗೆ ಆರತಿ ಬೆಳಗಿದ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರನ್ನು ಇಸ್ಲಾಂನಿಂದ ಉಚ್ಚಾಟಿಸಿ ದಿಯೋಬಂದ್ ಸಂಸ್ಥೆ ಆದೇಶ ಹೊರಡಿಸಿದೆ.
ಅಲ್ಲಾನ ಹೊರತಾಗಿ ಬೇರೆ ದೇವರನ್ನು ಆರಾಧಿಸುವುದು ಇಸ್ಲಾಮಿಗೆ ವಿರುದ್ಧ. ಮೂರ್ತಿ ಪೂಜೆಯನ್ನು ಇಸ್ಲಾಂನ ಕಾನೂನುಗಳು ಯಕಃಶ್ಚಿತ್ ವಿರೋಧಿಸುತ್ತವೆ. ಹಾಗಾಗಿ ಕೂಡಲೇ ಜಾರಿಯಾಗುವಂತೆ ಖುರ್ಷಿದ್ ರನ್ನು ಇಸ್ಲಾಮಿನಿಂದ ಉಚ್ಚಾಟಿಸಲಾಗಿದೆ ಎಂದು ಸಂಸ್ಥೆ ಆದೇಶ ಹೊರಡಿಸಿದೆ.
ಅಲ್ಲ, ಸ್ವಾಮಿ ರಾಮ-ರಹೀಮ್ ಒಂದೇ ಅಂದ ಮೇಲೆ, ರಾಮನನ್ನು ಪೂಜಿಸಿದ ಮಾತ್ರಕ್ಕೆ ಆತ ಧರ್ಮವಿರೋಧಿ ಆಗಲು ಹೇಗೆ ಸಾಧ್ಯ? ದೇವರಿಗೆ ಎಲ್ಲರೂ ಒಂದೇ ಎನ್ನುವ ಕನಿಷ್ಠ ಜ್ಞಾನವೂ ಇಲ್ಲದ ಇಂಥ ಸಂಸ್ಥೆ ನಿಷೇಧಿಸಬೇಕು ಎಂದು ಮುಸ್ಲಿಂ ಮಹಿಳೆಯರು ಆಗ್ರಹಿಸಿದ್ದು ಸರಿಯಾಗಿಯೇ ಇದೆ.
Leave A Reply