ರಾಹುಲ್ ಗಾಂಧಿ, ಕಾಂಗಿಗಳೇ ಇನ್ನು ಮುಂದೆ ನಿರುದ್ಯೋಗ ಹೆಸರಲ್ಲಿ ಮೋದಿ ಅವರನ್ನು ಟೀಕಿಸುವಂತಿಲ್ಲ!
ದೆಹಲಿ: ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್ಸಿಗರು, ರಾಹುಲ್ ಗಾಂಧಿಯವರದ್ದು ಒಂದೇ ಟೀಕೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಮೋದಿ ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದರು, ಆದರೆ ಉದ್ಯೋಗವನ್ನೇ ಸೃಷ್ಟಿಸಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದರು. ಇದೇ ರಾಹುಲ್ ಗಾಂಧಿ ವಿದೇಶಿ ವಿವಿಯಲ್ಲಿ ಕೂತು ಭಾರತದಲ್ಲಿ ಇಷ್ಟು ನಿರುದ್ಯೋಗ ಇದೆ ಎಂದು ಬೊಂಬಡ ಬಜಾಯಿಸಿದ್ದರು.
ಅದರೆ ನಿರುದ್ಯೋಗ ಸಮಸ್ಯೆ ನಿವಾರಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ತರ ಹೆಜ್ಜೆ ಇಡಲು ಮುಂದಾಗಿದ್ದು, ಮೋದಿ ಅವನನ್ನು ಟೀಕಿಸುವವರಿಗೆ ತಪರಾಕಿ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸಲು ಮಹತ್ತರ ಯೋಜನೆ ರೂಪಿಸಲು ಚಿಂತನೆ ನಡೆಸಿದೆ.
ಹೌದು, 2018ರ ಬಜೆಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಔದ್ಯೋಗಿಕ ನೀತಿ (ಎನ್ಇಪಿ) ಮಂಡಿಸಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ನೀತಿ ಘೋಷಣೆಯಾದರೆ ದೇಶದ ಯುವಕರಿಗೆ ಆರ್ಥಿಕ, ಸಾಮಾಜಿಕ ಹಾಗೂ ಕಾರ್ಮಿಕ ನೀತಿ ಅನ್ವಯ ಹೇರಳವಾಗಿ ಉದ್ಯೋಗ ಲಭ್ಯವಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಔದ್ಯೋಗಿಕ ನೀತಿಯಿಂದ ಉದ್ಯೋಗ ಸೃಷ್ಟಿ, ಉದ್ಯಮಿಗಳ ತೊಡಗುವಿಕೆ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ಸಿಗುವುದರಿಂದ ದೇಶದ ಆರ್ಥಿಕತೆ ಬೆಳವಣಿಗೆ ಹಾಗೂ ಉದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನಲಾಗುತ್ತಿದೆ.
ಈ ನೀತಿಯಿಂದ ಉದ್ಯಮದ ಬೆಳವಣಿಗೆ ಜತೆಗೆ ಪ್ರತಿ ವರ್ಷ ದೇಶದ ಒಂದು ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸುವುದು ಕೇಂದ್ರ ಸರ್ಕಾರದ ಯೋಜನೆಯಾಗಿದೆ.
ದೇಶದಲ್ಲಿ ಪ್ರಸ್ತುತ 15-29ರ ವಯಸ್ಸಿನ ಶೇ.30ರಷ್ಟು ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಇದನ್ನು ತೊಡೆದುಹಾಕುವಲ್ಲಿ ನರೇಂದ್ರ ಮೋದಿ ಅವರು ದಿಡ್ಡ ಹೆಜ್ಜೆ ಇಡಲಿದ್ದಾರೆ ಎಂದು ತಿಳಿದುಬಂದಿದೆ.
Leave A Reply