ಕಾಂಗ್ರೆಸ್ ವಿರುದ್ಧ ಮತ ಸೆಳೆಯಲು ಉಪೇಂದ್ರ ಬಳಕೆ!
ದೆಹಲಿಯಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಅವರು ತಮಗೆ ನೆಗೆಟಿವ್ ಆಗಬಹುದಾದ ವೋಟುಗಳು ಬಿಜೆಪಿ ಕಡೆ ಹೋಗದಂತೆ ಪ್ಲಾನ್ ಮಾಡಿ ಹುಟ್ಟು ಹಾಕಿದ್ದೇ ಆಮ್ ಆದ್ಮಿ. ಅದೇ ಸೀನ್ ಕರ್ನಾಟಕದಲ್ಲಿ ಕ್ರಿಯೆಟ್ ಮಾಡಲು ಸಿದ್ಧರಾಮಯ್ಯ ಸ್ಕೆಚ್ ಹಾಕಿ ಹುಟ್ಟು ಹಾಕಿದ್ದೇ ಕೆಪಿಜೆಪಿ. ಅಲ್ಲಿ ಆಮ್ ಆದ್ಮಿಯ ಕೇಜ್ರಿವಾಲನ ಗೆಟಪ್ ಇಲ್ಲಿ ಹಾಕಿರುವ ಮಹಾನಟನ ಹೆಸರು ಉಪೇಂದ್ರ.
ಉಪೇಂದ್ರ ಅವರನ್ನು ಕಾಂಗ್ರೆಸ್ ಮೊದಲು ಬಳಸಿದ್ದು ಅಮಿತ್ ಶಾ ಬೆಂಗಳೂರಿಗೆ ಬಂದು ಮೂರು ದಿನ ವಾಸ್ತವ್ಯ ಹೂಡಿದಾಗ. ಆವತ್ತೆ ಮೊದಲ ದಿನ ಉಪೇಂದ್ರ ಹೊಸ ಪಕ್ಷ ಕಟ್ಟುತ್ತಾರಂತೆ ಎಂದು ಸುದ್ದಿ ಹಬ್ಬಿಸಿ ಅಮಿತ್ ಶಾ ಮೇಲೆ ಹೋಗಲಿದ್ದ ಮೀಡಿಯಾ ಕಣ್ಣು ಉಪೇಂದ್ರ ಮೇಲೆ ಬೀಳುವಂತೆ ಮಾಡಲಾಗಿತ್ತು. ಅದನ್ನೇ ಮುಂದುವರೆಸಿಕೊಂಡು ಹೋಗಲು ಉಪೇಂದ್ರ ಕಾಯುತ್ತಿದ್ದರು. ಬಹುಶ: ಗ್ರೀನ್ ಸಿಗ್ನಲ್ ಸಿಕ್ಕಿರಬೇಕು. ಬಿಜೆಪಿಯಿಂದ ನಿಲ್ತೇನೆ, ಟಿಕೆಟ್ ಸಿಗುತ್ತಾ ಎಂದು ಉಪೇಂದ್ರ ಕೇಳಿದಾಗ ಕೊಟ್ಟಿದ್ದರೆ ಉಪೇಂದ್ರ ಇಂತಹ ಒಂದು ಚಿತ್ರಕಥೆ ಬರೆಯುತ್ತಲೇ ಇರಲಿಲ್ಲ. ಆದರೆ ಬಿಜೆಪಿ ಟಿಕೆಟ್ ಕೊಡುವ ಯಾವುದೇ ಭರವಸೆ ಕೊಡಲೇ ಇಲ್ಲ. ನಮ್ಮ ಕೈಯಲ್ಲಿ ಏನಿದೆ ಸ್ವಾಮಿ, ಎಲ್ಲ ಮೋದಿ ಮತ್ತು ಅಮಿತ್ ಶಾ ನೋಡಿಕೊಳ್ಳುವುದು ಎಂದು ಬಿಟ್ಟರು. ಅದರ ನಂತರ ಒಂದಿಷ್ಟು ದಿನ ಕಾದ ಉಪೇಂದ್ರ ಬಿಜೆಪಿಯಿಂದ ಏನೂ ಭರವಸೆ ಸಿಗದೇ ಇದ್ದ ಕಾರಣ ಮೋದಿ ಮೇಲೆ ತಮ್ಮ ಕೋಪ ತೀರಿಸಿಕೊಂಡಿದ್ದಾರೆ.
ಈ ಮೂಲಕ ಮುಂದಿನ ಸಲ ವಿಧಾನಸಭೆಗೆ ನಿಂತು ಆದಷ್ಟು ಕಾಂಗ್ರೆಸ್ಸಿನ ವಿರುದ್ಧ ಮತಗಳನ್ನು ಸೆಳೆದು ಒಂದಿಪ್ಪತ್ತು ಸೀಟು ಗೆದ್ದು ಕಾಂಗ್ರೆಸ್ಸಿನೊಂದಿಗೆ ಪ್ರಸ್ಥಗೆ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಚೀಪ್ ಗಿಮಿಕ್ ಮಾಡಿರುವುದು ಮಾತ್ರ ಅವರು ರಾಜಕೀಯದಲ್ಲಿ ಶಿಶು ಎಂದು ಸಾಬೀತುಪಡಿಸಿದೆ
Leave A Reply