ವಿ.ಟಿ ರಸ್ತೆಯ ಕಾಲುದಾರಿ ಈ ಆಸ್ಪತ್ರೆಯ ಪಾರ್ಕಿಂಗ್ ವ್ಯವಸ್ಥೆ.
Posted On July 4, 2017
ಕೋಡಿಯಲ್ ಬೇಲ್ ರಸ್ತೆಯಿಂದ ಅದೆಷ್ಟೋ ಮಂದಿ ಕಾರ್ ಸ್ಟ್ರೀಟ್ ಗೆ ಹೋಗುವುದು ವಿ ಟಿ ರಸ್ತೆಯಾಗಿ, ಆದ್ರೆ ಅಲ್ಲೊಂದು ಸಮಸ್ಯೆ ಈಗ ಎಲ್ಲಾ ವಾಹನ ಚಾಲಕರನ್ನು ಕಾಡ ತೊಡಗಿದೆ, ಅದೆನೆಂದರೆ ಅಲ್ಲಿರುವ ಆಸ್ಪತ್ರೆಯವರು ಈ ರಸ್ತೆಯನ್ನು ತಮ್ಮ ಪಾರ್ಕಿಂಗ್ ವ್ಯವಸ್ಥೆಯಾಗಿ ಮಾಡುಕೊಂಡಿದ್ದಾರೆ.
ಇಲ್ಲಿನ ಭದ್ರತ ಸಿಬ್ಬಂದಿಯ ಬಳಿ ನಿಮ್ಮ ಆಸ್ಪತ್ರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲವೇ ಎಂದು ಕೇಳಿದರೆ “ಇದೆ ಆದ್ರೆ ಇವತ್ತು ಒಂದು ಮೀಟಿಂಗ್ ಇರುವ ಕಾರಣ ಅವರ ಕಾರಿಗಾಗಿ ವ್ಯವಸ್ಥೆ ಮಾಡಲಾಗಿದೆ ಹಾಗಾಗಿ ಚಿಕಿತ್ಸೆ ಬಂದಿರುವವರ ಕಾರು ಇಲ್ಲಿ ರಸ್ತೆಯಲ್ಲಿ ನಿಲ್ಲಿಸಲಾಗಿದೆ ಎಂದು ಸುಸೂತ್ರ ವಾಗಿ ನಗು ನಗುತ್ತ ಹಿಂದಿಯಲ್ಲಿ ಹೇಳತೊಡಗಿದ”
ಕಾಲುದಾರಿಯಲ್ಲಿ ನಿಂತಿದ್ದ ಕಾರನ್ನು ತೋರಿಸಿ ಇದು ಆಸ್ಪತ್ರೆಯಾ ಜಾಗನ ಅಂತ ಕೇಳಿದಕ್ಕೆ “ನಹಿಂ ಸಾಬ್ ಹೇ ತೋ ಸರಕಾರ್ ಕಾ ಜಗಾ ಹೇ” ಎಂದು ಮತ್ತೊಮ್ಮೆ ಮುಗುಳ್ ನಕ್ಕ. ಸುಮಾರು ನಾಲ್ಕು ಜನಕ್ಕಿಂತ ಹೆಚ್ಚಿನ ಭದ್ರತ ಸಿಬ್ಬಂದಿ ಅಲ್ಲಿ ಇದ್ದಾರೆ ಆದ್ರೆ ಎಲ್ಲರ ಕೆಲಸ ಒಂದೇ ಬಂದ ಕಾರನ್ನು ಸರಿಯಾಗಿ ಕಾಲುದಾರಿಯ ಮೇಲೆ ನಿಲ್ಲಿಸುವುದು!
ಈ ಆಸ್ಪತ್ರೆಯ ಗಾಡಿ ಹೋಗಲು ಕೂಡ ಇಲ್ಲಿ ಜಾಗವಿಲ್ಲದ್ದು ಮಾತ್ರ ವಿಪರ್ಯಾಸ!
ಯಾರು ಅದರೊಳಗೆ ಇದ್ರೋ ಗೊತ್ತಿಲ್ಲ, ಆದ್ರೆ ಆಂಬ್ಯುಲೆನ್ಸ್ ಮಾತ್ರ ಆ ಜಾಗದಿಂದ ಹೊರ ಬರಲು ಹರಸಹಾಸ ಪಡುವುದನ್ನು ಕಂಡು ‘ಇನ್ನಾದ್ರೂ ಕಾಲುದಾರಿಯನ್ನು ಪಾರ್ಕಿಂಗ್ ವ್ಯವಸ್ಥೆಗೆ ಬಳಸದಂತಿರಲಿ ಎಂಬ ಮಾತು ದಾರಿ ಹೋಕರಿಂದ ಕೇಳಿ ಬಂತು.
ನಡೆದುಕೊಂಡು ಹೋಗುವವರಿಗೆ ಎಲ್ಲಿದೆ ದಾರಿ?
ವಾಹನ ಸವಾರರ ಸಮಸ್ಯೆ ಒಂದೆಡೆ ಆದ್ರೆ ನಡೆದು ಕೊಂಡು ಹೋಗುವವರಿಗೆ ದಾರಿ ಇಲ್ಲದಂತಾಗಿದೆ! ಒಟ್ಟಿನಲ್ಲಿ ಈ ರಸ್ತೆ ಈಗ ಕೇವಲ ಆಸ್ಪತ್ರೆಯ ಪಾರ್ಕಿಂಗ್ ಲಾಟ್ ಆಗಿರುವುದು ಪಾದಚಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ!
ಎಲ್ಲಿದ್ದೀರಾ ಟ್ರ್ಯಾಫಿಕ್ ಪೋಲೀಸ್?
ಅಲ್ಲಲಿ ಲೈಸೆನ್ಸ್ ತೋರಿಸಿ, ಇನ್ಶುರೆನ್ಸ್ ತೋರಿಸಿ, ಎಮಿಶನ್ ರಿಪೋರ್ಟ್ ತೋರಿಸಿ ಎಂದು ದ್ವಿಚಕ್ರ ವಾಹನ ಸವಾರರನ್ನು ನಿಲ್ಲಿಸಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ಪೋಲೀಸ್ ಅಧಿಕಾರಿಗಳಿಗೆ ಈ ಕಾಲುದಾರಿಯಲ್ಲಿ ನಿಲ್ಲಿಸುವ ಕಾರುಗಳು ಕಾಣುವುದಿಲ್ಲವೇ??
ಅಂತು ಇಂತು ಈ ಆಸ್ಪತ್ರೆಯವರು ಆದಷ್ಟು ಬೇಗ ತಮ್ಮ ಜಾಗದಲ್ಲೇ ಪಾರ್ಕಿಂಗ್ ವೈವಸ್ಥೆಯನ್ನು ಮಾಡಿದರೆ ಒಳಿತು!
–ಜನ ಸಾಮಾನ್ಯ–
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply