ಮುಂದಿನ ದೀಪಾವಳಿ ಅಯೋಧ್ಯೆಯ ರಾಮಮಂದಿರದಲ್ಲೇ ಆಚರಿಸುವುದು ಖಚಿತ
ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ಶೀಘ್ರದಲ್ಲಿ ನಿರ್ಮಾಣವಾಗಲಿದೆ. ಭಕ್ತರು ಮುಂದಿನ ದೀಪಾವಳಿಯನ್ನು ರಾಮಮಂದಿರದಲ್ಲೇ ಆಚರಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಭರವಸೆ ನೀಡಿದ್ದಾರೆ.
ಅಕ್ಟೋಬರ್ ಒಳಗೆ ಎಲ್ಲ ರಾಮಮಂದಿರ ನಿರ್ಮಾಣವಾಗಲಿದೆ. ರಾಮಮಂದಿರಕ್ಕೆ ಬೇಕಾದ ಸಕಲ ವಸ್ತುಗಳನ್ನು ಅಯೋಧ್ಯೆಯಲ್ಲಿ ಸಿದ್ಧಪಡಿಸಲಾಗಿದೆ. ಪ್ರಸ್ತುತ ಕೇವಲ ಅವುಗಳನ್ನು ಜೋಡಿಸುವ ಕಾರ್ಯವಷ್ಟೇ ಆಗಬೇಕಿದೆ. ರಾಮಮಂದಿರಕ್ಕಾಗಿ ಹೊಸ ಕಾನೂನು ಜಾರಿಗೆ ತರುವ ಅವಶ್ಯವಿಲ್ಲ. ನರಸಿಂಹರಾವ್ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಅಯೋಧ್ಯೆಯಲ್ಲಿ ಹಿಂದೆ ಮಂದಿರವಿತ್ತು. ಅದನ್ನು ಹಿಂದೂಗಳಿಗೆ ನೀಡಬೇಕು ಎಂದು ಉಲ್ಲೇಖಿಸಿತ್ತು ಎಂದು ತಿಳಿಸಿದ್ದಾರೆ.
ದಾಖಲೆಗಳೆಲ್ಲವೂ ಹಿಂದೂಗಳ ಪರ ಇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಹೊಸ ಕಾನೂನು ತರಲು ಸಾಧ್ಯವಿದೆ. ಆದರೂ ಹೊಸ ಕಾನೂನು ಜಾರಿ ಮಾಡುವ ಅವಶ್ಯವಿಲ್ಲ. ನಾವು ಪ್ರಕರಣದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಸುಬ್ರಮಣಿಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುನ್ನಿ ವಕ್ಫ ಬೋರ್ಡ್ ಈ ವಿಷಯದಲ್ಲಿ ತಲೆ ಹಾಕಲು ಯಾವುದೇ ಅಧಿಕಾರವಿಲ್ಲ. ಅಲಹಾಬಾದ್ ಹೈ ಕೋರ್ಟ್ ರಾಮಮಂದಿರ ಪ್ರಕರಣದಲ್ಲಿ ಕೂಲಂಕಷ ತನಿಖೆ ನಡೆಸುತ್ತಿದೆ ಹಿಂದೂಗಳಿಗೆ ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ.
ರಾಮಮಂದಿರದಲ್ಲಿ ಪ್ರಾರ್ಥನೆ ಮಾಡುವುದು ಹಿಂದೂಗಳ ಧಾರ್ಮಿಕ ಮೂಲಭೂತ ಹಕ್ಕು ಎಂದು ವಾದಿಸಲಾಗಿದೆ. ಆದರೆ ಮುಸ್ಲಿಮರಿಗೆ ಧಾರ್ಮಿಕ ಹಕ್ಕಿಲ್ಲ. ಮುಸ್ಲಿಮರಿಗೆ ಕೇವಲ ಆಸ್ತಿಯ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದಾರೆ. ಇದು ಸಾಮಾನ್ಯ ಹಕ್ಕಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
Leave A Reply