ಬಿಜೆಪಿ ತೆಗಳುವ ಜಿಗ್ನೇಶ್ ಮೇವಾನಿಗೊಂದಿಷ್ಟು ಪ್ರಶ್ನೆಗಳು…
Posted On December 30, 2017
ಮಾತು ಆಡಿದರೆ ಅರ್ಥ ಇರಬೇಕು. ಲಿಂಗ ಮೆಚ್ಚಿ ಹೌದೌದು ಎನ್ನದಿದ್ದರೂ ನಾಲ್ಕು ಜನರಾದರೂ ಒಪ್ಪಬೇಕು. ಇವನು ಹೇಳುವುದರಲ್ಲಿ ನ್ಯಾಯ ಇದೆ ಎನಿಸಬೇಕು…
ಆದರೆ ಇದಕ್ಕೆ ವಿರುದ್ಧಾರ್ಥಕವಾಗಿ ಹೆಸರು ಸೂಚಿಸುವುದಾದರೆ ಜಿಗ್ನೇಶ್ ಮೇವಾನಿ ಹೆಸರು ಸೂಚಿಸಬಹುದು. ಹೌದು, ಇತ್ತೀಚೆಗಷ್ಟೇ ಗುಜರಾತ್ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿರುವ ಇವರು ಬಾಯಿಬಿಟ್ಟರೆ ಅಭಿವೃದ್ಧಿ ಪ್ರಸ್ತಾಪಿಸದೆ, ಬರೀ ಬಿಜೆಪಿ, ಆರೆಸ್ಸೆಸ್ ವಿರುದ್ಧ ಮಾತನಾಡುತ್ತಾರೆ. ಅದೂ ಹುರುಳಿಲ್ಲದೆ ಮಾತನಾಡುತ್ತಾರೆ.
ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿದ್ದ ಜಿಗ್ನೇಶ್ ಮೇವಾನಿ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಮತಹಾಕಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆಯೇ ದೇಶದಲ್ಲಿ ಹಲವು ದಲಿತರ ಕೊಲೆ, ಅತ್ಯಾಚಾರವಾಗುತ್ತಿದೆ. ಹಾಗಾಗಿ ನಮ್ಮ ಹೋರಾಟ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದಾರೆ. ಹೀಗೆ ಬಿಜೆಪಿ, ಆರೆಸ್ಸೆಸ್ ವಿರುದ್ಧ ಮಾತನಾಡುವ ಜಿಗ್ನೇಶ್ ಮೇವಾನಿಗೆ ಒಂದಷ್ಟು ಪ್ರಶ್ನೆಗಳಿವೆ.
- ದೇಶದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ನಮ್ಮ ಶತ್ರು ಎಂದಿದ್ದೀರಿ. ಆದರೆ ಬಿಜೆಪಿ ಹಾಗೂ ಆರೆಸ್ಸೆಸ್ ದೇಶಕ್ಕೆ ಮಾಡಿದ ಅನ್ಯಾಯವೇನು? ಕಾಂಗ್ರೆಸ್ಸಿನ ಹಾಗೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇಳಿದ್ದಾರೆಯೇ?
- ಬಿಜೆಪಿಯನ್ನು ದೇಶದ್ರೋಹಿ ಎಂಬಂತೆ ಮಾತನಾಡಿದ್ದೀರಿ. ಹಾಗಾದರೆ ಬಿಜೆಪಿಯೇನು ಸಿಕ್ಕರವರನ್ನು ಕೊಂದಿದೆಯೇ? ಇದು ದೇಶದ್ರೋಹಿ ಪಕ್ಷವೇ? ಪಿಎಫ್ಐ ಸಂಘಟನೆಯಂತೆ ದೇಶದ್ರೋಹದ, ಬಾಂಬ್ ಸ್ಫೋಟದ ಆರೋಪ ಹೊತ್ತಿದೆಯೇ?
- ನಾನು ಯಾವುದೇ ಪಕ್ಷದ ಪರದ ಪ್ರಚಾರ ಮಾಡುವುದಿಲ್ಲ ಎಂದು ಚಿಕ್ಕಮಗಳೂರಿನ ಸಮಾರಂಭದಲ್ಲಿ ಮಾತನಾಡಿದ್ದೀರಿ. ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ ಎನ್ನುವ ನೀವು, ಕರ್ನಾಟಕದಲ್ಲಿ ಬಿಜೆಪಿಗೆ ಮತಹಾಕಬೇಡಿ ಎಂಬುದು ಯಾವ ನಿಲುವು? ಕರ್ನಾಟಕದಲ್ಲಿ ಬಿಜೆಪಿಗೆ ಮತಹಾಕಬೇಡಿ ಎಂದರೆ, ಇನ್ನೊಂದು ಪಕ್ಷಕ್ಕೆ ಮತ ಹಾಕಿ ಎಂದಾಯಿತಲ್ಲವೇ? ಕರ್ನಾಟಕದಲ್ಲಿ ಬಿಜೆಪಿಗೆ ವಿರುದ್ಧ ಪಕ್ಷ ಯಾವುದು ಎಂಬುದು ನಿಮಗೆ ಗೊತ್ತಿಲ್ಲವೇ?
- ಗೌರಿ ಲಂಕೇಶ್ ಇರಬೇಕಿತ್ತು. ವಿಜಯಪುರದ ಬಾಲಕಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದೀರಿ. ದೇಶದಲ್ಲಿ ದಲಿತರ ಮೇಲೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೆರಳು ಮಾಡುತ್ತೀರಿ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದಮೇಲೆ ಎಷ್ಟು ದಲಿತರ ಹತ್ಯೆಯಾಗಿಲ್ಲ. ಸಂಶೋಧಕ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಇಷ್ಟೆಲ್ಲ ಹತ್ಯೆಯಾದರೂ ನೀವೇಕೆ ಕೇಂದ್ರ ವಿರುದ್ಧ ಬೆರಳು ಮಾಡುತ್ತೀರಿ? ಏಕೆ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುವುದಿಲ್ಲ?
- ಮೋದಿ ಅವರು ಪ್ರಧಾನಿಯಾದ ಮೇಲೆ ಏನಾಗ್ತಿದೆ ಗೊತ್ತಿದೆ ಎಂದಿದ್ದೀರಿ? ಆದರೆ ನೀವು ಇಂದಿರಾ ಗಾಂಧಿ ಜಾರಿಗೆ ತಂದ ತುರ್ತು ಪರಿಸ್ಥಿತಿ, ಸಿಖ್ಖರ ಹತ್ಯಾಕಾಂಡದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಯಾಕೆ ಹೀಗೆ ಇಬ್ಬಂದಿತನದಿಂದ ಮಾತನಾಡುತ್ತೀರಿ? ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಜಾರಿಗೆ ತಂದ ಯೋಜನೆ, ಕೈಗೊಂಡ ದಿಟ್ಟ ನಿರ್ಧಾರದ ಬಗ್ಗೆ ಏನೆನ್ನುತ್ತೀರಿ?
- ಬಿಜೆಪಿ ಹಾಗೂ ಆರೆಸ್ಸೆಸ್ ಬಗ್ಗೆ ಇಷ್ಟೆಲ್ಲ ಮಾತನಾಡುತ್ತೀರಲ್ಲ, ಸುಖಾಸುಮ್ಮನೇ ಬಿಜೆಪಿಯವರೊಬ್ಬರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದರೇ ದೇಶದ ಜನ? ದೇಶದ 19 ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು ಧೂಳೀಪಟ ಮಾಡಿ ಜನ ಬಿಜೆಪಿಗೆ ಬೆಂಬಲಿಸಿದರೇ? ಹಾಗಾದರೆ ಬಿಜೆಪಿಯನ್ನು ಬೆಂಬಲಿಸಿದ ಜನ ಮೂರ್ಖರೇ? ಅಷ್ಟಕ್ಕೂ ನೀವು ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದೀರಿ? ಇನ್ನಾದರೂ ಮಾತನಾಡುವ ಮುಂಚೆ ಯೋಚಿಸಿ.
- Advertisement -
Trending Now
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿಟಿ ರವಿ ಆ "ಶಬ್ದ" ಹೇಳಿದ್ದು ಹೌದಾ!?
December 19, 2024
ವಿಜಯ ಮಲ್ಯ, ನೀರವ್ ಮೋದಿ ಸೇರಿ 22,280 ಕೋಟಿ ರೂ ಬಾಕಿ ವಸೂಲಿ - ನಿರ್ಮಲಾ
December 18, 2024
Leave A Reply