ಇನ್ನು ಮದುವೆ ನೊಂದಣಿಗೂ ಆಧಾರ್!
ಮದುವೆಯಾಗಿಯೂ ಅದನ್ನು ನೊಂದಾವಣಿ ಮಾಡಿಸಿಲ್ವಾ? ಹಾಗಾದರೆ ಅದನ್ನು ಬೇಗ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಸರಕಾರ ಕಾನೂನು ತಂದ ಬಳಿಕ ಅದು ಕಷ್ಟವಾಗಬಹುದು. ಯಾಕೆಂದರೆ ವಿವಾಹ ನೊಂದಣೆ ಕೇಂದ್ರದಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗಬಹುದು.
ಆಶ್ಚರ್ಯವಾಯಿತಾ, ಹೌದು, ಕೇಂದ್ರ ಸರಕಾರ ವಿವಾಹವನ್ನು ನೊಂದಾವಣೆ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುವ ಚಿಂತನೆಗೆ ಮುಂದಾಗಿದೆ. ಈ ಬಗ್ಗೆ ಕೇಂದ್ರ ಕಾನೂನು ಆಯೋಗ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಮದುವೆಯಾದ ಒಂದು ತಿಂಗಳೊಳಗೆ ನಿಮ್ಮ ವಿವಾಹವನ್ನು ಕಡ್ಡಾಯಗೊಳಿಸದಿದ್ದರೆ ನಂತರ ಪ್ರತಿ ದಿನಕ್ಕೆ ಐದು ರೂಪಾಯಿಯಂತೆ ದಂಡ ಬೀಳಲಿದೆ. ಒಂದು ವೇಳೆ ನೀವು ಮದುವೆಯಾಗಿ ಏಳೆಂಟು ವರ್ಷಗಳು ಆಗಿದ್ದು, ನೊಂದಾವಣೆ ಮಾಡಿಸಿಕೊಳ್ಳದಿದ್ದರೆ ಆಗ ಏನಾಗುತ್ತದೆ ಎನ್ನುವುದಕ್ಕೆ ಇನ್ನೂ ಸ್ಪಷ್ಟತೆ ಬಂದಿಲ್ಲ. ಬಹುಶ: ಆಯೋಗ ಕೊಟ್ಟ ಶಿಫಾರಸ್ಸನ್ನು ಕೇಂದ್ರ ಒಪ್ಪಿಗೆ ಕೊಟ್ಟ ನಂತರ ಒಂದಿಷ್ಟು ಕಾಲಾವಕಾಶ ಕೊಟ್ಟು ಆದಷ್ಟು ಬೇಗ ನೊಂದಾವಣೆ ಮಾಡಿಸಿಕೊಳ್ಳಿ ಎಂದು ಹೇಳಬಹುದು. ಅದರ ನಂತರವೂ ನೊಂದಾವಣೆ ಮಾಡಿಸಿಕೊಳ್ಳದಿದ್ದರೆ ಮಾತ್ರ ದಂಡ ಹಾಕುವಂತಹ ಪ್ರಕ್ರಿಯೆಗೆ ಮುಂದಾಗಬಹುದು.
ಸಾಮಾನ್ಯವಾಗಿ ಮದುವೆಯಾದ ತಕ್ಷಣ ನವದಂಪತಿಗಳು ಈ ಬಗ್ಗೆ ಚಿಂತಿಸುವುದು ಕಡಿಮೆ. ಮಾಡೋಣ ಅದಕ್ಕೆನಂತೆ, ಯಾವತ್ತಾದರೂ ಮಾಡಿಸಿದರೆ ಆಯಿತು ಎನ್ನುವ ನಿಧರ್ಾರಕ್ಕೆ ಬರುತ್ತಾರೆ. ಈ ಯಾವತ್ತಿದ್ದರೂ ಎನ್ನುವ ಶಬ್ದ ಯಾವತ್ತೂ ಬರುವುದೇ ಇಲ್ಲ. ಇದರಿಂದ ಭವಿಷ್ಯದಲ್ಲಿ ಒಂದೊಮ್ಮೆ ಹೆಣ್ಣು ಅಥವಾ ಗಂಡಿಗೆ ವೈವಾಹಿಕ ಸಮಸ್ಯೆಯಾದಾಗ ಯಾವುದೇ ಆಧಾರ ಇರುವುದಿಲ್ಲ ಎನ್ನುವುದು ಆಯೋಗದ ಕಳಕಳಿ.
ಇನ್ನು ನೊಂದಾವಣೆ ಆದ ನಂತರ ಅದನ್ನು ಆಧಾರ ಕಾಡರ್ಿನೊಂದಿಗೆ ಜೋಡಿಸಿದರೆ ಆ ವ್ಯಕ್ತಿಗೆ ಇದು ಎಷ್ಟನೇ ಮದುವೆ ಎಂದು ಗೊತ್ತಾಗುತ್ತದೆ. ಅನೇಕ ಕಡೆ ಮೊದಲ ಹೆಂಡ್ತಿಗೆ ಮೋಸ ಮಾಡಿ ಎರಡನೇ ಮದುವೆಯಾಗುವ ಪುರುಷರಿದ್ದಾರೆ. ಅವರು ತಮ್ಮ ಎರಡನೇ ಮದುವೆಯನ್ನು ಕಡ್ಡಾಯ ನೋಂದಾವಣೆಯ ಅಡಿಯಲ್ಲಿ ನೋಂದಾವಣೆ ಮಾಡದೆ ಬೇರೆ ವಿಧಿಯಿಲ್ಲ. ಒಂದು ವೇಳೆ ಮಾಡಿಸದಿದ್ದರೆ ಆತನ ಪತ್ನಿಯೇ ಕೇಳುವ ಸಾಧ್ಯತೆ ಇರುತ್ತದೆ. ಆಗ ಪುರುಷ ಸಿಕ್ಕಿಬೀಳುತ್ತಾನೆ. ಇದರಿಂದ ಬಹುಪತ್ನಿತ್ವವನ್ನು ನಿಷೇಧಿಸಿದಂತೆ ಆಗುತ್ತದೆ ಎನ್ನುವುದು ಆಯೋಗದ ನಂಬಿಕೆ. ಇದು ಯಾವುದೇ ಧರ್ಮದ ವಿರುದ್ಧದ ನಡೆಯಂತೂ ಖಂಡಿತ ಆಗಲಾರದು. ಯಾಕೆಂದರೆ ಇಸ್ಲಾಂಯೇತರ ಧರ್ಮದಲ್ಲಿ ಮಾತ್ರ ಬಹುಪತ್ನಿತ್ವಕ್ಕೆ ನಿಷೇಧವಿದೆ. ಒಂದು ವೇಳೆ ಇಸ್ಲಾಂ ಧರ್ಮದಲ್ಲಿ ಒಬ್ಬ ವ್ಯಕ್ತಿ ತನ್ನ ಎರಡನೇ ಮದುವೆಯನ್ನು ನೋಂದಾವಣೆ ಮಾಡಿಸಲು ಹೋದರೆ ಅದು ಅಲ್ಲಿ ಅಧಿಕಾರಿಗೆ ಗೊತ್ತಾದರೂ ಅದು ತಪ್ಪಾಗುವುದಿಲ್ಲ. ಹೆಣ್ಣು ಮಕ್ಕಳ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರಕಾರ ತರುತ್ತಿರುವ ಈ ಯೋಜನೆಯಿಂದ ನಿಜಕ್ಕೂ ಪ್ರತಿಯೊರ್ವ ಹೆಣ್ಣುಮಗಳಿಗೂ ಸಹಾಯವಾಗಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಸುಲಭವಾಗಿ ದುರುಳರ ಸಂಚಿಗೆ ಬಲಿಯಾಗುವ ಪ್ರಕರಣಗಳು ಜಾಸ್ತಿಯಾಗುತ್ತಿರುವುದರಿಂದ ಅದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಕಾನೂನು ಆಯೋಗಕ್ಕೆ ಸಾಕಷ್ಟು ದೂರುಗಳು ಹರಿದು ಬಂದಿದ್ದವು. ಅದಕ್ಕಾಗಿ ಈ ಬಗ್ಗೆ ಏನಾದರೂ ಮಾಡುವ ಬಗ್ಗೆ ಆಯೋಗ ಸಾಕಷ್ಟು ಸುತ್ತಿನ ಸಭೆ ನಡೆದ ಬಳಿಕ ಈ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಪ್ರತಿಯೊಂದಕ್ಕೂ ಆಧಾರ್ ಜೋಡಿಸುವ ಪ್ರಕ್ರಿಯೆ ಮುಂದುವರೆದಿದ್ದು ಗ್ಯಾಸ್, ಬ್ಯಾಂಕ್, ಪಾನ್ ಕಾರ್ಡ ಬಳಿಕ ಈಗ ಮದುವೆ ನೊಂದಾವಣಿಗೂ ಇದು ಜಾರಿಗೆ ಬರಲಿದೆ.
Leave A Reply