ಪಾಕ್ ನಿಷ್ಠೆ ಮರೆತ ಬಳಿಕ ಚೀನಾ ಭಾರತದೆದುರು ಮಂಡಿಯೂರಿದ್ದು ಏಕೆ ಗೊತ್ತಾ?
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಡೈಮರ್ ಭಾಷಾ ಅಣೆಕಟ್ಟು ಸ್ಥಾಪಿಸಲು ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅನ್ವಯ 14 ಶತಕೋಟಿ ಡಾಲರ್ ನೀಡುವುದಾಗಿ ಮುಂದೆ ಬಂದಿದ್ದ ಚೀನಾಕ್ಕೆ ಪಾಕಿಸ್ತಾನ ತಿರಸ್ಕಾರದ ಟಾಂಗ್ ನೀಡಿದ ಬಳಿಕ ಈಗ ಚೀನಾ ಭಾರತದೆದುರು ಮಂಡಿಯೂರಿದೆ.
ಚೀನಾ ವಿದೇಶಾಂಗ ಸಚಿವಾಲಯ ಭಾರತದಲ್ಲಿರುವ ರಾಯಭಾರಿ ಲುವೋ ಜಾವೋಹಿ ಮೂಲಕ ಹೇಳಿಕೆಯೊಂದನ್ನು ನೀಡಿದ್ದು, ಭಾರತ ಒಂದು ಪ್ರದೇಶ ಒಂದು ರಸ್ತೆ (ಒಬಿಒಆರ್) ಯೋಜನೆಗೆ ಭಾರತ ಕೈ ಜೋಡಿಸಿದರೆ ಸಿಪಿಇಸಿ ಯೋಜನೆಯ ಹೆಸರನ್ನೇ ಬದಲಾಯಿಸುವುದಾಗಿ ತಿಳಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಸಿಪಿಇಸಿ ಅನ್ವಯ ಕಾಮಗಾರಿ ಆರಂಭಿಸಲು ಹಾಗೂ ಒಬಿಒಆರ್ ಗೆ ಭಾರತ ಕೈ ಜೋಡಿಸಿದರೆ ನಾವು ಸಿಪಿಇಸಿ ಯೋಜನೆಯ ಹೆಸರನ್ನೇ ಬದಲಾಯಿಸುತ್ತೇವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಚೀನಾದ 5 ಲಕ್ಷಕೋಟಿ ಬೃಹತ್ ಬಂಡವಾಳದ ಮಹತ್ತರ ಒಬಿಒಆರ್ ಯೋಜನೆಗೆ ಭಾರತ ಪ್ರತಿರೋಧ ವ್ಯಕ್ತಪಡಿಸಿತ್ತಲ್ಲದೆ, ಚೀನಾದಲ್ಲಿ ನಡೆದ ಸಭೆ ಬಹಿಷ್ಕರಿಸಿತ್ತು. ಬಳಿಕ ನೇಪಾಳ್ ಹಾಗೂ ಮ್ಯಾನ್ಮಾರ್ ಸಹ ಯೋಜನೆಗೆ ಕೈಜೋಡಿಸುವಂತೆ ಭಾರತಕ್ಕೆ ಮನವಿ ಮಾಡಿದ್ದವು.
ಈಗ ಚೀನಾ ಭಾರತದೆದುರು ಮಂಡಿಯೂರಿ ಒಂದು ವಾರವಾದರೂ ಭಾರತ ಇದುವರೆಗೆ ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ.
ಒಟ್ಟಿನಲ್ಲಿ ಸಿಪಿಇಸಿ ಮೂಲ ಪಾಕಿಸ್ತಾನವನ್ನು ಬುಟ್ಟಿಗೆ ಹಾಕಿಕೊಳ್ಳಲು ಹೊರಟಿದ್ದ ಚೀನಾಕ್ಕೆ ಗೆಳೆಯ ಪಾಕಿಸ್ತಾನವೇ ಸಾಲ ತಿರಸ್ಕರಿಸಿ ಟಾಂಗ್ ನೀಡಿದ ಬಳಿಕ ಚೀನಾ ಭಾರತದೆದುರು ಅಂಗಲಾಚುವಂತಾಗಿರುವುದಂತೂ ಸುಳ್ಳಲ್ಲ.
Leave A Reply