ಅಲ್ಲಾ ಬಿಟ್ಟರೆ ನೀವೇ ನಮ್ಮ ಕೊನೆಯ ನಂಬಿಕೆ ಎಂದ ಪಾಕಿಸ್ತಾನಿಗೆ ಸುಷ್ಮಾ ಸ್ವರಾಜ್ ನೆರವು
ದೆಹಲಿ: ದಶಕಗಳಿಂದಲೂ ಪಾಕಿಸ್ತಾನ ಶತ್ರು ರಾಷ್ಟ್ರ ಎಂದು ಗೊತ್ತಿದ್ದರೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾನವೀಯ ನೆಲೆಗಟ್ಟಿನ ಮೇಲೆ ಸಂಕಷ್ಟದಲ್ಲಿರುವ ಪಾಕಿಸ್ತಾನಿಯರಿಗೆ ವೈದ್ಯಕೀಯ ವೀಸಾ ನೀಡುತ್ತಿದ್ದಾರೆ.
ಈಗ ಮತ್ತೆ ನಾಲ್ವರು ಪಾಕಿಸ್ತಾನಿಯರಿಗೆ ವೈದ್ಯಕೀಯ ವೀಸಾ ಒದಗಿಸುವ ಭರವಸೆ ನೀಡಿರುವ ಸ್ವರಾಜ್ ಮಾನವೀಯತೆ ಮೆರೆದಿದ್ದಾರೆ.
ಶಹಜೈಬ್ ಇಕ್ಬಾಲ್ ಎಂಬುವವರು ಸಂಬಂಧಿಯೊಬ್ಬರಿಗೆ ಲಿವರ್ ಸಮಸ್ಯೆಯಿದ್ದು, ಭಾರತದಲ್ಲಿ ಚಿಕಿತ್ಸೆ ನೀಡಬೇಕು. ಅದಕ್ಕಾಗಿ ಭಾರತೀಯ ರಾಯಭಾರಿಗಳಿಂದ ವೀಸಾ ಒದಗಿಸಬೇಕು. ಅಲ್ಲಾನ ಬಿಟ್ಟರೆ ನೀವೇ ನಮ್ಮ ಕೊನೆಯ ನಂಬಿಕೆ ಎಂದು ಟ್ವಿಟರ್ ನಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿರುವ ಸುಷ್ಮಾ ಸ್ವರಾಜ್, ನಿಮ್ಮ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ, ವೀಸಾ ನೀಡಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ, ಶಹಜೈಬ್ ಹೊರತುಪಡಿಸಿ ಮೂವರು ಪಾಕಿಸ್ತಾನಿಯರು ಸಹ ವೈದ್ಯಕೀಯ ವೀಸಾಕ್ಕೆ ಮನವಿ ಮಾಡಿದ್ದು, ಅವರಿಗೂ ಸುಷ್ಮಾ ಸ್ವರಾಜ್ ವೀಸಾ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ, ಭಾರತ ಮಾನವೀಯ ವಿಷಯಗಳಲ್ಲೂ ರಾಜಕೀಯ ಮಾಡುತ್ತಿದ್ದು, ಪಾಕಿಸ್ತಾನಿ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡುತ್ತಿಲ್ಲ ಎಂದು ಆರೋಪಿಸಿದ ಬೆನ್ನಲ್ಲೇ, ಸುಷ್ಮಾ ಸ್ವರಾಜ್ ಮಾನವೀಯ ಆಧಾರದ ಮೇಲೆ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಇನ್ನಾದರೂ ಪಾಕಿಸ್ತಾನ ಬುದ್ಧಿ ಕಲಿಯಲಿ ಎಂಬುದು ಆಶಯವೂ ಆಗಿದೆ.
Leave A Reply