• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಸಿದ್ದರಾಮಯ್ಯನವರ ಅಭಿವೃದ್ಧಿ ಬತ್ತಳಿಕೆ ಖಾಲಿ, ಮೋದಿ ತೆಗಳಿಕೆಯದ್ದೇ ಖಯಾಲಿ

ಸಂತೋಷ್ ಹೊನ್ನೆನಾಯಕನಹಳ್ಳಿ, ಮೈಸೂರು Posted On January 7, 2018
0


0
Shares
  • Share On Facebook
  • Tweet It

ನರೇಂದ್ರ ದಾಮೋದರ ದಾಸ್ ಮೋದಿ…

ಈ ಹೆಸರು ಕೇಳಿದೊಡನೇ  ದೇಶವಲ್ಲದೇ ವಿಶ್ವದ ನಾಯಕರೊಮ್ಮೆ ಭಾರತದತ್ತ ತಮ್ಮ ಚಿತ್ತವನ್ನು ಹರಿಸುತ್ತಾರೆ. ಈ ಪುಣ್ಯಾತ್ಮ ಏನು ಮಾತಾಡ್ತಾನೆ, ಏನು ಕೆಲಸ ಮಾಡ್ತಾನೆ, ಆತನ ವೇಗಕ್ಕೆ ನಾವೆಂದು ಹೊಂದಿಕೊಳ್ಳುವುದು ಎಂದು ಯೋಚಿಸುತ್ತಾರೆ. ನೋಟು ಬ್ಯಾನ್ ಮಾಡಿ ಜನರನ್ನು ಬ್ಯಾಂಕ್ ಮುಂದೆ ನಿಲ್ಲಿಸಿದರೂ ಜನರು ಇವರ ದೂರದೃಷ್ಟಿಯ ನೀತಿಗೆ ಬೆಂಬಲಿಸಿ, ಸಾಲು ಸಾಲು ರಾಜ್ಯಗಳಲ್ಲಿ ಗೆಲುವು ಸಾಧಿಸಿ, ಮುಂದುವರಿಸಿ ಮೋದಿ ನಿಮ್ಮ ಕಾರ್ಯ ನಾವು ನಿಮ್ಮ ಜತೆಗಿದ್ದೇವೆ ಎಂಬ ಭರವಸೆ ನೀಡುತ್ತಾರೆ.

ಜಿಎಸ್ ಟಿ, ಸರ್ಜಿಕಲ್ ಸ್ಟ್ರೈಕ್, ಜನಧನ್ ಯೋಜನಾ, ಮುದ್ರಾ ಯೋಜನೆ, ಕೃಷಿ ಸಿಂಚಾಯಿ ಯೋಜನೆ ಮೂಲಕ ಜಾತಿ, ಮತ ಪಂಥವನ್ನು ಮೆಟ್ಟಿ ನಿಂತ ಹಲವು ಯೋಜನೆಗಳನ್ನು ಜಾರಿ ಮಾಡಿ ಅಭಿವೃದ್ಧಿಯತ್ತ ಚಿತ್ತ ಹರಿಸುತ್ತಾರೆ. ವಿಶ್ವರಾಷ್ಟ್ರಗಳನ್ನು ಸುತ್ತಿ ಭಾರತದ ತಾಕತ್ತು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ.

ಇನ್ನು ಅವರು ಪ್ರಧಾನಿ ಹುದ್ದೆಗೆ ಏರಿರುವುದು ಕೂಡ ಗುಜರಾತ್ ಎಂಬ ರಾಜ್ಯವನ್ನು ವಿಶ್ವಕ್ಕೆ ಮಾದರಿಯಾಗಿ ನಿರ್ಮಿಸಿದ ಮೂಲಕ ಎಂಬುದು ಗಮನಾರ್ಹ

ಆದರೆ ಕಳೆದ ನಾಲ್ಕುವರೆ ವರ್ಷಗಳಿಂದ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯವನ್ನು ಅಭಿವೃದ್ಧಿಯ ವಿಷಯದಲ್ಲಿ ಇದುವರೆಗೆ ಒಂದು ಭಾರಿಯೂ ವಿದೇಶ, ದೇಶ, ರಾಜ್ಯ ಬಿಡಿ ಹಳ್ಳಿಗಳ ಜನರ ಬಾಯಲ್ಲಿ ಒಂದು ಮಾತು ಬರುತ್ತಿಲ್ಲ. ಯಾಕೆಂದರೆ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಹೆಸರನ್ನು ಹಿಂದೂಗಳ ಮಾರಣ ಹೋಮ ನಡೆಸುವುದು, ಮುಸ್ಲಿಮರ ತುಷ್ಟೀಕರಣದ ರಾಜಕಾರಣ ಮಾಡುವುದು, ಮಲ್ಲಿಕಾರ್ಜುನ್ ಬಂಡೆ, ಡಿಕೆ ರವಿ, ಗಣಪತಿ, ಶಿಖಾರಂತ ನಿಷ್ಠಾವಂತ ಅಧಿಕಾರಿಗಳನ್ನು ಮಟ್ಟಹಾಕುವುದರಲ್ಲೇ ಸದಾ ಬ್ಯುಸಿಯಾಗಿರುತ್ತಾರೆ. ಇನ್ನು ಇವರಿಗೆ ಬೇರೆ ಮಾತೆಲ್ಲಿಂದ ಬರಬೇಕು.

ಸಿದ್ದರಾಮಯ್ಯ ಅವರು ಅಭಿವೃದ್ಧಿಯೆಂದರೆ ತಮ್ಮ ಸುತ್ತಮುತ್ತಲು ಇರುವವರ ಏಳಿಗೆ, ತಮ್ಮ ಸಚಿವರ ಅಭ್ಯುದ್ಯಯ ಮಾತ್ರವೇ ಎಂಬ ಸ್ಪಷ್ಟತೆ ನಾಲ್ಕು ವರೆ ವರ್ಷದಲ್ಲಿ ಸಿದ್ದರಾಮಯ್ಯ ಸಾಬೀತುಪಡಿಸಿದ್ದಾರೆ.

ಸಿದ್ದರಾಮಯ್ಯಗೆ ತಾವು ಮಾಡಿದ ಅಭಿವೃದ್ಧಿ ಮೇಲೆ ಭರವಸೆ ಇಲ್ಲವೇ..?

ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ನವಕರ್ನಾಟಕ ನಿರ್ಮಾಣ ಎಂಬ ಹೆಸರಲ್ಲಿ ಸರ್ಕಾರಿ ಯಂತ್ರವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ವಕ್ತಾರನಂತೆ ವರ್ತಿಸುತ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಇದುವರೆಗೆ ನಡೆಸಿರುವ ನವಕರ್ನಾಟಕ ನಿರ್ಮಾಣದ ಪ್ರತಿ ಸಮಾವೇಶದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳುವುದು, ಟೀಕಿಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ಆದರೆ ಅವರ ಬಳಿ ರಾಜ್ಯದಲ್ಲಿ ನಾಲ್ಕುವರೆ ವರ್ಷದಲ್ಲಿ ಮಾಡಿರುವ ಒಂದೇ ಒಂದು ಗಮನಾರ್ಹ ಯೋಜನೆ ಇಲ್ಲ ಎಂಬುದು ಅವರ ಮಾತುಗಳಲ್ಲೇ ಸಾಬೀತು ಪಡಿಸುತ್ತಿದ್ದಾರೆ.

ಜನರನ್ನು ಮಾತಿನಲ್ಲೇ ಮರಳು ಮಾಡಲು ಸದಾ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಗೇಲಿ ಮಾಡುವುದು, ಕಾರ್ಯಕರ್ತರಿಂದ ಶಿಳ್ಳೆ, ಚಪ್ಪಾಳೆ ಹೊಡೆಸಿಕೊಳ್ಳುವುದನ್ನೇ ಖಯಾಳಿ ಮಾಡಿಕೊಂಡಿದ್ದಾರೆ.

ಆಡಳಿತದ ಕೊನೆ ಅಂಚಿನಲ್ಲಿರುವ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ, ತಮ್ಮ ಸರ್ಕಾರದ ಶೂನ್ಯ ಅಭಿವೃದ್ಧಿಯನ್ನು ಜನರಿಂದ ಮರೆಮಾಚಲು ಕಸರತ್ತು ನಡೆಸುತ್ತಿದ್ದಾರೆ ಎಂಬುದು ಅವರ ಭಾಷಣಗಳಲ್ಲಿರುವ ಪದಬಳಕೆ, ವಿಚಾರದಲ್ಲೇ ಪದೇ ಪದೆ ಸಾಬೀತಾಗುತ್ತಿದೆ… ವೇದಿಕೆ ಮೇಲೆ ನೌಟಂಕಿ ಮಾಡುವ ಸಿದ್ದರಾಮಯ್ಯನವರನ್ನು, ಹಿಂದೂಗಳ ಮಾರಣ ಹೋಮ ನಡೆದರೂ ಕನಿಕರ ತೋರದ ಸಿದ್ದರಾಮಯ್ಯನವರಿಗೆ, ಅಭಿವೃದ್ಧಿಯ ಗಂಧ ಗಾಳಿ ತೋರಿಸದೇ ಐದು ವರ್ಷ ಕೈ ಕಮಾಂಡ್ ಆದೇಶ ಪಾಲಿಸಿ, ರಾಜ್ಯದ ಜನರ ಕಣ್ಣಿಗೆ ಮಣೆರೆಚಿದ ಸಿದ್ದರಾಮಯ್ಯನವರಿಗೆ ಪಾಠ ಕಲಿಸಬೇಕೋ, ಬೇಡವೋ..?

0
Shares
  • Share On Facebook
  • Tweet It




Trending Now
ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
ಸಂತೋಷ್ ಹೊನ್ನೆನಾಯಕನಹಳ್ಳಿ, ಮೈಸೂರು January 2, 2026
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
ಸಂತೋಷ್ ಹೊನ್ನೆನಾಯಕನಹಳ್ಳಿ, ಮೈಸೂರು January 1, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
  • Popular Posts

    • 1
      ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • 2
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 3
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search