ಆ ಪೀರ್ ಬಾಬಾ 500 ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡಿದನೇ?
ಶ್ರೀನಗರ: ಜಮ್ಮು-ಕಾಶ್ಮಿರದಲ್ಲಿ ಮದರಸಾವೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮದರಸಾದಲ್ಲಿ ಇಸ್ಲಾಂ ಕುರಿತು ಬೋಧನೆ ಮಾಡುತ್ತಿದ್ದ ಪೀರ್ ಸಾಬ್ ಸುಮಾರು 500 ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆ ಖಾನ್ ಸಾಹೀಬ್ ಎಂಬಲ್ಲಿ ಕಳೆದ 18 ವರ್ಷಗಳಿಂದ ಮದರಸಾ ನಡೆಸುತ್ತಿದ್ದ ಪೀರ್ ಬಾಬಾ ಎಂದೇ ಖ್ಯಾತಿಯಾಗಿದ್ದ ಗುಲ್ಜಾರ್ ಅಹ್ಮದ್ ಎಂಬಾತ ಮಹಿಳೆಯರಿಗೆ ಧರ್ಮದ ಬೋಧನೆ ಹೆಸರಲ್ಲಿ ಸುಮಾರು 500 ಮಹಿಳೆಯರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರ ಡಿಎಸ್ಪಿ ಬಷೀರ್ ಅಹಮ್ಮದ್ ನೇತೃತ್ವದ ಪೊಲೀಸ್ ತಂಡ ಮದರಸಾದ ಕಚೇರಿ, ಹಾಸ್ಟೆಲ್, ಶಾಲೆ ಮೇಲೆ ದಾಳಿ ನಡೆಸಿದ್ದು, ಲೈಂಗಿಕ ಉದ್ರೇಕ ನೀಡುವ ಮಾತ್ರೆ ಸೇರಿ ಹಲವು ವಸ್ತು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಹಲವು ಸಿಡಿ ಸಹ ದೊರೆತಿದ್ದು, ಮುಸ್ಲಿಂ ಮಹಿಳೆ, ಯುವತಿಯರನ್ನು ಧರ್ಮದ ಹೆಸರಲ್ಲಿ ಅತ್ಯಾಚಾರ ಎಸಗುತ್ತಿದ್ದ ಎಂದು ತಿಳಿದುಬಂದಿದೆ.
ಶಾಲೆಯ ಕೋಣೆಗಳಲ್ಲೇ ಮಲಗುವ ಕೋಣೆ ಪತ್ತೆಯಾಗಿದ್ದು, ಹರಿಯಾಣದ ಡೇರಾ ಸಚ್ಚಾದಲ್ಲಿ ಸಿಕ್ಕ ಹಲವು ವಸ್ತು, ಗುಹೆಗಳಿಗೆ ಹೋಲಿಕೆ ಮಾಡಲಾಗಿದೆ.
ಈ ಸ್ವಯಂಘೋಷಿತ ದೇವಮಾನವನ ಸಹಚರರಾದ ಅಬ್ದುಲ್ ಗನಿ, ಬಷೀರ್ ಅಹ್ಮದ್ ಮಿರ್ ಹಾಗೂ ಮಹಿಳಾ ಉದ್ಯೋಗಿಗಳಾದ ಶಕೀಲಾ ಬಾನೋ ಎಂಬುವವರು ಮಹಿಳೆಯರು ಹಾಗೂ ಯುವತಿಯರನ್ನು ಮದರಸಾಗಳಿಗೆ ಕರೆತರುವಲ್ಲಿ ಸಹಕರಿಸಿದ್ದರು ಎಂದು ತಿಳಿದುಬಂದಿದೆ. ಆದಾಗ್ಯೂ, ದೇವಮಾನವನನ್ನು ವಶಪಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಪೀರ್ ಬಾಬಾ ವಿರುದ್ಧ ದಾಖಲೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Leave A Reply