ದಿದಿ, ಠಾಕ್ರೆ ಭೇಟಿ ಇದಕ್ಕೆ ಕಾರಣ ಮೋದಿಯಿಂದಾದ ಉಂಟಾದ ಭೇದಿ
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮಾರಣ ಹೋಮ ನಡೆಸಿ, ಹಿಂದೂ ಹಬ್ಬಗಳ ಮೇಲೆ ತಡೆಯೊಡ್ಡುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ಮಾಡಿ ನನ್ನದು ಅವರದ್ದು ಒಂದೇ ನಿಲುವು. ಹೀಗೆ ಹೇಳುತ್ತಿರುವುದು ಯಾರು ಗೊತ್ತೇ ಹಿಂದೂ ಹೃದಯ ಸಾಮ್ರಾಟ ಬಾಳಾ ಸಾಹೇಬ್ ಠಾಕ್ರೆ ಅವರ ಶಿವಸೇನೆಯ ಮುಖ್ಯಸ್ಥ ಉದ್ದವ ಠಾಕ್ರೆ. ಹೌದು ದೇಶದ ಯಾವುದೇ ಮೂಲೆಯಲ್ಲಿ ಹಿಂದೂಗಳ ಕೂದಲು ಸೊಂಕಿದರು ಸಿಡಿದೇಳುತ್ತಿದ್ದ ಬಾಳಾ ಸಾಹೇಬ್ ಠಾಕ್ರೆ ಅವರ ಸುಪುತ್ರ ಎಂಬುದೇ ಹಿಂದೂಸ್ಥಾನದ ದುರಂತ.
ದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದೂತ್ವದ ನಿಲುವು ಹೊಂದಿರುವ ಕೇಂದ್ರ ಸರಕಾರ ಮೋದಿ ನೇತೃತ್ವದಲ್ಲಿ ಅಸ್ತಿತ್ವದಲ್ಲಿದೆ. ಆದರೆ ತನ್ನ ಅಸ್ಥಿತ್ವದ ನೆಲೆ ಉಳಿಸಿಕೊಳ್ಳಲು ಬಡಿದಾಡುತ್ತಿರುವ ಉದ್ಧವ್ ಠಾಕ್ರೆ ಮತ್ತು ಮಮತಾ ದಿದಿ ಈಗ ಕೇವಲ ಅಧಿಕಾರಕ್ಕಾಗಿ ತಮ್ಮ ಪಕ್ಷದ ಉಳಿವಿಗಾಗಿ ಬಡಿದಾಡುತ್ತಿವೆ. ರಾಷ್ಟ್ರದ ಹಿತಾಸಕ್ತಿಗಾಗಿ ದುಡಿಯುತ್ತಿರುವ ಮೋದಿ ವಿರುದ್ಧ ಹೋರಾಡುವ ಸಂಚು ರೂಪಿಸುತ್ತಿರುವ ದಿದಿ ಮತ್ತು ಠಾಕ್ರೆ ತಮ್ಮ ನೆಲೆ ಭದ್ರ ಪಡಿಸಿಕೊಳ್ಳಲು ಅಡ್ಡ ದಾರಿ ಹಿಡಿದರೆ ಗೆಲವು ಸಾಧ್ಯವೇ ಎಂಬುದನ್ನು ಅರಿತುಕೊಳ್ಳಬೇಕು.
ವಾಣಿಜ್ಯ ನಗರಿಯಲ್ಲಿದ್ದುಕೊಂಡು ಕಾಶ್ಮೀರ ಪಂಡಿತರು, ಶ್ರೀರಾಮ ಮಂದಿರ, ಗುಜರಾತ್ ಗೋದ್ರಾ ಗಲಭೆ ಹೀಗೆ ಎಲ್ಲಿಯೇ ಹಿಂದೂಗಳ ವಿರುದ್ಧ ಮಾತು ಕೇಳಿಬಂದರೂ ಟೊಂಕಕಟ್ಟಿ ನಿಲ್ಲುತ್ತಿದ್ದರು ಬಾಳಾ ಸಾಹೇಬ್ ಠಾಕ್ರೆ. ಆದರೆ ಇಂದು ಉದ್ಧವ್ ಠಾಕ್ರೆ ದಸರಾ ಆಚರಣೆಗೆ ತಡೆ ಒಡ್ಡಿದ, ಬಾಂಗ್ಲಾ ನುಸುಳುಕೋಳರಿಗೆ ಆಶ್ರಯ ನೀಡಿದ, ಹಿಂದೂಗಳ ವಿರುದ್ಧ ಸದಾ ಷಡ್ಯಂತ್ರ ನಡೆಸುತ್ತಿರುವ ರೂಪಿಸುವ ಮಮತಾ ಜತೆ ಕೈ ಜೋಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದುವರೆಗೆ ಲಕ್ಷಾಂತರ ಹಿಂದೂಗಳ ಮಾರಣ ಹೋಮಕ್ಕೆ ಕಾರಣವಾದವರ ಜೊತೆಗೆ ಹೋಗುತ್ತಿರುವುದು ದುರಂತ.
ಟಾ ಟಾ ನ್ಯಾನೋ ಕಂಪನಿ ಘಟಕ ವಿರೋಧಿಸಿ, ರೈತರ ಜಮೀನು ರಕ್ಷಣೆ ಮಾಡಿದ್ದೇನೆ ಎಂದು ಅಧಿಕಾರಕ್ಕೆ ಬಂದವರು ತೃಣಮೂಲ ಕಾಂಗ್ರೆಸ್ ನ ದಿದಿ. ಈಗ ಮುಂಬೈಯಲ್ಲಿ ಕೈಗಾರಿಕೆಗಳ ಕುರಿತು ಮಾಹಿತಿ ಪಡೆಯಲು ಬಂದ ದಿದಿ ಅದೇ ನೆಪದಲ್ಲಿ ಬಿಜೆಪಿ ಮತ್ತು ಮೋದಿಯನ್ನು ವಿರೋಧಿಸುವುದಕ್ಕಾಗಿ ವಿರೋಧಿಸುವ ಠಾಕ್ರೆಯನ್ನು ಭೇಟಿ ಮಾಡಿದ್ದರ ಹಿಂದಿನ ಮರ್ಮವೇನು. ಇನ್ನು ಪಶ್ಚಿಮ ಬಂಗಾಳದಲ್ಲಿ ಜಾಗತೀಕ ಉದ್ಯಮ ಶೃಂಗ ಸಭೆ ನಡೆಸಲು ಸಿದ್ಧರಾಗಿದ್ದಾರೆ. ಅಂದರೆ ಅಲ್ಲಿಗೆ ಮತ್ತಿಷ್ಟು ರೈತರ ಭೂಮಿಗೆ ದಿದಿ ಕನ್ನ ಹಾಕುತ್ತಿದ್ದಾರೆ ಎಂದಾಯಿತು. ಹೀಗೆ ಅಧಿಕಾರಕ್ಕಾಗಿ ನಾಲಿಗೆ ಹರಿದ ಕಡೆ ಹೊರಳಾಡಿಸುವ ಮಮತಾಳನ್ನು ಭೇಟಿ ಮಾಡಿ, ಬಿಜೆಪಿ ಮತ್ತು ಮೋದಿ ವಿರುದ್ಧ ನಮ್ಮದು, ನಿಮ್ಮದು ಒಂದೇ ನಿಲುವು ಎನ್ನುತ್ತಿರಲ್ಲಾ ಠಾಕ್ರೆ ಅದೆಂಥ ದುರ್ಗತಿ ಬಂತು ನಿಮಗೆ.
ಹಿಂದೂ ಹೃದಯ ಸಾಮ್ರಾಟನಿಗೆ ಇರುವ ಮರ್ಯಾದೆಯನ್ನು ಕಾಪಾಡಿ ಇಲ್ಲವೇ ಸುಮ್ಮನಿರಿ. ನಿಮ್ಮ ಅಧಿಕಾರದ ತೆವಲಿಗಾಗಿ ಯಾರ್ಯಾರದ್ದೋ ಬೆಂಬಲಕ್ಕೆ ನಿಂತು, ಬಲಿಷ್ಟ ಸರಕಾರವನ್ನು ನಿಂದಿಸುವ ಹುಚ್ಚುತನ ಬೇಡ.
Leave A Reply